ಬೆಂಗಳೂರು: ಕುಂಭಮೇಳದಲ್ಲಿ (Kumbh Mela) ಸ್ನಾನ ಮಾಡಿದ್ರೆ ಬಡತನ ನಿರ್ಮೂಲನೆ ಆಗುತ್ತಾ ಅಂತ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾತನ್ನ ಸಿಎಂ ಸಿದ್ದರಾಮಯ್ಯ (Siddaramaiah) ಸಮರ್ಥನೆ ಮಾಡಿಕೊಂಡಿದ್ದಾರೆ.
ವಿವಾದದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕುಂಭ ಸ್ನಾನದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿರೋ ಬಗ್ಗೆ ಅವರನ್ನೇ ಕೇಳಿ. ನನ್ನ ಅಭಿಪ್ರಾಯ ಕೂಡಾ ಅಷ್ಟೆ. ನಮ್ಮ ಸಂಪ್ರದಾಯ ಇದು ಅಷ್ಟೆ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಅಟ್ರಾಸಿಟಿ ಕೇಸ್‌ನಲ್ಲಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಿ – ಸಿಎಂ ಖಡಕ್ ಸೂಚನೆ
ಕುಂಭಮೇಳದಲ್ಲಿ ಸ್ನಾನ ಮಾಡೋರು, ಗಂಗೆಯಲ್ಲಿ ಸ್ನಾನ ಮಾಡೋದು ಪಾಪ ಪರಿಹಾರ ಆಗುತ್ತೆ ಅಂತ ನಂಬಿಕೆ ಇದೆ. ಆದರೆ ನಾವೆಲ್ಲ ಬಸವಣ್ಣನವರ ಅನುಯಾಯಿಗಳು. ಪಾಪ, ಪುಣ್ಯ ಎಲ್ಲಾ ಹೆಂಗೆ? ಅಯ್ಯಾ ಎಂದರೆ ಸ್ವರ್ಗ… ಎಲವೋ ಎಂದರೆ ನರಕ ಅನ್ನೋದ್ರಲ್ಲಿ ನಂಬಿಕೆ ಇಟ್ಟುಕೊಂಡು ಇದ್ದೇವೆ ಎನ್ನುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಮಾತನ್ನ ಸಮರ್ಥನೆ ಮಾಡಿಕೊಂಡರು.