– ಬಿಜೆಪಿಯವರಿಗೆ ಗೂಬೆ ಕೂರಿಸುವುದೇ ಕಸುಬು: ಸಿಎಂ ಕಿಡಿ
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, 19ನೇ ಕ್ರಸ್ಟ್ ಗೇಟ್ ವೀಕ್ಷಣೆ ಮಾಡಿದರು. ಸಿಎಂ ಆಗಮನದ ಹಿನ್ನೆಲೆ ಜಲಾಶಯದ ಬಳಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಒಬ್ಬರು ಎಸ್ಪಿ, ಇಬ್ಬರು ಅಡಿಷನಲ್ ಎಸ್ಪಿ ಸೇರಿದಂತೆ 400ಕ್ಕೂ ಸಿಬ್ಬಂದಿಯನ್ನ ನಿಯೋಜಿಸಲಾಗಿತ್ತು. ಅಲ್ಲದೇ ಮುಖ್ಯ ದ್ವಾರದ ಮುಂದೆ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೂ ವ್ಯವಸ್ಥೆ
ಟಿಬಿ ಡ್ಯಾಂನ 19ನೇ ಕ್ರಸ್ಟ್‌ಗೇಟ್ ವೀಕ್ಷಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ 1952-53ರಲ್ಲಿ ಪೂರ್ಣಗೊಂಡಿತ್ತು. ಆಗಿನಿಂದ ಏನೂ ತೊಂದರೆ ಆಗಿರಲಿಲ್ಲ. ಈಗ ತೊಂದರೆಯಾಗಿದೆ. 19ನೇ ಕ್ರಸ್ಟ್ ಗೇಟ್ ಚೈನ್ ಕಟ್ಟಾಗಿದ್ದರಿಂದ ಸಮಸ್ಯೆಯಾಗಿದೆ. ಈಗ ಗೇಟ್ ರಿಪೇರಿ ಮಾಡೋದಕ್ಕೆ ಸುಮಾರು 60 ಟಿಎಂಸಿನಷ್ಟು ನೀರನ್ನ ಹೊರಗೆ ಬಿಡಬೇಕು. ಆದ್ರೆ ಇನ್ನೂ ಅಕ್ಟೋಬರ್ ವರೆಗೆ ಮಳೆ ಇರೋದ್ರಿಂದ ಈಗ ಹೊರಗೆ ಹೋದಷ್ಟು ನೀರು ತುಂಬುವ ಸಾಧ್ಯತೆ ಇದೆ. ಈ ವಿಶ್ವಾಸವನ್ನು ನಾವೆಲ್ಲರೂ ಇಟ್ಟುಕೊಳ್ಳೋಣ ಎಂದು ನುಡಿದರು. ಇದನ್ನೂ ಓದಿ: ಜಲಾಶಯ ನಿರ್ವಹಣೆಗೆ ಕೇಂದ್ರ ಸಮಿತಿ ಸಲಹೆ ಧಿಕ್ಕರಿಸಿದೆ ರಾಜ್ಯ ಸರ್ಕಾರ: ಜೋಶಿ ಆರೋಪ
ಈಗ ಕ್ರಸ್ಟ್ ಗೇಟ್ ರಿಪೇರಿ ಮಾಡಬೇಕು ಅಂದ್ರೆ, ನೀರು ಹೊರಕ್ಕೆ ಬಿಡಬೇಕು. ಇದರಿಂದ ರೈತರಿಗೆ ಮೊದಲ ಬೆಳೆಗೆ ಯಾವುದೇ ತೊಂದರೆ ಆಗಲ್ಲ. ಅಲ್ಲದೇ ಹವಾಮಾನ ಮುನ್ಸೂಚನೆ ಪ್ರಕಾರ ಅಕ್ಟೋಬರ್ ವರೆಗೆ ಮಳೆ ಇರುವುದರಿಂದ ಈಗ ಹರಿದಷ್ಟೂ ನೀರು ಡ್ಯಾಂಗೆ ತುಂಬುವ ಸಾಧ್ಯತೆಯಿದೆ. ನಮ್ಮದು ರೈತಪರ ಸರ್ಕಾರ, ರೈತರಿಗೆ ತೊಂದರೆಯಾಗೋದಕ್ಕೆ ಬಿಡಲ್ಲ ಅಂತ ಸಿಎಂ ಆಶ್ವಾಸನೆ ನೀಡಿದರು. ಇದನ್ನೂ ಓದಿ: ಜಲಾಶಯ ನಿರ್ವಹಣೆಗೆ ಕೇಂದ್ರ ಸಮಿತಿ ಸಲಹೆ ಧಿಕ್ಕರಿಸಿದೆ ರಾಜ್ಯ ಸರ್ಕಾರ: ಜೋಶಿ ಆರೋಪ
ಇದೇ ವೇಳೆ ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿದ ಸಿಎಂ, ಜಲಾಶಯಗಳ ನಿರ್ವಹಣೆಗೆ ಒಂದು ಬೋರ್ಡ್ ಇದೆ. ಅದು ಕೇಂದ್ರದ ಸುಪರ್ದಿಗೆ ಬರುತ್ತೆ. ಈ ಬೋರ್ಡ್‌ನಲ್ಲಿ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಅಧಿಕಾರಿಗಳು ಇದ್ದಾರೆ. ಆದ್ರೆ ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ಯಾರ ಮೇಲೂ ತಪ್ಪು ಹೊರಿಸಲ್ಲ. ಸರಿಪಡಿಸುವ ಕೆಲಸ ಆಗುತ್ತೆ ಎಂದರು.
ಮುಂದುವರಿದು, ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡ್ತಿದ್ದಾರೆ. ಕ್ರಸ್ಟ್ ಗೇಟ್ ಕಟ್ಟಾಗಿ ನೀರು ಹೊರಗೆ ಹೋಗ್ತಿದೆ. ಸರ್ಕಾರದ ಹೊಣೆಗೇಡಿತನ ಅಂದ್ರೆ ಏನರ್ಥ? ಬಿಜೆಪಿಯವರಿಗೆ ಗೂಬೆ ಕೂರಿಸುವುದೇ ಕಸುಬು, ನಾವು ರೈತರ ಪರವಾಗಿದ್ದೇವೆ. ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: Bengaluru | ಬಿಎಂಟಿಸಿ ವೋಲ್ವೋ ಬಸ್‌ನಿಂದ ಸರಣಿ ಅಪಘಾತ; ನಡುರಸ್ತೆಯಲ್ಲೇ ವಾಹನ ಸವಾರರ ಚಿರಾಟ!