ಬೆಂಗಳೂರು: ಆ ಕಾಲದಲ್ಲಿ ವರನಟ ಡಾ.ರಾಜ್‌ಕುಮಾರ್ (Rajkumar) ಮತ್ತು ಲೀಲಾವತಿ (Leelavathi) ಜೋಡಿ ಬಹಳ ಜನಪ್ರಿಯವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ನೆನಪಿಸಿಕೊಂಡರು.
ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿರುವ ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಯಾವುದೇ ಪಾತ್ರಕ್ಕೆ ಜೀವ ತುಂಬುತ್ತಿದ್ದ ನಟಿ. ಬಹಳ ಮನೋಜ್ಞವಾಗಿ ನಟಿಸುತ್ತಿದ್ದರು. ಅವರ ಅನೇಕ ಚಲನಚಿತ್ರಗಳನ್ನು ನೋಡಿದ್ದೇನೆ. ಆಗ ನಮ್ಮ ಕಾಲದಲ್ಲಿ ರಾಜ್‌ಕುಮಾರ್ ಮತ್ತು ಲೀಲಾವತಿ ಜೋಡಿ ಬಹಳ ಜನಪ್ರಿಯವಾದದ್ದು. ನಾನು ವಿದ್ಯಾರ್ಥಿ ದಿಸೆಯಲ್ಲಿ (60-70 ರ ದಶಕದಲ್ಲಿ) ಲೀಲಾವತಿ ಅವರ ಸಿನಿಮಾಗಳನ್ನು ನೋಡಿದ್ದೇನೆ ಎಂದು ಮೆಲುಕು ಹಾಕಿದರು. ಇದನ್ನೂ ಓದಿ: ಲೀಲಾವತಿ ಅಂತಿಮ ದರ್ಶನ ಪಡೆದ ಹಾಲಿ, ಮಾಜಿ ಸಿಎಂ
Advertisement
Advertisement
ಲೀಲಾವತಿ ಅವರು ಪರಿಪೂರ್ಣ ಕಲಾವಿದೆ. ಐತಿಹಾಸಿಕ, ಸಾಮಾಜಿಕ ಹೀಗೆ ಯಾವುದೇ ಪಾತ್ರವನ್ನು ಬಹಳ ಲೀಲಾಜಾಲವಾಗಿ ಮಾಡುತ್ತಿದ್ದ ನಟಿ. ಭಕ್ತ ಕುಂಬಾರದಲ್ಲಿ ಅವರ ಅಭಿನಯ ಮೆಚ್ಚುವಂಥದ್ದು. ಅವರ ಸಾವಿನ ದುಃಖ ನನಗಿದೆ ಎಂದು ಮುಖ್ಯಮಂತ್ರಿ ನೊಂದು ನುಡಿದರು.
Advertisement
ಹೀರೋಯಿನ್, ತಾಯಿ, ತಂಗಿ, ಅಜ್ಜಿ ಯಾವುದೇ ಪಾತ್ರಕ್ಕೂ ಜೀವ ತುಂಬಿ ನಟಿಸುತ್ತಿದ್ದರು. ಪಾತ್ರಗಳಲ್ಲಿ ತಲ್ಲೀನ ಆಗಿ ನಟಿಸುವುದು ಮತ್ತು ಆ ಪಾತ್ರ ಜೀವ ತುಂಬುವುದು ಎಲ್ಲರಿಂದಲೂ ಸಾಧ್ಯವಾಗಲ್ಲ. ಅದನ್ನು ರಾಜ್‌ಕುಮಾರ್ ಮಾಡುತ್ತಿದ್ದರು. ಲೀಲಾವತಿ ಅವರೂ ಹಾಗೆಯೇ ನಟಿಸುತ್ತಿದ್ದರು ಎಂದರು. ಇದನ್ನೂ ಓದಿ: ನನ್ನ 2ನೇ ತಾಯಿಯ ರೂಪದಲ್ಲಿ ನೋಡಿದ್ದೀನಿ: ಅನಂತ್‌ನಾಗ್ ಭಾವುಕ
Advertisement
ಲೀಲಾವತಿ ಅವರು ಸಾಮಾಜಿಕ ಸೇವೆ ಕೂಡ ಮಾಡಿದ್ದಾರೆ. ಅವರು ಗಳಿಸಿದ ಹಣವನ್ನು ಬಚ್ಚಿಟ್ಟುಕೊಳ್ಳುತ್ತಿರಲಿಲ್ಲ. ಜನರಿಗಾಗಿ ಖರ್ಚು ಮಾಡುತ್ತಿದ್ದರು. ಆಸ್ಪತ್ರೆ, ಪ್ರಾಣಿಗಳ ಆಸ್ಪತ್ರೆ ಕಟ್ಟಿಸಿದ್ದಾರೆ ಎಂದು ತಿಳಿಸಿದರು.
ಲೀಲಾವತಿ ಅವರ ನಿಧನದ ಬಗ್ಗೆ ನನ್ನ ಸಂತಾಪಗಳು. ಅವರು ಹಾಸಿಗೆ ಹಿಡಿದಿದ್ದಾಗ ಅವರ ಫಾರ್ಮ್‌ಹೌಸ್‌ನಲ್ಲಿ ವಾರದ ಹಿಂದೆ ಹೋಗಿ ಭೇಟಿ ಮಾಡಿದ್ದೆ. ಆಗ ವಿನೋದ್ ರಾಜ್ ಕೂಡ ಇದ್ದರು. ತಾಯಿ ನಿನ್ನ ಮೇಲೆ ಬಹಳ ಪ್ರೀತಿ ಹೊಂದಿದ್ದರು. ನೀವಿಬ್ಬರು ಆದರ್ಶ ತಾಯಿ-ಮಗ. ಕೊನೆ ಘಳಿಗೆಯಲ್ಲಿ ಚೆನ್ನಾಗಿ ನೋಡಿಕೊಳ್ಳಪ್ಪ ಅಂತಾ ಹೇಳಿದ್ದೆ. ಏನೇ ಸಹಾಯ ಬೇಕಿದ್ದರೂ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದೆ. ನನ್ನಿಂದ ಅವರೇನು ಸಹಾಯ ಕೇಳಲಿಲ್ಲ ಎಂದು ನೆನಪಿಸಿಕೊಂಡಿದರು. ಇದನ್ನೂ ಓದಿ: ಭಾರತ ಕಂಡ ಶ್ರೇಷ್ಠ ಕಲಾವಿದೆ ಲೀಲಾವತಿ: ನಟ ಉಪೇಂದ್ರ
ಇವತ್ತು ಸರ್ಕಾರದ ಸಕಲ ಗೌರವಗಳೊಂದಿಗೆ ಲೀಲಾವತಿ ಅವರ ಅಂತ್ಯಕ್ರಿಯೆಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಲೀಲಾವತಿ ಅವರು ಕನ್ನಡ ಚಲನಚಿತ್ರರಂಗ ಕಂಡ ಅಪರೂಪದ ಕಲಾವಿದೆ. ನೈಜ ನಟನೆ ಮಾಡುತ್ತಿದ್ದರು. ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಬಂದು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ. ಬಹುಭಾಷಾ ಕಲಾವಿದೆ ಎಂದು ಸ್ಮರಿಸಿದರು.