ಯಾದಗಿರಿ: ಹಿಮಾಚಲ ಪ್ರದೇಶ ಹಾಗೂ ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷದ ಫಲಿತಾಂಶ ಸುಧಾರಿಸಿದೆ. ಗೆದ್ದು ಸೋತಿದ್ದೇವೆ, ರಾಹುಲ್ ಗಾಂಧಿ ಅವರಿಗೆ ಜನರ ಬೆಂಬಲ ಸಿಕ್ಕಿದೆ. ಈ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪ್ರಭಾವ ಬಿರಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಚುನಾವಣಾ ಫಲಿತಾಂಶ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂಗಳ ಬಗ್ಗೆ ಈಗಲೂ ಶಂಕೆಯಿದೆ. ಕಳೆದ ಬಾರಿಗೆ ಹೋಲಿಸಿದರೆ ಕಾಂಗ್ರೆಸ್ ಫಲಿತಾಂಶ ಸುಧಾರಿಸಿದೆ. ಸಿಬಿಐ ದುರ್ಬಳಕೆ, ಐಟಿ ದಾಳಿ ಮೂಲಕ ಭಯ ಬೀಳಿಸುವ ಯತ್ನ ನಡೆಯುತ್ತಿದೆ. ಗುಜರಾತ್ ಕಾಂಗ್ರೆಸ್ ನಲ್ಲಿ ಪ್ರಾದೇಶಿಕ ಮಟ್ಟದ ನಾಯಕರ ಅವಶ್ಯಕತೆಯಿದೆ ಅಂದ ಸಿಎಂ, ಇದೇ ವೇಳೆ ಪ್ರಧಾನಿ ಮೋದಿ ಹಾಗೂ ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸಿದ್ರು.
Advertisement
Advertisement
ಬಿಜೆಪಿ ಭ್ರಮೆಯಲ್ಲಿದೆ. ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷದ ನೆಟ್ ವರ್ಕ ಕೊರತೆ ಎದ್ದು ಕಾಣುತ್ತಿದೆ. ಶಂಕರ್ ಸಿಂಗ್ ವಘೇಲಾ ಪಕ್ಷ ಬಿಟ್ಟು ಹೋಗಿದ್ದು ಪರಿಣಾಮ ಬೀರಿದೆ. ರಾಜ್ಯದಲ್ಲಿ ಮೋದಿ ಮತ್ತು ಶಾ ತಂತ್ರಗಾರಿಕೆ ನಡೆಯಲ್ಲ. ನಾವೇ ಸ್ಪಷ್ಟ ಬಹುಮತದಿಂದ ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಜೆಡಿಎಸ್ ಜತೆ ಹೊಂದಾಣಿಕೆ ಪ್ರಶ್ನೆ ಬರಲ್ಲ. ಜೆಡಿಎಸ್ ಕಳೆದ ಸಲಕ್ಕಿಂತ ಕಡಿಮೆ ಸ್ಥಾನ ಗೆಲ್ಲುತ್ತೆ. ಜನರು ಬಿಜೆಪಿ ಪರವಾಗಿಲ್ಲ ಎಂದು ಭಾನುವಾರ ನಡೆದ ರಾಜ್ ನಾಥ್ ಸಿಂಗ್ ಸಭೆಯಲ್ಲಿ ಖಾಲಿ ಕುರ್ಚಿಗಳೇ ಸಾಕ್ಷಿ ಅಂದ್ರು.
Advertisement
ಗುಜರಾತ್ ನಲ್ಲಿ ಮೋದಿ ಫಲಿತಾಂಶ ಕುಗ್ಗಿದೆ. ಅಲ್ಲಿನ ಜನ ಈಗಲೂ ನೋಟ್ ಬ್ಯಾನ್ ಹಾಗೂ ಜಿಎಸ್ ಟಿ ಒಪ್ಪಿಲ್ಲ. ಅಲ್ಲಿ ಮೋದಿ ಪ್ರಭಾವವಿದ್ದರೇ, ಕಾಂಗ್ರೆಸ್ ಸಂಪೂರ್ಣವಾಗಿ ಸೋೀಲಬೇಕಿತ್ತಲ್ಲವೇ? ಮತಗಳ ಶೇಖಡವಾರು ನೋಡಿದಾಗ ಪಕ್ಷಗಳು ಪಡೆದ ಮತಗಳ ಬಗ್ಗೆ ತಿಳಿಯುತ್ತದೆ. ನಾವು ಜನರ ತೀರ್ಪನ್ನು ಸ್ವಾಗತಿಸುತ್ತೇವೆ. ಗುಜರಾತ್ ನಲ್ಲಿ ಕೇಂದ್ರದ ಅಧಿಕಾರದ ಪ್ರಭಾವ ಹಾಗೂ ಹಣ ಬಳಕೆಯಿಂದ ಬಿಜೆಪಿ ಗೆಲುವಿಗೆ ಕಾರಣವಾಗಿರಬಹುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ತೀರ್ಪನ್ನು ಗೌರವಿಸಬೇಕು ಅಂತ ಸಿಎಂ ನುಡಿದ್ರು.
Advertisement
ಕಾನೂನು ಸುವ್ಯವಸ್ಥೆ, ತನಿಖೆಗಳ ಬಗ್ಗೆ ನಮಗೆ ಹೇಳಬೇಕಾಗಿಲ್ಲ. ಗುಜರಾತ್ ಕಾನೂನು ವ್ಯವಸ್ಥೆಯೇ ಹದಗೆಟ್ಟಿದೆ ಅಂತ ಬೆಂಗಳೂರಿನಲ್ಲಿ ರಾಜನಾಥ್ ಸಿಂಗ್ ಹೇಳಿಕೆ ಸಿಎಂ ತಿರುಗೇಟು ನೀಡಿದ್ರು. ಯಾದಗಿರಿ ಶಾಸಕ ಡಾ. ಮಾಲಕರೆಡ್ಡಿ ಎಂದೆಂದಿಗೂ ಕಾಂಗ್ರೆಸ್ ನವರೇ ಆಗಿದ್ದು, ಅವರು ನಮ್ಮ ಜೊತೆನೇ ಇರುತ್ತಾರೆ. ನನಗಿಂತ ಅವರು ಹಿರಿಯರು ಅಂದ್ರು. ಇದೇ ಸಂದರ್ಭದಲ್ಲಿ ನಾನು ಕಾಂಗ್ರೆಸ್ ಬಿಡೋ ಪ್ರಶ್ನೆಯೇ ಇಲ್ಲ ಅಂತ ರೆಡ್ಡಿ ಸ್ಪಷ್ಟಪಡಿಸಿದ್ರು.
https://www.youtube.com/watch?v=lCnL8ISPWNU&feature=youtu.be