ಬೆಂಗಳೂರು: ಡಿ.ಕೆ.ಶಿವಕುಮಾರ್ (D.K.Shivakumar) ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ಹೊರಡಿಸಿದ್ದ ಆದೇಶವನ್ನು ಹಿಂಪಡೆದ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಪ್ರಕರಣ ಸ್ಯಾಂಕ್ಷನ್ ಕೊಟ್ಟಿರುವುದು ಕಾನೂನುಬಾಹಿರ. ಎಂಎಲ್‌ಎ ಮೇಲೆ ಸ್ಪೀಕರ್ ಅನುಮತಿ ಪಡೆದು ತನಿಖೆಗೆ ಆದೇಶ ಕೊಡಬೇಕಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಲೂಟಿ ಮಾಡೋರಿಗೆ ನಮ್ಮ ಸರ್ಕಾರ ಅಂತ ಪ್ರೂವ್ ಮಾಡಿದ್ದಾರೆ – ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತೆ ಎಂದ HDK
Advertisement
Advertisement
ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇಲೆ ತನಿಖೆಗೆ ಶಿಫಾರಸು ಮಾಡಿದ್ದಾರೆ. ಕೋರ್ಟ್‌ನಲ್ಲಿರುವುದನ್ನು ನಾನು ತೀರ್ಮಾನ ಮಾಡಲ್ಲ. ಸರ್ಕಾರ ಏನು ತೀರ್ಮಾನ ಮಾಡಬೇಕೊ ಮಾಡಿದೆ. ಕೋರ್ಟ್‌ನವರು ಏನು ತೀರ್ಮಾನ ಮಾಡ್ತಾರೊ ಅದು ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
Advertisement
ಸಚಿವರಾಗಿದ್ದರೆ ರಾಜ್ಯಪಾಲರು ತನಿಖೆಗೆ ಅನುಮತಿ ಕೊಡಬೇಕು. ಶಾಸಕರಾದವರಿಗೆ ಸ್ಪೀಕರ್ ಅನುಮತಿ ಕೊಡಬೇಕು. ಡಿಕೆಶಿ 2019 ರಲ್ಲಿ ಎಂಎಲ್‌ಎ ಆಗಿದ್ದರು. ಹೀಗಾಗಿ ಸ್ಪೀಕರ್ ಅನುಮತಿ ಪಡೆದು ಮುಖ್ಯಮಂತ್ರಿಗಳು ತನಿಖೆಗೆ ಸೂಚನೆ ನೀಡಬೇಕಿತ್ತು. ಸ್ಪೀಕರ್ ಅನುಮತಿ ಪಡೆಯದೆ ಮುಖ್ಯಮಂತ್ರಿಗಳು ಮೌಖಿಕವಾಗಿ ಸಿಬಿಐ ತನಿಖೆಗೆ ಕೊಟ್ಟಿರುವುದು ಕಾನೂನುಬಾಹೀರ ಅಂತ ನಿರ್ಣಯ ಮಾಡಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಜೈಲಿಗೆ ಹೋಗುವ ಭಯ ಬಂದಿದೆ, ಅದಕ್ಕೆ ಕೇಸ್ ವಾಪಸ್ ಪಡೆದಿದ್ದಾರೆ: ಅಶ್ವಥ್ ನಾರಾಯಣ
Advertisement
ನಾವು ಅಡ್ವೊಕೇಟ್ ಜನರಲ್ (ಎಜಿ) ಅವರ ಅಭಿಪ್ರಾಯ ಕೇಳಿದೆವು. ಅವರು ಆದೇಶ ಹಿಂಪಡೆಯಬಹುದು ಅಂತ ಹೇಳಿದರು. ಅದರಂತೆ ಸಂಪುಟ ಸಭೆಯಲ್ಲಿ ಹಿಂಪಡೆದಿದ್ದೇವೆ. ಕುಮಾರಸ್ವಾಮಿ ಆರೋಪಕ್ಕೆ ನಾವು ತಲೆ ಕೆಡಿಸಿಕೊಂಡಿಲ್ಲ. ಕುಮಾರಸ್ವಾಮಿ ಏನು ಅಡ್ವೊಕೇಟ್ ಜನರಲ್? ರಾಜಕೀಯ ಪ್ರೇರಿತ ಆರೋಪ ಮಾಡ್ತಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ.