ದೆಹಲಿಯಲ್ಲಿ ಮೋದಿ ಭೇಟಿಯಾದ ಸಿಎಂ – ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಬಿಡುಗಡೆಗೆ ಮನವಿ

Public TV
3 Min Read
Siddaramaiah DK Shivakumar Narendra Modi

– 4 ತಿಂಗಳ ಅಂತರದಲ್ಲಿ 2ನೇ ಬಾರಿ ಪ್ರಧಾನಿ ಭೇಟಿ‌; ಮಹತ್ವದ ವಿಚಾರಗಳ ಚರ್ಚೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ.

ಕಳೆದ 4 ತಿಂಗಳ ಅಂತರದಲ್ಲಿ ಇದು ಅವರ 2ನೇ ಭೇಟಿಯಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆ (Upper Bhadra Project), ನರ್ಬಾಡ್ (NABARD) ಅಡಿ ಅನುದಾನ ಕಡಿತ, ರಾಜ್ಯದ ತೆರಿಗೆ ಪಾಲು ಹೆಚ್ಚಳ ಸೇರಿದಂತೆ ಹಲವು ಮಹತ್ವದ ವಿಚಾರ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ಮುಗಿದ ಬಳಿಕ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: 19ರ ಯುವತಿ ಮೇಲೆ ಅತ್ಯಾಚಾರ, ಕೊಲೆ – ಕರ್ನಾಟಕ ಸೇರಿ 4 ರಾಜ್ಯಗಳಿಗೆ ಬೇಕಿದ್ದ ಸರಣಿ ಹಂತಕ ಅರೆಸ್ಟ್‌

LETTER AV 1

ಅನುದಾನ ಬಿಡುಗಡೆಗೆ ಮನವಿ:
ಪ್ರಧಾನಿಗಳನ್ನು ಭೇಟಿಯಾಗಿರುವ ಸಿದ್ದರಾಮಯ್ಯ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ನಬಾಡ್‌ ಸಾಲದ ಪ್ರಮಾಣದಲ್ಲಿ 58% ಕಡಿತಗೊಳಿಸಿದ್ದು, ಪೂರ್ಣ ಪ್ರಮಾಣದ ಸಾಲ ನೀಡಬೇಕು. ನಬಾರ್ಡ್ ನಿಂದ 2023-24ರಲ್ಲಿ 5,600 ಕೋಟಿ ರೂ. ಕೃಷಿ ಸಾಲ ನೀಡಿತ್ತು. ಆದ್ರೆ 2024-25ರಲ್ಲಿ 2,340 ಕೋಟಿ ರೂ. ಕೃಷಿ ಸಾಲ ಮಾತ್ರ ನೀಡಿದೆ ಎಂದು ಗಮನಕ್ಕೆ ತಂದರಲ್ಲದೇ ಜೊತೆಗೆ ಕಳಸಾ ಬಂಡೂರಿ ಯೋಜನೆ, ಮೇಕೆದಾಟು ಯೋಜನೆಗೆ ಕ್ಲಿಯರೆನ್ಸ್‌ಗೆ ಮನವಿ ಮಾಡಿದ್ದಾರೆ.

LETTER AV 2

ಸಿಎಂ ಮನವಿ ಪತ್ರದಲ್ಲಿ ಏನಿದೆ?
ಆತ್ಮೀಯ ಪ್ರಧಾನಮಂತ್ರಿ‌ಗಳೇ ನಿಮ್ಮನ್ನು ಭೇಟಿಯಾಗಲು ಸಮಯ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸುತ್ತೇನೆ. ನಮ್ಮ ರಾಜ್ಯದ ನಿರ್ಣಾಯಕ ಸಮಸ್ಯೆಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಇದನ್ನೂ ಓದಿ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಬ್ಯಾನ್‌ – ಆಸ್ಟ್ರೇಲಿಯಾದಲ್ಲಿ ಮಸೂದೆ ಅಂಗೀಕಾರ

ನಬಾರ್ಡ್‌ನಿಂದ ಕರ್ನಾಟಕಕ್ಕೆ ಅಲ್ಪಾವಧಿಯ ಕೃಷಿ ಸಾಲ ಮಿತಿಯನ್ನು ತೀವ್ರವಾಗಿ ಕಡಿತಗೊಳಿಸಿರುವುದು ರಾಜ್ಯದ ರೈತರಲ್ಲಿ ಆತಂಕ ಸೃಷ್ಟಿಸಿದೆ. 2023-24ರಲ್ಲಿ ಮಂಜೂರಾದ 5,600 ಕೋಟಿ ರೂ. ಮಿತಿಯಂತೆ, ನಬಾರ್ಡ್ ಪ್ರಸಕ್ತ ವರ್ಷಕ್ಕೆ (2024-25) 2,340 ಕೋಟಿ ರೂ.ಗಳನ್ನು ಮಾತ್ರ ಮಂಜೂರು ಮಾಡಿದೆ. ಇದರಿಂದ 58% ಅನುದಾನ ಕಡಿತವಾಗಿದ್ದು, ರೈತರ ಹಣಕಾಸು ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚುವರಿ ಬಡ್ಡಿ ರಿಯಾಯಿತಿ ಒದಗಿಸಲು ಮುಂದಾಗದಿದ್ದರೆ ನಮ್ಮ ಹಣಕಾಸಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಈ ನಿಟ್ಟಿನಲ್ಲಿ ನಾನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳ ಬಗ್ಗೆ ತಿಳಿಸಿದ್ದೇನೆ. ಕರ್ನಾಟಕದ ರೈತರು ಕೃಷಿ ಸಾಲ ಪಡೆಯುವುದಕ್ಕಾಗಿ ಈ ಸಮಸ್ಯೆ ಸರಿಪಡಿಸಲು ಹಣಕಾಸು ಸಚಿವಾಲಯಕ್ಕೆ ನಿರ್ದೇಶಿಸಬೇಕೆಂದು ವಿನಂತಿಸುತ್ತೇನೆ.

Modi Siddaramaiah

ಎರಡನೆಯದಾಗಿ, ನಾನು ಈ ಹಿಂದೆ ನಿಮ್ಮಲ್ಲಿ ವಿನಂತಿಸಿದಂತೆ, 2023-24 ರ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಒದಗಿಸುವುದಾಗಿ ಹಣಕಾಸು ಸಚಿವರು ನೀಡಿದ ಭರವಸೆಯನ್ನು ಈಡೇರಿಸಬೇಕಾಗಿದೆ. ಇದನ್ನೂ ಓದಿ: ಹಾಸನದಲ್ಲಿ ಹಮ್ಮಿಕೊಂಡಿರುವ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶದ ವಿರುದ್ಧ ಎಐಸಿಸಿಗೆ ದೂರು

ಮೂರನೆಯದಾಗಿ, ಕರ್ನಾಟಕವು ಶುಷ್ಕ ರಾಜ್ಯವಾಗಿದೆ ಮತ್ತು ನೀರಾವರಿ ಸಾಮರ್ಥ್ಯದ ಅಭಿವೃದ್ಧಿಯ ಅಗತ್ಯವಿದೆ. ಹಾಗಾಗಿ ಜಲ ಶಕ್ತಿ ಸಚಿವಾಲಯ ಹಾಗೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಬಾಕಿ ಉಳಿದಿರುವ ಯೋಜನೆಗಳ ಅನುಮತಿಗಳು ನಮ್ಮ ಯೋಜನೆಗಳನ್ನು ವಿಳಂಬಗೊಳಿಸುತ್ತಿವೆ. ಕಾವೇರಿ ನದಿಯ ಮೇಕೆದಾಟು ಸಮತೋಲನ ಜಲಾಶಯ ಮತ್ತು ಮಹದಾಯಿ ನದಿಯ ಕಳಸಾ ಬಂಡೂರಿ ಯೋಜನೆಗಳ ಎರಡು ಯೋಜನೆಗಳು ನಿಮ್ಮ ತುರ್ತು ಗಮನದ ಅಗತ್ಯವಿದೆ. ಮೊದಲಿನವು ಜಲ ಶಕ್ತಿ ಸಚಿವಾಲಯದ ಅನುಮೋದನೆ ಮತ್ತು ಪರಿಸರ ಅನುಮತಿಯ ಅಗತ್ಯವಿದೆ. ಎರಡನೆಯದು ವನ್ಯಜೀವಿ ತೆರವಿಗೆ ಮುಂದುವರಿದ ಹಂತದಲ್ಲಿದೆ. ಈ ಯೋಜನೆಗಳಿಗೆ ಶೀಘ್ರವಾಗಿ ಅನುಮತಿ ನೀಡುವಂತೆ ಎರಡು ಸಚಿವಾಲಯಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡುತ್ತೇನೆ.

ನಾಲ್ಕನೆಯದಾಗಿ, ಬೆಂಗಳೂರು ದೇಶದ ಟೆಕ್ ಮತ್ತು ಇನ್ನೋವೇಶನ್ ರಾಜಧಾನಿಯಾಗಿ ಹೊರಹೊಮ್ಮಿದೆ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಹಾಗಾಗಿ ಬೆಂಗಳೂರಿಗೆ ನಗರ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡಲು ವಿಶೇಷ ನೆರವು ನೀಡಲು ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

Share This Article