ಬೆಂಗಳೂರು: ಹವಮಾನ ಮುನ್ಸೂಚನೆ ಪ್ರಕಾರ ಈ ವರ್ಷ ವಾಡಿಕೆಗಿಂತ ಜಾಸ್ತಿ ಮಳೆ ಆಗಲಿದ್ದು, ಕೆಲವು ಕಡೆ ಜಾಸ್ತಿ ಮಳೆ ಸಾಧ್ಯತೆ ಇದೆ. ಅದಕ್ಕಾಗಿ ಪ್ರವಾಹ ಬಂದರೆ ಎದುರಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಸಚಿವರು, ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಪೂರ್ವ ಮುಂಗಾರು ಮಳೆ ಮೇ ತಿಂಗಳಲ್ಲಿ ವಾಡಿಕೆಗಿಂತ ಜಾಸ್ತಿ ಆಗಿದೆ. ಕೆಲವು ಜಿಲ್ಲೆಗಳಲ್ಲಿ ಬಿತ್ತನೆ ಚಟುವಟಿಕೆ ಪ್ರಾರಂಭವಾಗಿದೆ. ಕೃಷಿ ಸಾಮಗ್ರಿಗಳ ಬಗ್ಗೆ ಯಾವ ಕಾರಣಕ್ಕೂ ತೊಂದರೆ ಆಗಬಾರದು. ನಾನು ಕೂಡ ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಎಲ್ಲೇ ಇದ್ದರೂ ಕೂಡಲೇ ಸ್ವದೇಶಕ್ಕೆ ಬಾ, ನನ್ನ ತಾಳ್ಮೆ ಪರೀಕ್ಷಿಸಬೇಡ – ಪ್ರಜ್ವಲ್‌ಗೆ ಹೆಚ್‌ಡಿಡಿ ಸೂಚನೆ
Advertisement
Advertisement
ಬೀಜ, ಗೊಬ್ಬರದ ಬಗ್ಗೆ ರೈತರಿಗೆ ಆತಂಕ ಬರಬಾರದು. ದಾಸ್ತಾನಿನ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಬೇಡಿಕೆಗಿಂತ ದಾಸ್ತಾನು ಜಾಸ್ತಿ ಇದ್ದರೂ, ಹಾವೇರಿಯಲ್ಲಿ ನೂಕು-ನುಗ್ಗಲು ಆಗೋಗಿತ್ತು. ಅದಕ್ಕಾಗಿ ಆ ರೀತಿಯ ಆಗದಂತೆ ಡಿಸಿಗಳಿಗೆ ಎಚ್ಚರಿಕೆ ನೀಡಿದ್ದೇನೆ. 84 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಚಟುವಟಿಕೆ ಆಗಬೇಕು. ಜೂನ್‌ನಲ್ಲಿ ಎಲ್ಲ ಕಡೆ ಬಿತ್ತನೆ ಶುರು ಆಗುತ್ತದೆ. ಅದನ್ನು ಎದುರಿಸಲು ಡಿಸಿಗಳು ಸಜ್ಜಾಗಬೇಕು ಎಂದು ತಿಳಿಸಿದರು.
Advertisement
ಹಿಂದೆ ಪ್ರವಾಹ ಬಂದಾಗ ಯಾವ ಊರು, ಪ್ರದೇಶಗಳಲ್ಲಿ ತೊಂದರೆ ಆಗಿತ್ತು, ಅಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ಕೊಟ್ಟಿದ್ದೇವೆ. ಬರ ಪರಿಹಾರ ಹಣವನ್ನ ಜನರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ. ತೊಂದರೆ ಇದ್ದರೆ ಬಗೆಹರಿಸಲು ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಂಕಷ್ಟ ನಿವಾರಣೆಗಾಗಿ ಗಾಣಗಾಪುರದ ದತ್ತನ ಮೊರೆ ಹೋದ ರೇವಣ್ಣ
Advertisement
ಇದೇ ವೇಳೆ ಕಲುಷಿತ ನೀರು ಪೂರೈಕೆ ಆಗದಂತೆ ಎಚ್ಚರ ವಹಿಸಬೇಕು. ಈಗಾಗಲೇ ಕಾಲರಾ ಬಂದಿದೆ. ನನ್ನ ಕ್ಷೇತ್ರ ತಗಡೂರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೆ.ಸಾಲುಂಡಿ ಗ್ರಾಮದಲ್ಲಿ ಒಬ್ಬರು ಸತ್ತಿದ್ದಾರೆ. ಸುಮಾರು 40 ಜನ ಅಸ್ವಸ್ಥತರಾಗಿದ್ರು. ವೈದ್ಯೋಪಚಾರ ಆಗಿದೆ. ಹಾಗಾಗಿ ರಾಜ್ಯದ ಎಲ್ಲ ಕುಡಿಯುವ ನೀರನ್ನ ಪರೀಕ್ಷೆ ಮಾಡಬೇಕು ಎಂದು ಡಿಸಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಸಿಎಂ ತಿಳಿಸಿದರು.
ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಖಾತೆಗಳಲ್ಲಿ 826 ಕೋಟಿ ರೂಪಾಯಿ ಹಣ ಇದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಇಲ್ಲ. ಅಗತ್ಯವಿದ್ದರೆ ಬೋರ್‌ವೆಲ್ ಕೊರೆಸಲು ಅನುಮತಿ ಕೊಡುತ್ತೇವೆ ಎಂದರು.