– ಅಶೋಕ್ ಗೆ ಪಾಪರ್ ಅರ್ಥ ಗೊತ್ತಾ?
ಬೆಂಗಳೂರು: ಪೆಟ್ರೋಲ್, ಡಿಸೇಲ್ ಮೇಲಿನ ರಾಜ್ಯ ತೆರಿಗೆ ಏರಿಕೆಯನ್ನ ಸಿಎಂ ಸಿದ್ದರಾಮಯ್ಯ (Siddaramaiah) ಸಮರ್ಥಿಸಿಕೊಂಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿಎಂ ಸಿದ್ದರಾಮಯ್ಯ ಬಿಜೆಪಿ, ಜೆಡಿಎಸ್ ಪ್ರತಿಭಟನೆಗೆ ಟಾಂಗ್ ಕೊಟ್ರು. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚು ಮಾಡಿದ್ರು ಅಂತೇಳಿ ಬಿಜೆಪಿ, ಜೆಡಿಎಸ್ ಅವರು ಪ್ರತಿಭಟನೆ ಮಾಡ್ತಿದ್ದಾರೆ. ಪೆಟ್ರೋಲ್ ಮೇಲೆ 3 ರೂ. ಡಿಸೇಲ್ ಮೇಲೆ 3 ರೂ. ಏರಿಕೆ ಮಾಡಿದ್ದೇವೆ. ಇವರು ಪ್ರತಿಭಟನೆ ಮಾಡಬೇಕಾಗಿದ್ದು ರಾಜ್ಯ ಸರ್ಕಾರದ ವಿರುದ್ಧ ಅಲ್ಲ, ಕೇಂದ್ರ ಸರ್ಕಾರದ ವಿರುದ್ಧ ಅಂತಾ ತಿರುಗೇಟು ನೀಡಿದ್ರು.
Advertisement
ನರೇಂದ್ರ ಮೋದಿ (Narendra Modi) ಅವರು ಗುಜರಾತ್ ಸಿಎಂ ಆಗಿದ್ದಾಗ ಬೆಲೆ ಏರಿಕೆ ಬಗ್ಗೆ ಕೇಂದ್ರದ ಮೇಲೆ ಹೇಳಿಕೆ ಕೊಟ್ಟಿದ್ದರು. ನಾನು ಪ್ರಧಾನಿ ಆದ್ಮೇಲೆ ಪೆಟ್ರೋಲ್, ಡಿಸೇಲ್ ಬೆಲೆ ಇಳಿಸ್ತೀವಿ ಅಂತಾ ಮೋದಿ ಹೇಳಿದ್ರು. ಅದಕ್ಕೆ ತದ್ವಿರುದ್ಧವಾಗಿ ನರೇಂದ್ರ ಮೋದಿ ನಡೆದುಕೊಂಡಿದ್ದಾರೆ. ನರೇಂದ್ರ ಮೋದಿ ಪ್ರಧಾನಿ ಆದಾಗ ಪೆಟ್ರೋಲ್ ಬೆಲೆ 72-26 ರೂ. ಇತ್ತು, ಜೂನ್ 2024ರಲ್ಲಿ 104 ರೂ. ಆಗಿತ್ತು, ಡಿಸೇಲ್ ಬೆಲೆ 57 ರೂ. ಇತ್ತು, 98 ರೂ. ಆಗಿದೆ. ಯಾರು ಬೆಲೆ ಹೆಚ್ಚು ಮಾಡಿದ್ದು..? ಅಂತಾ ಅಂಕಿ ಅಂಶ ಸಮೇತ ಬಿಜೆಪಿಗೆ ಟಾಂಗ್ ಕೊಟ್ಟರು. ಮನಮೋಹನ್ ಸಿಂಗ್ ಕಾಲದಲ್ಲಿ ಕಚ್ಚಾ ತೈಲ ಬೆಲೆ 113 ಡಾಲರ್ ಇತ್ತು, ಈಗ 82.35 ಡಾಲರ್ ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ್ರೆ ದೇಶದಲ್ಲೂ ಬೆಲೆ ಇಳಿಸಬೇಕು ಅಲ್ವಾ..!? ಬಿಜೆಪಿ ಅವರು ಯಾರ ವಿರುದ್ಧ ಪ್ರತಿಭಟನೆ ಮಾಡಬೇಕು..!? ಕೇಂದ್ರ ಸರ್ಕಾರದ ಮೇಲೆ ಅಲ್ವಾ..!? ಅಂತಾ ಖಾರವಾಗಿ ಪ್ರಶ್ನಿಸಿದ್ರು. ಇದನ್ನೂ ಓದಿ: ದರ್ಶನ್, ಚಿಕ್ಕಣ್ಣ ಕರೆತಂದು ಸ್ಟೋನಿಬ್ರೂಕ್ ಪಬ್‌ನಲ್ಲಿ ಸ್ಥಳ ಮಹಜರು – ಮೂಲೆಮೂಲೆಯನ್ನೂ ಜಾಲಾಡಿದ ಪೊಲೀಸರು!
Advertisement
Advertisement
ಮೋದಿ ಪಿಎಂ ಆದಾಗ ಪೆಟ್ರೋಲ್ ಮೇಲಿನ ತೆರಿಗೆ 9.48 ಪೈಸೆ ಇತ್ತು. ಅಧಿಕಾರಕ್ಕೆ ಬಂದ ಬಳಿಕ ಈಗ 32.98 ಪೈಸೆ ಆಗಿದೆ. ಡಿಸೇಲ್ ಮೇಲಿನ ತೆರಿಗೆ 3.56 ಪೈಸೆ ಇತ್ತು, ನಂತರ 31.81 ಪೈಸೆ ಆಗಿದೆ. ಆಗ ಬಿಜೆಪಿಯರು ಮಾತು ಆಡಲಿಲ್ಲ ಅಂತಾ ಕಿಡಿಕಾರಿದ್ರು. ಅಶೋಕಾ… ಏನ್ ಮಾತಾಡೋದು.. ದೇಶದ ಎಕಾನಮಿ ಗೊತ್ತಾ..!? ವಿಜಯೇಂದ್ರ ಮಾತಾಡೋದು..? ಇನ್ನೂ ಕೇಂದ್ರದ ಮಂತ್ರಿ ಕುಮಾರಸ್ವಾಮಿ ಅವರು ದಂಗೆ ಎದ್ದೇಳಿ ಅಂತಾರೆ.. ಇದು ಕೇಂದ್ರದ ಮಂತ್ರಿ ಹೇಳುವ ಮಾತಾ..!? ಈಗ ಮೈತ್ರಿ ಇದೆ, ಆದರೆ ಮೈತ್ರಿ ಇಲ್ಲದಿದ್ದಾಗ ಕುಮಾರಸ್ವಾಮಿ ಒಂದು ದಿನವೂ ಮಾತನಾಡಲಿಲ್ಲ ಅಂತಾ ಕಿಡಿಕಾರಿದ್ರು.