ಬೆಂಗಳೂರು: ಇಂದು ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ಸಿಎಂ ಸಿದ್ದರಾಮಯ್ಯ (CM Siddaramaiah) ದಿಢೀರ್ ಭೇಟಿ ನೀಡಿ ಪರಿಶೀಲಿಸಿ ರೋಗಿಗಳ ಜೊತೆ ಮಾತನಾಡಿದರು.
ರೋಗಿಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿದೆಯೇ? ಚಿಕಿತ್ಸೆ ಪಡೆಯುವಲ್ಲಿ ಏನಾದರೂ ಅಡೆತಡೆಗಳಿವೆಯೇ? ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸ್ಪಂದನೆ ಹೇಗಿದೆ? ಎಂಬುದನ್ನು ಸ್ವತಃ ರೋಗಿಗಳಿಂದಲೇ ಸಿಎಂ ಮಾಹಿತಿ ಪಡೆದರು. ಇದನ್ನೂ ಓದಿ: ದೇವಭೂಮಿಯಲ್ಲಿ ಮೇಘಸ್ಫೋಟ – ಧರಾಲಿಯಲ್ಲಿ ಈವರೆಗೆ ಐವರ ಸಾವು ದೃಢ; 150 ಜನರ ರಕ್ಷಣೆ
ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಬಹುತೇಕರು ಬಡವರು. ಖಾಸಗಿ ಆಸ್ಪತ್ರೆಯ ವೆಚ್ಚ ಭರಿಸಲಾಗದ ಕಾರಣಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಯಾವೊಬ್ಬ ರೋಗಿಯು ಗುಣಮಟ್ಟದ ಚಿಕಿತ್ಸೆಯಿಂದ ವಂಚಿತನಾಗಬಾರದೆಂದು ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ಸಿಬ್ಬಂದಿ ಹಾಗೂ ಸಲಕರಣೆಗಳನ್ನು ಒದಗಿಸಲಾಗಿದೆ. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳು ಕೂಡ ಖಾಸಗಿ ಆಸ್ಪತ್ರೆಗಳಂತೆ ಉತ್ತಮ ಸೇವೆ, ಉತ್ಕೃಷ್ಟ ಸೌಲಭ್ಯ ಒದಗಿಸಲೇಬೇಕು. ಈ ವಿಷಯದಲ್ಲಿ ಯಾವ ರಾಜಿಯೂ ಇಲ್ಲ ಎಂದು ಸಿಎಂ ಹೇಳಿದರು.