ಮೈಸೂರು: ಮುಡಾ ನಿವೇಶನ (MUDA Scam Case) ಹಂಚಿಕೆ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೂ (Siddaramaiah) ನೋಟಿಸ್ ನೀಡುವ ಸಾಧ್ಯತೆ ಇದೆ.
ಇ.ಡಿ ಮತ್ತು ಲೋಕಾಯುಕ್ತ ತನಿಖೆ ಚುರುಕುಗೊಳಿಸಿದ್ದು, ಮುಡಾ ಕೇಸ್‌ನಲ್ಲಿ ಈಗಾಗಲೇ ಎ2, 23 ಮತ್ತು ಎ4 ವಿಚಾರಣೆ ನಡೆಸಲಾಗಿದೆ. ಈಗ ಬಾಕಿ ಇರುವುದು ಎ1 ಆರೋಪಿ ವಿಚಾರಣೆ ಮಾತ್ರ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಪತ್ನಿ ಗೌಪ್ಯ ವಿಚಾರಣೆ; ಪ್ರಭಾವ ಬಳಸಿಲ್ಲ.. ವೈಟ್ನರ್ ಹಚ್ಚಿದ್ದು ನಾನೆ – ಲೋಕಾಯುಕ್ತ ಪ್ರಶ್ನೆಗಳಿಗೆ ಉತ್ತರ
ಸಿಎಂಗೆ ನೋಟಿಸ್ ನೀಡಲು ಲೋಕಾಯುಕ್ತ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಪತ್ನಿ ಪಾರ್ವತಮ್ಮ ವಿಚಾರಣೆಯ ಟಿಪ್ಪಣಿ ಬರೆಯುತ್ತಿದ್ದಾರೆ. ಟಿಪ್ಪಣಿ ಕಾರ್ಯ ಮುಗಿದ ಮೇಲೆ ಸಿಎಂಗೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಮುಡಾ ಹಗರಣ ಆರೋಪ ಸಂಬಂಧ ಲೋಕಾಯುಕ್ತ ದಾಖಲಿಸಿರುವ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಎ1 ಆರೋಪಿಯಾಗಿದ್ದಾರೆ. ಇದನ್ನೂ ಓದಿ: MUDA Scam | ಸಿಎಂ ಪತ್ನಿ ಪಾರ್ವತಿ ಲೋಕಾಯುಕ್ತ ವಿಚಾರಣೆಗೆ ಹಾಜರು – ಗೌಪ್ಯ ಸ್ಥಳದಲ್ಲಿ ವಿಚಾರಣೆ
ಮುಡಾ ಪ್ರಕರಣದಲ್ಲಿ ಸುಮಾರು 3 ಗಂಟೆಗಳ ಕಾಲ ಸಿಎಂ ಪತ್ನಿಯನ್ನು ಲೋಕಾಯುಕ್ತ ವಿಚಾರಣೆ ನಡೆಸಿತು. ಈ ವೇಳೆ ಹಲವಾರು ಪ್ರಶ್ನೆಗಳನ್ನು ಸಿಎಂ ಪತ್ನಿ ಮುಂದಿಟ್ಟು ಉತ್ತರ ಪಡೆಯಲಾಯಿತು.