ಮೈಸೂರು: ಚಿತ್ರದುರ್ಗದ ಮೊಳಕಾಲ್ಮೂರು ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆದಿಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿ ಶಾಸಕರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಟಿಕೆಟ್ ಕೊಡಲು ಸಮಯ ಮಿಂಚಿಹೋಗಿದೆ. ಅವರು ನನ್ನನ್ನು ಭೇಟಿ ಕಾಂಗ್ರೆಸ್ ಟಿಕೆಟ್ ಕೊಡಿಸುವಂತೆ ಕೇಳಿದ್ದಾರೆ. ಆದ್ರೆ ನಾನು ಈಗ ಸಾಧ್ಯವಿಲ್ಲ, ಕಷ್ಟ ಆಗುತ್ತೆ ಅಂತ ಹೇಳಿದ್ದೇನೆ ಅಂದ್ರು. ಇದನ್ನೂ ಓದಿ: ಕುತೂಹಲ ಮೂಡಿಸಿದೆ ಬಿಜೆಪಿ ಶಾಸಕ ತಿಪ್ಪೇಸ್ವಾಮಿ- ಸಿಎಂ ಭೇಟಿ
Advertisement
ಇದೇ ವೇಳೆ ಚನ್ನಪಟ್ಟಣದಲ್ಲಿ ಹೆಚ್ ಎಂ ರೇವಣ್ಣ ಬದಲು ಸಿದ್ದರಾಮಯ್ಯರೇ ಸ್ಪರ್ಧೆ ಮಾಡಲಿ ಎಂಬ ಹೆಚ್‍ಡಿಕೆ ಸವಾಲು ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಪತ್ನಿ ಚನ್ನಪಟ್ಟಣದಲ್ಲಿ ಸೋತರು. ಆಗ ಚಾಲೆಂಜ್ ಎಲ್ಲಿ ಹೋಗಿತ್ತು ಅಂತ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.
Advertisement
ಕುಮಾರಸ್ವಾಮಿಯಂತೆ ನಾನು ಕೆಳಮಟ್ಟಕ್ಕೆ ಇಳಿದು ಸವಾಲು ಹಾಕಲ್ಲ. ಅವರು ಚಿಕ್ಕಬಳ್ಳಾಪುರದಲ್ಲಿ ಯಾಕೇ ಸೋತರು. ಚಾಮುಂಡೇಶ್ವರಿಯಲ್ಲಿ ಬಂದು ಪ್ರಚಾರ ಮಾಡುವ ಅವರಿಗೆ ಕ್ಷೇತ್ರದ ಜೊತೆ ಒಳ್ಳೆ ಸಂಬಂಧ ಇದೇಯಾ? 2006ರಲ್ಲಿ ಬಂದಿದ್ದು ಬಿಟ್ಟರೆ ಇವತ್ತೆ ಬರ್ತಿರೋದು. ಮುಖ್ಯಮಂತ್ರಿಯಾಗಿದ್ದಾಗ ಕೆಲಸ ಮಾಡದೆ, ಈಗ ಬಂದು ಗ್ರಾಮಗಳನ್ನ ದತ್ತು ತೆಗೆದುಕೊಂಡರೆ ಆಗುತ್ತಾ? ಮೊದಲು ರಾಮನಗರವನ್ನ ದತ್ತು ತೆಗೆದುಕೊಳ್ಳಲಿ ಅಂತ ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮತಗಳು ಕುಮಾರಸ್ವಾಮಿ ಅಥವಾ ನನ್ನ ಜೇಬಿನಲ್ಲಿಲ್ಲ- ಸಿಎಂ ತಿರುಗೇಟು