ಬೆಂಗಳೂರು: ಕಾವೇರಿ (Cauvery) ಸಮಸ್ಯೆ ಕುರಿತು ಸಲಹೆ, ಮಾರ್ಗದರ್ಶನ ಪಡೆಯಲು ಇಂದು (ಶುಕ್ರವಾರ) ಸಂಜೆ ಸಿಎಂ ಸಿದ್ದರಾಮಯ್ಯ (Siddaramaiah) ಸಭೆ ನಡೆಸಲಿದ್ದಾರೆ.
ಸುಪ್ರೀಂಕೋರ್ಟ್, ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನ್ಯಾಯಮೂರ್ತಿಗಳು, ವಕೀಲರ ಜತೆ ಸಿಎಂ ಸಭೆ ನಡೆಸಲಿದ್ದಾರೆ. ಜಲತಜ್ಞರ ಹಾಗೂ ನೀರಾವರಿ ಅನುಭವಿಗಳನ್ನೂ ಸಭೆಗೆ ಸಿಎಂ ಆಹ್ವಾನಿಸಿದ್ದಾರೆ.
Advertisement
Advertisement
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ 4:30 ಕ್ಕೆ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ಎಲ್ಲರ ಜೊತೆ ಸಮಾಲೋಚಿಸಿ, ಮಾರ್ಗದರ್ಶನ ಪಡೆದು ಮುಂದಿನ ಹೆಜ್ಜೆ ಇಡಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಇದನ್ನೂ ಓದಿ: Karnataka Bandh : ಸರ್ಕಾರಿ ಬಸ್‌ಗಳಿದ್ದರೂ ಪ್ರಯಾಣಿಕರು ಇಲ್ಲ
Advertisement
Advertisement
ಸಭೆಯಲ್ಲಿ ಭಾಗಿಯಾಗಲಿರುವ ನಿವೃತ್ತ ನ್ಯಾಯಮೂರ್ತಿಗಳಾದ ನ್ಯಾ.ಎಂ.ಎನ್ ವೆಂಕಟಾಚಲಯ್ಯ, ನ್ಯಾ. ರಾಮಾಜೋಯಿಸ್, ನ್ಯಾ. ಸಂತೋಷ್ ಹೆಗ್ಡೆ, ಹಿರಿಯ ವಕೀಲರಾದ ಅಶೋಕ್ ಹಾರನಹಳ್ಳಿ, ಮಾಜಿ ಎಜಿ ಪ್ರೊ.ರವಿವರ್ಮ ಕುಮಾರ್, ಹಿರಿಯ ವಕೀಲರಾದ ಬಿ.ವಿ ಆಚಾರ್ಯ, ನ್ಯಾ.ಎ.ಜೆ ಸದಾಶಿವ, ನ್ಯಾ. ನಾಗಮೋಹನ್ ದಾಸ್, ಹಿರಿಯ ವಕೀಲ ಉದಯ್ ಹೊಳ್ಳ, ಎಂ.ಸಿ ನಾಣಯ್ಯ, ಪೊನ್ನಣ್ಣ ಸೇರಿದಂತೆ 15ಕ್ಕೂ ಹೆಚ್ಚು ಕಾನೂನು ತಜ್ಞರು ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಶುಕ್ರವಾರ ಕರ್ನಾಟಕ ಬಂದ್ – ಏನಿರುತ್ತೆ? ಏನಿರಲ್ಲ?
Web Stories