ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಯೋಜನೆ ಲೋಕಾರ್ಪಣೆ-ಸೈಕಲ್ ಸವಾರಿ ಮಾಡಿದ ಸಿಎಂ

Public TV
1 Min Read
MYS CM TRIN TRIN

ಮೈಸೂರು: ಇಂದು ನಗರದಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ ಸಿದ್ದರಾಮಯ್ಯ ಸೈಕಲ್ ಮೇಲೆ ಕುಳಿತು ಯೋಜನೆಗೆ ಚಾಲನೆ ಕೊಟ್ರು.

MYS CM TRIN 2

ದೇಶದ ಮೊಟ್ಟಮೊದಲ ಸಾರ್ವಜನಿಕ ಸೈಕಲ್ ಬಳಕೆ ಯೋಜನೆಗೆ ಇಂದಿನಿಂದ ಅಧಿಕೃತ ಚಾಲನೆ ನೀಡಲಾಗಿದೆ. ಮೈಸೂರಿನ ಚಾಮರಾಜೇಂದ್ರ ಒಡೆಯರ್ ಸರ್ಕಲ್ ನಲ್ಲಿ ಸಿದ್ದರಾಮಯ್ಯ ಅವರು ಒಂದು ಸುತ್ತು ಸೈಕಲ್ ಸವಾರಿ ಮಾಡಿದರು.

MYS CM TRIN 3

ಇದೇ ವೇಳೆ ಮಾತನಾಡಿದ ಅವರು, 1961ರಲ್ಲಿ ನಾನು ವಿದ್ಯಾಭ್ಯಾಸ ಮಾಡುವಾಗ ಮೈಸೂರಿನಲ್ಲಿ ಸೈಕಲ್ ನಲ್ಲೇ ಓಡಾಡುತ್ತಿದ್ದೆ. ಮೈಸೂರಿನಿಂದ 20 ಕಿ.ಮೀ. ದೂರ ಇರುವ ನಮ್ಮೂರಿಗೆ ಪ್ರತಿ ಶನಿವಾರ ಸೈಕಲ್ ನಲ್ಲೇ ಹೋಗಿ ಬರುತ್ತಿದ್ದೆ. ಹೀಗಾಗಿ ಸೈಕಲ್ ತುಳಿಯುವ ಅಭ್ಯಾಸ ನನಗಿದೆ ಎಂದು ಹೇಳಿದ್ರು.

MYS CM TRIN 4

ಮೈಸೂರು ಸುಂದರವಾದ ನಗರ. ನಗರದಲ್ಲಿ 12 ಲಕ್ಷ ಜನಸಂಖ್ಯೆಯಿದ್ದು, ಆರೂವರೆ ಲಕ್ಷ ವಾಹನಗಳಿವೆ. ಜಗತ್ತಿನ 600 ನಗರಗಳಲ್ಲಿ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆಯಿದೆ. ವಾಹನಗಳ ದಟ್ಟಣೆ, ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ನಾವು ಹೆಚ್ಚಾಗಿ ಪರಿಸರ ಸ್ನೇಹಿ ವಾಹನಗಳನ್ನು ಸಂಚಾರಕ್ಕೆ ಬಳಸುವುದು ಸೂಕ್ತ. ಬೆಂಗಳೂರು ನಗರದಲ್ಲೂ ಈ ವ್ಯವಸ್ಥೆ ಜಾರಿಗೆ ತರುವ ಆಲೋಚನೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.

MYS CM TRIN 1

MYS CM TRIN 5

 

Share This Article
Leave a Comment

Leave a Reply

Your email address will not be published. Required fields are marked *