ಬೆಂಗಳೂರು: ನಾನು ಸಿಗರೇಟ್ ಸೇದುತ್ತಿದ್ದೆ. ಆಯಸ್ಸು ಕಡಿಮೆ ಆಗುತ್ತೆ ಅಂತ ಸಿಗರೇಟ್ ಸೆದೋದು ಬಿಟ್ಟೆ ಅಂತ ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮದೇ ಜೀವನದ ಘಟನೆ ಹೇಳಿ ಜನರಿಗೆ ಜಾಗೃತಿ ಮೂಡಿಸಿದ್ರು.
ವಿಧಾನಸೌಧದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜನರಿಗೆ ಆಹಾರ ಪದ್ದತಿ ಮತ್ತು ಜೀವನ ಶೈಲಿ ಬದಲಾವಣೆ ಮಾಡಿಕೊಂಡರೇ ರೋಗ ಕಂಟ್ರೋಲ್ ಮಾಡಬಹುದು ಅಂತ ಸಲಹೆ ಕೊಟ್ಟರು. ನಾನು ಹಿಂದೆ ಸಿಗರೇಟ್ ಸೇದುತ್ತಿದ್ದೆ. ಸಿಗರೇಟ್ ಸೇದಿದ್ರೆ ಆಯಸ್ಸು ಕಡಿಮೆ ಆಗುತ್ತೆ ಅಂತ ಹೇಳಿದ್ರು. ಅದಕ್ಕೆ ಸಿಗರೇಟ್ ಸೇದೋದು ಬಿಟ್ಟೆ ಎಂದರು.
Advertisement
Advertisement
1987 ರಲ್ಲಿ ಸಿಗರೇಟ್ ಬಿಟ್ಟೆ. ಸಿಗರೇಟ್ ಸೇದಿದ್ದರಿಂದ ನನಗೆ ಹಾರ್ಟ್ ಪ್ರಾಬ್ಲಂ ಶುರುವಾಯ್ತು. 2000 ರಲ್ಲಿ ಆಂಜಿಯೋಪ್ಲ್ಯಾಸ್ಟಿ (Angioplasty) ಮಾಡಿಸಿಕೊಂಡೆ. ಹಾರ್ಟ್ ಸಮಸ್ಯೆ ಜೊತೆಗೆ ಡಯಾಬಿಟಿಕ್ ಕೂಡಾ ಸೇರಿಕೊಂಡಿದೆ. ನಮ್ಮ ಆಹಾರ ಪದ್ಧತಿ, ಜೀವನ ಶೈಲಿ ಬದಲಾವಣೆ ಮಾಡಿಕೊಂಡರೇ ಅನೇಕ ರೋಗ ಕಂಟ್ರೋಲ್ ಆಗುತ್ತದೆ ಅಂತ ಜನರಿಗೆ ಸಿಎಂ ಸಲಹೆ ಕೊಟ್ಟರು. ಇದನ್ನೂ ಓದಿ: ವಕೀಲ ದೇವರಾಜೇ ಗೌಡಗೆ ಜಾಮೀನು ಮಂಜೂರು
Advertisement
Advertisement
ವೈದ್ಯ ವೃತ್ತಿ ಪವಿತ್ರವಾದ ವೃತ್ತಿ. ಅದಕ್ಕೆ ವೈದ್ಯೋ ನಾರಾಯಣೋ ಹರಿ ಅಂತ ಕರೆಯುತ್ತಾರೆ. ವೈದ್ಯರು ದೇವರಿಗೆ ಸಮಾನರು. ಸಮಾಜದ ಸ್ವಾಸ್ಥ್ಯ ಕಾಪಾಡೋರು ವೈದ್ಯರು. ಎಲ್ಲರ ಆರೋಗ್ಯ ರಕ್ಷಣೆ ಮಾಡ್ತಾರೆ ವೈದ್ಯರು. ವೈದ್ಯಕೀಯ ವೃತ್ತಿ ಬಹಳ ಸ್ಮರಣೆ ಮಾಡಿಕೊಳ್ಳಬೇಕಾಗಿದ್ದು ಕೊರೊನಾ ಸಮಯದಲ್ಲಿ ನೀವು ಮಾಡಿದ ಸೇವೆ. ಕೊರೊನಾ ಸಮಯದಲ್ಲಿ ನೀವು ಹೊರಗೆ ಬಂದು ರೋಗಿಗಳಿಗೆ ಆರೋಗ್ಯ ರಕ್ಷಣೆ ಮಾಡಿದ್ದೀರಾ. ನಿಮ್ಮ ಸೇವೆ ಮರೆಯೋಕೆ ಸಾಧ್ಯವಿಲ್ಲ ಅಂತ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವೈದ್ಯರಿಗೆ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಸೇರಿ ಹಲವರು ಭಾಗಿಯಾಗಿದ್ದರು.