ಮೈಸೂರು: ಇಂದು ನಗರದಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಸಿದ್ದರಾಮಯ್ಯ ಸೈಕಲ್ ಮೇಲೆ ಕುಳಿತು ಯೋಜನೆಗೆ ಚಾಲನೆ ಕೊಟ್ರು.
Advertisement
ದೇಶದ ಮೊಟ್ಟಮೊದಲ ಸಾರ್ವಜನಿಕ ಸೈಕಲ್ ಬಳಕೆ ಯೋಜನೆಗೆ ಇಂದಿನಿಂದ ಅಧಿಕೃತ ಚಾಲನೆ ನೀಡಲಾಗಿದೆ. ಮೈಸೂರಿನ ಚಾಮರಾಜೇಂದ್ರ ಒಡೆಯರ್ ಸರ್ಕಲ್ ನಲ್ಲಿ ಸಿದ್ದರಾಮಯ್ಯ ಅವರು ಒಂದು ಸುತ್ತು ಸೈಕಲ್ ಸವಾರಿ ಮಾಡಿದರು.
Advertisement
Advertisement
ಇದೇ ವೇಳೆ ಮಾತನಾಡಿದ ಅವರು, 1961ರಲ್ಲಿ ನಾನು ವಿದ್ಯಾಭ್ಯಾಸ ಮಾಡುವಾಗ ಮೈಸೂರಿನಲ್ಲಿ ಸೈಕಲ್ ನಲ್ಲೇ ಓಡಾಡುತ್ತಿದ್ದೆ. ಮೈಸೂರಿನಿಂದ 20 ಕಿ.ಮೀ. ದೂರ ಇರುವ ನಮ್ಮೂರಿಗೆ ಪ್ರತಿ ಶನಿವಾರ ಸೈಕಲ್ ನಲ್ಲೇ ಹೋಗಿ ಬರುತ್ತಿದ್ದೆ. ಹೀಗಾಗಿ ಸೈಕಲ್ ತುಳಿಯುವ ಅಭ್ಯಾಸ ನನಗಿದೆ ಎಂದು ಹೇಳಿದ್ರು.
Advertisement
ಮೈಸೂರು ಸುಂದರವಾದ ನಗರ. ನಗರದಲ್ಲಿ 12 ಲಕ್ಷ ಜನಸಂಖ್ಯೆಯಿದ್ದು, ಆರೂವರೆ ಲಕ್ಷ ವಾಹನಗಳಿವೆ. ಜಗತ್ತಿನ 600 ನಗರಗಳಲ್ಲಿ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆಯಿದೆ. ವಾಹನಗಳ ದಟ್ಟಣೆ, ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನಾವು ಹೆಚ್ಚಾಗಿ ಪರಿಸರ ಸ್ನೇಹಿ ವಾಹನಗಳನ್ನು ಸಂಚಾರಕ್ಕೆ ಬಳಸುವುದು ಸೂಕ್ತ. ಬೆಂಗಳೂರು ನಗರದಲ್ಲೂ ಈ ವ್ಯವಸ್ಥೆ ಜಾರಿಗೆ ತರುವ ಆಲೋಚನೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.
India's first Bike Sharing Facility, "Trin Trin", inaugurated by @CMofKarnataka in Mysuru.#DeliveredAsPromised pic.twitter.com/CR3n4LayV0
— Namma Karnataka (@NammaKarnataka_) June 4, 2017
Happy to inaugurate India's First Bike Sharing Facility at #mysuru #TrinTrin pic.twitter.com/J667MGmnam
— CM of Karnataka (@CMofKarnataka) June 4, 2017
ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜನ್ಮದಿನದಂದೇ ಪರಿಸರ ಸ್ನೇಹಿ ನಗರಿ ಮೈಸೂರಿನಲ್ಲಿ ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಸೇವೆ ಸಮರ್ಪಿಸಿರುವುದು ಸಂತಸ ತಂದಿದೆ #TrinTrin pic.twitter.com/FRiNCeXQON
— CM of Karnataka (@CMofKarnataka) June 4, 2017