ಬೆಂಗಳೂರು: ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್‍ಗೆ ಕಾಂಗ್ರೆಸ್ ಮಂಡ್ಯದಿಂದ ಟಿಕೆಟ್ ಕೊಟ್ಟಿದ್ರೂ ಅವರು ಸ್ಪರ್ಧೆ ಮಾಡ್ತಾರಾ ಇಲ್ವಾ ಅನ್ನೋ ಗೊಂದಲ ಇದೆ. ಈ ಹಿನ್ನೆಲೆಯಲ್ಲಿ ಇಂದು ಮೈಸೂರಲ್ಲಿ ಸಿದ್ದರಾಮಯ್ಯ ಅಂಬರೀಶ್ ಅವರನ್ನು ಭೇಟಿ ಮಾಡ್ತಾರೆ.
ಅಂಬರೀಶ್ ಮಂಡ್ಯದಿಂದ ಸ್ಪರ್ಧೆ ಮಾಡ್ತಾರಾ ಇಲ್ಲವಾ ಎಂಬುದು ಸಿಎಂ ಹಾಗೂ ಅಂಬರೀಶ್ ಭೇಟಿ ನಂತರ ಅಂತಿಮವಾಗಲಿದೆ. ಒಂದು ವೇಳೆ ಅಂಬರೀಶ್ ಅವರು, ನಾನು ಸ್ಪರ್ಧೆ ಮಾಡಲ್ಲ ಅಂದ್ರೆ ನಾಲ್ವರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಮಾಜಿ ಸಚಿವ ಜಯರಾಂ ಪುತ್ರ ಅಶೋಕ್ ಜಯರಾಂ, ಶಿವಣ್ಣ ಚಂದಗಾಲು, ಹೆಚ್.ಬಿ.ರಾಮು, ಡಾ.ಶಂಕರೇಗೌಡರನ್ನ ಕಾಂಗ್ರೆಸ್ ಸಂಪರ್ಕಿಸಿದೆ.
Advertisement
Advertisement
ಅಶೋಕ್ ಜಯರಾಂರನ್ನು ಕರೆತರುವ ಜವಾಬ್ದಾರಿ ಅಂಬರೀಶ್ ದಾದ್ರೆ ಉಳಿದ ಮೂವರ ಜೊತೆಗೆ ನೇರವಾಗಿ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಸಂಪರ್ಕದಲ್ಲಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಲ್ಲಿ ಮಾತನಾಡಿದ್ದ ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್, ಅಂಬರೀಶ್ ಎಲೆಕ್ಷನ್‍ಗೆ ನಿಲ್ತಾರೆ, ಅವರು ನಿಂತಿಲ್ಲ ಅಂದ್ರೆ ಟಿಕೆಟ್ ನಂಗೆನೆ. ಭಾನುವಾರ ಎಲ್ಲವೂ ಸರಿಹೋಗುತ್ತೆ ಅಂತ ಹೇಳಿದ್ದರು.
Advertisement
ಕಾಂಗ್ರೆಸ್ ನಲ್ಲಿ ಈ ಹಿಂದೆ ಘೋಷಿಸಲಾದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆಗೆ ತೀರ್ಮಾನ ಮಾಡಲಾಗಿದೆ. ಮಲ್ಲೇಶ್ವರಂನಲ್ಲಿ ಸಚಿವ ಎಂ ಆರ್ ಸೀತಾರಾಂ ತಮಗೆ ಟಿಕೆಟ್ ಬೇಡ ಎಂದ ಕಾರಣ ವಕೀಲ ದೀವಾಕರ್ ಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಪದ್ಮನಾಭ ನಗರದಿಂದ ಗುರುವಪ್ಪ ನಾಯ್ಡು ಬದಲಿಗೆ ಮಾಜಿ ಸಚಿವ ಎಂ ಶ್ರೀನಿವಾಸ್ ಗೆ ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ತಿಪಟೂರಿನಲ್ಲಿ ಹಾಲಿ ಶಾಸಕ ಷಡಕ್ಷರಿಗೆ ಟಿಕೆಟ್ ಫಿಕ್ಸ್ ಆಗಿದ್ದು. ಜಗಳೂರಿನಲ್ಲಿ ಘೋಷಿತ ಅಭ್ಯರ್ಥಿ ಪುಷ್ಪ ಬದಲಿಗೆ ಹಾಲಿ ಶಾಸಕ ರಾಜೇಶ್ ಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.