ಮಂಡ್ಯ: ಕೃಷ್ಣ ರಾಜ ಸಾಗರ ಜಲಾಶಯ (KRS Dam) ಭರ್ತಿಯಾಗಿರುವ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ (CM Siddarmaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬಾಗಿನ ಅರ್ಪಿಸಿದರು.
ಐರಾವತ ಬಸ್ಸಿನ ಮೂಲಕ ಸಚಿವರೊಂದಿಗೆ ಕೆಆರ್‌ಎಸ್‌ಗೆ ಆಗಮಿಸಿದ ಸಿಎಂ ಮೂರನೇ ಬಾರಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದರು. ನಂತರ ಬಸ್ಸಿನಲ್ಲೇ ಸಿಎಂ ಜೊತೆ ಸಚಿವರು ಡ್ಯಾಂ ವೀಕ್ಷಣೆ ಮಾಡಿದರು.
ಬಾಗಿನ ಸಮರ್ಪಣೆ ಮಾಡಿದ ನಂತರ ಡಿಕೆ ಶಿವಕುಮಾರ್ (DK Shivakumar) ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದರು.
ಡ್ಯಾಂ ವೀಕ್ಷಣೆಗೂ ಮೊದಲು ಮಾತನಾಡಿದ ಸಿಎಂ , ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಲು ನಾವು ಸಿದ್ದರಿದ್ದೇವೆ. ಆದರೆ ತಮಿಳುನಾಡಿನವರು ರಾಜಕೀಯ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ. ಕೇಂದ್ರದವರು ಮಧ್ಯಸ್ಥಿಕೆ ವಹಿಸಲಿ ಎಂದು ಹೇಳಿದರು.
ಎರಡು ದಿನಗಳಿಗೆ ಕೊಡಗು, ಹಾಸನ, ಮೈಸೂರು ಭಾಗದಲ್ಲಿ ಕಡಿಮೆ ಮಳೆಯಾಗುತ್ತಿರುವರಿಂದ ನೀರಿನ ಒಳ ಹರಿವು ಕಡಿಮೆಯಾಗಿದೆ. 57,012 ಕ್ಯುಸೆಕ್ ಒಳ ಹರಿವು ಇದ್ದರೆ 33,462 ಕ್ಯೂಸೆಕ್ ಹೊರ ಹರಿವಿದೆ. ಇದನ್ನೂ ಓದಿ: ಮೆಟ್ಟೂರು ಡ್ಯಾಂ ಭರ್ತಿ, ನೀರು ಬಿಡುವಂತೆ ಸೂಚನೆ – ಕರ್ನಾಟಕದಿಂದ ತಮಿಳುನಾಡಿಗೆ ಎಷ್ಟು ನೀರು ಹೋಗಿದೆ?
124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 124.80 ಅಡಿ ನೀರಿದೆ. 49.452 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 49.452 ಟಿಎಂಸಿ ನೀರು ಸಂಗ್ರಹಗೊಂಡಿದೆ.