ಬೆಂಗಳೂರು: ಚುನಾವಣಾ ಸಮಯದಲ್ಲೇ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಈ ಗಿಫ್ಟ್ ಮೂಲಕ ರಾಜ್ಯದಲ್ಲಿರೋ ಸರ್ಕಾರಿ ನೌಕರರ ಜೊತೆ ಅವರ ಕುಟುಂಬದವರ ಮತವನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಮಾಡಿದೆ.
ಇಂದು ಎಮ್.ಆರ್. ಶ್ರೀನಿವಾಸ್ ಮೂರ್ತಿ ನೇತೃತ್ವದ ಸಮಿತಿಯಲ್ಲಿ 6 ನೇ ವೇತನ ಆಯೋಗದ ವರದಿ ಮಂಡನೆಯಾಗಲಿದೆ. ಸಮಿತಿ ಬೆಳಿಗ್ಗೆ ಸುಮಾರು 10.30ಕ್ಕೆ 6 ವೇತನ ಆಯೋಗದ ವರದಿಯನ್ನು ಮುಖ್ಯಮಂತ್ರಿಯವರಿಗೆ ಹಸ್ತಾಂತರಿಸಲಿದೆ. ಆದ್ದರಿಂದ 6 ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ವೇತನ ಪರಿಷ್ಕರಣೆಯ ಬಗ್ಗೆ ಬಜೆಟ್‍ನಲ್ಲಿ ಘೋಷಣೆ ಮಾಡುವ ಸಾದ್ಯತೆಗಳಿದ್ದು, ಈ ಮೂಲಕ 6 ಲಕ್ಷ ಸರ್ಕಾರಿ ನೌಕರರ ಮತ್ತು ಅವರ ಕುಟುಂಬದವರ ಮತ ಬ್ಯಾಂಕ್ ಭದ್ರ ಪಡಿಸುವ ತೀರ್ಮಾನ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ನಿವೃತ್ತರಾಗಲಿರೋ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದು, ಚುನಾವಣಾ ಸಮಯದಲ್ಲಿ ರಾಜ್ಯದಲ್ಲಿರೋ 5 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ವೋಟ್ ಬ್ಯಾಂಕ್ ಸೆಳೆಯೋ ಸಲುವಾಗಿ ನಿವೃತ್ತಿ ವಯಸ್ಸನ್ನು ರಾಜ್ಯ ಸರ್ಕಾರ 2 ವರ್ಷ ಹೆಚ್ಚಿಸಲು ಚಿಂತನೆ ನಡೆಸಿದೆ.
Advertisement
ವರದಿಯಲ್ಲಿ ಏನು ಇರಬಹುದು?
1. 6 ನೇ ವೇತನ ಆಯೋಗದ ಸಂಭವನೀಯ ವರದಿಯಲ್ಲಿ ಕೆಲಸದ ಸಮಯದಲ್ಲಿ ಬದಲಾವಣೆಯನ್ನು ಮಾಡಬಹುದು. ನೌಕರರಿಗೆ ವಾರಕ್ಕೆ ಎರಡು ರಜೆ, ಕೆಲ ಜಯಂತಿಗಳಿಗೆ ಇರುವ ರಜೆಗಳನ್ನು ರದ್ದು ಮಾಡಲು ಶಿಫಾರಸ್ಸು ಮಾಡಲಾಗಿದೆ.
Advertisement
2. ಈ ಬಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಸಾಧ್ಯತೆ ಇದೆ. ಅಂದರೆ ಕೇಂದ್ರ ಸರ್ಕಾರಿ ನೌಕರರ ಹತ್ತಿರದ ಸಂಬಳಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಬಳ ನಿಗದಿಯಾಗುವ ಸಾಧ್ಯತೆ ಇದ್ದು, ಕನಿಷ್ಠ ಮೂಲ ವೇತನ 16,350 ರೂ. ಮತ್ತು ಗರಿಷ್ಠ ಮೂಲ ವೇತನ 1,32,925 ರೂ. ನಿಗದಿಯಾಗಬಹುದು.
3. ಐಎಎಸ್ ಅಲ್ಲದ ಅಧಿಕಾರಿಗಳಿಗೆ 95,325 ರೂ., ಗ್ರೂಪ್ ಎ ನೌಕರರಿಗೆ 48,625 ರೂ., ಗ್ರೂಪ್ ಬಿ ನೌಕರರಿಗೆ 39,425 ರೂ., ಎಪ್‍ಡಿಎ ನೌಕರರಿಗೆ 28,125 ರೂ., ಸಿ ಗ್ರೂಪ್ ನೌಕರರಿಗೆ 19,850 ರೂ., ಮತ್ತು ಡಿ ಗ್ರೂಪ್ ನೌಕರರಿಗೆ 16,350 ರೂ. ಎಂದು ಮೂಲ ಸಂಬಳ ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದನ್ನು ಓದಿ: ಎಲೆಕ್ಷನ್ ಹೊತ್ತಲ್ಲೇ ರಾಜ್ಯದ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾದ ಸಿಎಂ