ಬೆಂಗಳೂರು: ಇತ್ತೀಚೆಗೆ ಹಂಪಿಯಲ್ಲಿ ಡ್ರೆಸ್ ಕೋಡ್ (Dress Code Temple) ಜಾರಿ ಮಾಡಲಾಗಿತ್ತು. ಆದರೆ ಇದೀಗ ದೇಗುಲಗಳಲ್ಲಿ ವಸ್ತ್ರಸಂಹಿತೆ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ವಿವಾದಾತ್ಮಕ ಹೇಳಿಕೆಯೊಂದನ್ನು ಕೂಡ ನೀಡಿದ್ದಾರೆ.
ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಬಗ್ಗೆ ಹಿರಿಯ ಸಾಹಿತಿ ಮರುಳಸಿದ್ಧಪ್ಪ ಅವರು ಸಿಎಂ ಮುಂದೆಯೇ ಅಕ್ಷೇಪ ವ್ಯಕ್ತಪಡಿಸಿದ್ದರು. ಮೈತುಂಬಾ ಬಟ್ಟೆ ಹಾಕಿಕೊಂಡು ಹೋಗಬೇಕು ನಿಜ. ಹಾಗಂತ ಮಹಿಳೆಯರು ಸೀರೆ, ಪುರುಷರು ಪಂಚೆ ಉಡಬೇಕು ಅನ್ನೋದು ಯಾಕೆ? ಇದು ಪ್ರಜಾಪ್ರಭುತ್ವ ತತ್ವಕ್ಕೆ ಮಾರಕ ಅಂತಾ ಮರುಳ ಸಿದ್ಧಪ್ಪ ಆಕ್ಷೇಪ ಎತ್ತಿದರು.
Advertisement
Advertisement
ಇದಾದ ಬಳಿಕ ವೇದಿಕೆಯಲ್ಲಿಯೇ ಸ್ಪಷ್ಟೀಕರಣ ನೀಡಿದ ಸಿಎಂ, ನಮ್ಮ ಮುಜರಾಯಿ ಇಲಾಖೆ ಈ ತೀರ್ಮಾನ ಎಲ್ಲಾ ಮಾಡಿಲ್ಲ. ಇಂಥದ್ದೇ ಡ್ರೆಸ್ ಹಾಕಬೇಡಿ ಅಥವಾ ಹಾಕಿ ಅನ್ನೋದು ತಪ್ಪು. ಶರ್ಟ್, ಪ್ಯಾಂಟ್ ಧರಿಸಿಕೊಂಡು ಹೋಗಬೇಡಿ, ಸೀರೆ ಹಾಕ್ಕೊಂಡು ಹೋಗಿ ಅಂತಾ ಹೇಳೋದು ಸರಿಯಲ್ಲ. ನಾವು ಇಂಥದ್ದೇ ಡ್ರೆಸ್ ಹಾಕಿಕೊಳ್ಳಿ ಅಥವಾ ಬಟ್ಟೆ ಬಿಚ್ಚಾಕ್ಕೊಂಡು ಬನ್ನಿ ಅಂತಾ ಹೇಳಲ್ಲ ಎಂದು ಸಿಎಂ ವಿವಾದಾತ್ಮಕ ಹೇಳಿಕೆ ನೀಡಿದರು.
Advertisement
ಶುದ್ಧ ಮನಸ್ಸಿನಿಂದ ದೇವಸ್ಥಾನಕ್ಕೆ ಹೋಗಬೇಕು, ಶುದ್ಧ ಭಕ್ತಿ ಇಲ್ಲದೇ ಬಟ್ಟೆ ಸರಿಯಾಗಿ ಹಾಕಿಕೊಂಡು ಹೋದರೆ ಏನ್ ಪ್ರಯೋಜನ ಎಂದು ಸಿಎಂ ಇದೇ ವೇಳೆ ಪ್ರಶ್ನೆಯನ್ನು ಹಾಕಿದರು. ಇದನ್ನೂ ಓದಿ: ವಿಕ್ಷಿತ್ ಭಾರತ್ ಬಜೆಟ್ – ಹಣಕಾಸು ಸಚಿವೆಗೆ ಪ್ರಧಾನಿ ಮೋದಿ ಶ್ಲಾಘನೆ
Advertisement
ಖಾಸಗಿ ದೇಗುದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತಂದಿದ್ದು ನಿಜ. ಆದರೆ ಸಿದ್ದರಾಮಯ್ಯ ಸರ್ಕಾರದ ಮುಜರಾಯಿ ಇಲಾಖೆ ದೇಗುಲದಲ್ಲಿ ಹಲವೆಡೆ ವಸ್ತ್ರ ಸಂಹಿತೆ ತಂದಿರುವ ನಿರ್ಧಾರಕ್ಕೆ ಖುದ್ದು ಸಿಎಂ ಅವರೇ ವಿರೋಧ ವ್ಯಕ್ತಪಡಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.