– ವಿಪಕ್ಷಗಳ ನಾಯಕರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ
– ಕಾಂಗ್ರೆಸ್‌ನ ಪ್ರತಿ ಶಾಸಕರಿಗೆ 50 ಕೋಟಿ ಆಫರ್ ಮಾಡಿದ್ದಾರೆ: ಸಿದ್ದರಾಮಯ್ಯ ಗಂಭೀರ ಆರೋಪ
ಬೆಂಗಳೂರು: ಬಿಜೆಪಿ-ಜೆಡಿಎಸ್‌ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಕಪ್ಪು ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಪ್ರಾಮಾಣಿಕ. ನನ್ನನ್ನು ಮುಗಿಸೋಕೆ ಸಾಧ್ಯವಿಲ್ಲ ಎಂದು ವಿಪಕ್ಷಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಟಾಂಗ್ ಕೊಟ್ಟಿದ್ದಾರೆ.
Advertisement
‘ಪಬ್ಲಿಕ್ ಟಿವಿ’ (Public TV) ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ದ್ವೇಷದ ರಾಜಕಾರಣ ಮಾಡುವವರಿಗೆ ವ್ಯಕ್ತಿ ಹಿನ್ನೆಲೆ, ಚಾರಿತ್ರ್ಯ ನೋಡಲು ಹೋಗಲ್ಲ. ದ್ವೇಷವೊಂದೇ ಅವರ ಮುಂದಿರುತ್ತದೆ. ನನಗೆ ಬಿಜೆಪಿ-ಜೆಡಿಎಸ್‌ನವರನ್ನು ನಾನು ನೋಡೋಕೆ ಹೋಗಲ್ಲ. ನನ್ನ ರಾಜಕೀಯ ಜೀವನದಲ್ಲಿ ಕಪ್ಪುಮಸಿ ಬಳಿಯುವ ಪ್ರಯತ್ನ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದೆಹಲಿ ಹೈಕಮಾಂಡ್ ನಮ್ಮ ತಂದೆಗೆ ಕ್ಲೀನ್ ಚಿಟ್ ಕೊಟ್ಟಿದೆ: ಯತೀಂದ್ರ ಸಿದ್ದರಾಮಯ್ಯ
Advertisement
Advertisement
ನಾನು ರಾಜಕೀಯದಲ್ಲಿ ಎಂಎಲ್‌ಎ ಆಗಿ 41 ವರ್ಷ, ಮಂತ್ರಿಯಾಗಿ 40 ವರ್ಷಗಳಾಗಿ ಬಂತು. ರಾಜ್ಯಕ್ಕೆ 15 ಬಜೆಟ್ ಮಂಡಿಸಿದ್ದೇನೆ. 10-12 ವರ್ಷಗಳಿಗೆ ಹೆಚ್ಚು ಕಾಲ ಹಣಕಾಸು ಮಂತ್ರಿಯಾಗಿದ್ದೆ. ಯಾವತ್ತು ಕೂಡ ಕಳಂಕ ಬಂದಿಲ್ಲ. ನಾನು ಬಡವರ ಪರವಿದ್ದು, ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇನೆಂಬ ಕಾರಣಕ್ಕೆ ಈಗ ಕಳಂಕ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಐಡಿಯಾಲಜಿಕಲ್ ಆಗಿ ಬಿಜೆಪಿ-ಜೆಡಿಎಸ್‌ನವರು ಬಡವರ ವಿರೋಧಿಗಳು. ನಾವು ಪರಿಶಿಷ್ಟ ಜಾತಿ- ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಹಣದಲ್ಲಿ ಖರ್ಚು ಮಾಡಬೇಕು ಅಂತಾ ಕಾನೂನು ಮಾಡಿದೆವು. ಅದನ್ನು ಕೇಂದ್ರದವರಾಗಲಿ, ಬಿಜೆಪಿ ಅಧಿಕಾರದಲ್ಲಿ ಇರುವಂತಹ ರಾಜ್ಯದಲ್ಲಿ ಮಾಡಿದ್ದಾರಾ? ನಾವು 2013 ರಲ್ಲೇ ಮಾಡಿದ್ದೀವಿ. ಅವರೇಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಇಳಿಸಲು ಸಾಧ್ಯವಿಲ್ಲ: ವಿಪಕ್ಷಗಳಿಗೆ ಕೆ.ಹೆಚ್.ಮುನಿಯಪ್ಪ ಟಾಂಗ್
ಪ್ರಶ್ನೆ: ಈಗ್ಯಾಕೆ ನಿಮಗೆ ಕಪ್ಪುಚುಕ್ಕೆ ಹಾಕ್ಬೇಕು?
ನನಗೆ ಕಪ್ಪುಚುಕ್ಕೆ ಹಾಕಿ ಮಸಿಬಳಿದು ರಾಜಕೀಯವಾಗಿ ನನ್ನನ್ನು ಮುಗಿಸಿದರೆ, ಕಾಂಗ್ರೆಸ್ ಮುಗಿಸಬಹುದು ಎಂಬುದು ಅವರ ಲೆಕ್ಕಾಚಾರ. ಜನ ನಮ್ಮ ಪರ ಇದ್ದಾಗ ಮಾತ್ರ ಲೀಡರ್ ಆಗೋದಕ್ಕೆ ಸಾಧ್ಯವಾಗುತ್ತದೆ. ಅವರು ನನಗೇನು ಮಾಡಕ್ಕಾಗಲ್ಲ. ಕಪ್ಪುಚುಕ್ಕೆ ತರೋದಕ್ಕೂ ಆಗಲ್ಲ, ಮಸಿ ಬಳಿಯುವುದಕ್ಕೂ ಆಗಲ್ಲ, ನನ್ನ ಚಾರಿತ್ರ್ಯ ವಧೆ ಮಾಡೋದಕ್ಕೂ ಆಗಲ್ಲ, ದ್ವೇಷದ ರಾಜಕಾರಣ ಮಾಡಿ ನನ್ನ ಮುಗಿಸುವುದಕ್ಕೂ ಸಾಧ್ಯವಿಲ್ಲ. ಆದರೆ ಅವರು ಹಾಗೆ ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.
ಅವರಿಂದ ಆಪರೇಷನ್ ಕಮಲ ಮಾಡೋಕೆ ಸಾಧ್ಯವಿಲ್ಲ. ಕಾಂಗ್ರೆಸ್‌ನ ಪ್ರತಿ ಎಂಎಲ್‌ಗೆ 50 ಕೋಟಿ ಆಫರ್ ಮಾಡಿದ್ದಾರೆ. It’s A Fact. ಪೊಲಿಟಿಕಲ್ ಇಂಟೆಲಿಜೆನ್ಸ್ ರಿಪೋರ್ಟ್ ನನ್ನ ಹತ್ತಿರ ಇದೆಯಲ್ವಾ. ಆಪರೇಷನ್‌ಗೆ ಪ್ರಯತ್ನಿಸಿ ಅವರು ವಿಫಲರಾಗಿದ್ದಾರೆ ಎಂದರು. ಇದನ್ನೂ ಓದಿ: ನನ್ನ, ಸಿಎಂ ನಡುವೆ ಮತಭೇದ ಇರಬಹುದು, ಮನಭೇದ ಇಲ್ಲ: ಬಿ.ಕೆ.ಹರಿಪ್ರಸಾದ್
ಪ್ರಶ್ನೆ: ನೀವು ಯಾಕೆ ಆಸ್ತಿ ಮಾಡಿಕೊಳ್ಳಲಿಲ್ಲ?
ನಾನು ಏನು ಅಂತಾ ಜನರಿಗೆ ಗೊತ್ತು. ನಾನು 2ನೇ ಬಾರಿಗೆ ಸಿಎಂ ಆಗಿದ್ದೇನೆ. ಮೊದಲ ಬಾರಿಗೆ 5 ವರ್ಷ ಸಿಎಂ ಆಗಿದ್ದಾಗ ಬೇಕಾದಷ್ಟು ಆಸ್ತಿ ಮಾಡಿಕೊಳ್ಳಲು ನನ್ನಿಂದ ಆಗುತ್ತಿರಲಿಲ್ವಾ? ನನಗೆ ಅದು ಬೇಕಾಗಿಲ್ಲ. ನಾನು ಪ್ರಾಮಾಣಿಕವಾಗಿ ಇರಬೇಕು. ಹಾಗೆಯೇ ಇದ್ದೇನೆ. ವೈಯಕ್ತಿಕ ಆಸ್ತಿ ಗಳಿಕೆಗೋಸ್ಕರ ನಾನು ಹಣವನ್ನು ಮಾಡಿಲ್ಲ, ಮಾಡುವುದೂ ಇಲ್ಲ. 14 ಸೈಟ್‌ಗೆ ನಾನು ಆಸೆ ಪಟ್ಟಿಲ್ಲ ಎಂದು ಸಮರ್ಥಿಸಿಕೊಂಡರು.