ಮೈಸೂರು: ತಾಯಿ ಚಾಮುಂಡೇಶ್ವರಿ (Chamundeshwari) ಆಶೀರ್ವಾದ ನನ್ನ ಮೇಲೆ ಸದಾ ಇರುತ್ತೆ. ಆ ದೇವರ ಆಶೀರ್ವಾದ ಇರುವುದರಿಂದಲೇ ಇಷ್ಟು ವರ್ಷದಿಂದ ರಾಜಕೀಯದಲ್ಲಿ ಉಳಿದಿರುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು (Mysuru Airport) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸದಾ ಇರುತ್ತೆ. ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಇಷ್ಟೊಂದು ಬಾರಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಸಿಕ್ಕಿದೆ. ಚಾಮುಂಡೇಶ್ವರಿ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತೆ. ಆ ದೇವರ ಆಶೀರ್ವಾದ ಇಲ್ಲ ಅನ್ನುವುದೇ ಇಲ್ಲ. ಆಶೀರ್ವಾದ ಇರುವುದರಿಂದಲೇ ಇಷ್ಟು ವರ್ಷದಿಂದ ರಾಜಕೀಯದಲ್ಲಿ ಉಳಿದಿರುವುದು ಅಂತ ತಿಳಿಸಿದ್ದಾರೆ.
Advertisement
Advertisement
ಸಮಾಜದಲ್ಲಿ ಹೊಗಳುವವರೂ ಇರುತ್ತಾರೆ, ತೆಗಳುವವರೂ ಇರುತ್ತಾರೆ. ಆದ್ರೆ ಇಬ್ಬರ ನಡುವೆ ಆರೋಗ್ಯಕರ ಚರ್ಚೆ ಆಗಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ದಸರಾ ಸಂಭ್ರಮದಲ್ಲಿದ್ದ ಮೈಸೂರು ರಾಜಪರಿವಾರಕ್ಕೆ ಹೊಸ ಅತಿಥಿಯ ಆಗಮನ – 2ನೇ ಮಗುವಿಗೆ ಜನ್ಮ ನೀಡಿದ ತ್ರಿಷಿಕಾ
Advertisement
ಇನ್ನೂ ಪತ್ರಿಕೆಗಳಲ್ಲಿ ಸರ್ಕಾರದಿಂದ ಜಾಹೀರಾತು ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ದಸರಾ ಅಂದ್ರೆ ದುಷ್ಟ ಶಕ್ತಿಗಳ ಸಂಹಾರ. ಶಿಷ್ಟ ಜನರ ರಕ್ಷಣೆ ಅದೇ ದಸರಾ. ವಿಜಯನಗರದ ಅರಸರು ಜಯದ ಸಂಕೇತವಾಗಿ ಆಚರಣೆ ಮಾಡಿದ್ರು. ಮೈಸೂರು ಅರಸರು ಅದನ್ನ ಮುಂದುವರಿಸಿಕೊಂಡು ಬಂದರು. ಇವತ್ತು ಅದೇ ಸಂಪ್ರದಾಯ ಮುಂದುವರಿದಿದೆ. ಜಾಹಿರಾತನ್ನು ಇವತ್ತಿಗೆ ನೀವು ಹೇಗೆ ವ್ಯಾಖ್ಯಾನ ಮಾಡ್ತಿರಾ ಹಾಗೆ. ನೀವುಗಳು ಕೂಡ ಪರ, ವಿರೋಧವಾಗಿ ವ್ಯಾಖ್ಯಾನ ಮಾಡ್ತೀರಿ ಎಂದು ಕುಟುಕಿದ್ದಾರೆ.
Advertisement
ಜಾಹೀರಾತಿನ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಪೋಕ್ಸೋ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಮೊದಲು ಅವರನ್ನು ಪಾರ್ಲಿಮೆಂಟ್ ಬೋರ್ಡ್‌ನಿಂದ ಕಿತ್ತು ಹಾಕಲು ಹೇಳಿ. ಕೋರ್ಟ್ ಇಲ್ಲದಿದ್ದರೇ ಅವರು ಜೈಲಿನಲ್ಲಿ ಇರಬೇಕಿತ್ತು ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಟೆಸ್ಲಾದಿಂದ ಸ್ಟೀರಿಂಗ್ ವೀಲ್ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ