ಡಿಸಿ, ಸಿಇಓಗಳ ಸಭೆಗೆ ತಡವಾಗಿ ಬಂದ ಡಿಸಿಎಂ, ಸಚಿವರು – ಸಿಎಂ ಸಿದ್ದರಾಮಯ್ಯ ಗರಂ

Public TV
1 Min Read
siddaramaiah 11

ಬೆಂಗಳೂರು: ಎರಡನೇ ದಿನ ಡಿಸಿ, ಸಿಇಓಗಳ ಸಭೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ (Siddaramaiah), ಶನಿವಾರ ಡಿಸಿಎಂ ಮತ್ತು ಸಚಿವರ ಮೇಲೆ ಗರಂ ಆದರು.

ಸಭೆಗೆ ಸರಿಯಾದ ಸಮಯಕ್ಕೆ ಬಾರದ ಸಚಿವರು ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಮೇಲೆ ಅಸಮಾಧಾನ ಹೊರ ಹಾಕಿದ ಘಟನೆ ನಡೆದಿದೆ. ಎರಡನೇ ದಿನ ಅಂದರೆ ಇಂದು ಸಭೆ ಪ್ರಾರಂಭಕ್ಕೂ ಮುನ್ನ ಅಧಿಕಾರಿಗಳು ಸಚಿವರನ್ನ ಸ್ವಾಗತ ಮಾಡ್ತಿದ್ದರು. ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿಗೆ ಭಾರೀ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಆದೇಶ

ಈ ವೇಳೆ ಹಲವು ಸಚಿವರು ಸಭೆಗೆ ಇನ್ನು ಆಗಮಿಸಿರಲಿಲ್ಲ. ಇದಕ್ಕೆ ಸಿಟ್ಟಾದ ಸಿಎಂ, ಯಾರ‍್ಯಾರು ಸಭೆಗೆ ಬಂದಿಲ್ಲವೋ ಅವರ ಹೆಸರು ಗುರುತು ಹಾಕಿಕೊಳ್ತೇನೆ ಎಂದರು. ಇದಕ್ಕೆ ಸಚಿವ ಕೃಷ್ಣ ಭೈರೇಗೌಡರು (Krishna Byre Gowda), ನೀವೇನು ದಂಡ ಹಾಕೋದಿಲ್ಲ ಅಲ್ವಾ, ಬಿಡಿ ಸರ್ ಎಂದು ಹೇಳಿದರು. ಇದನ್ನೂ ಓದಿ: ಕೋವಿಡ್‌ ಕೇಸ್‌ ಹೆಚ್ಚಳ ಬೆನ್ನಲ್ಲೇ ಶಾಲೆಗಳಿಗೆ ಹೊಸ ಮಾರ್ಗಸೂಚಿ ರಿಲೀಸ್‌

ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಸಿಎಂ, ಇದು ಮುಖ್ಯವಾದ ಮೀಟಿಂಗ್ ಅಲ್ವಾ? ಎಲ್ಲರೂ ಸರಿಯಾದ ಸಮಯಕ್ಕೆ ಬರಬೇಕು. ಸಭೆಗೆ ಬಾರದೇ ಹೋದ್ರೆ ಹೇಗೆ? ಎಂದು ಪ್ರಶ್ನಿಸಿದರು. ಇನ್ನು ಸಿಎಂ, ಪಕ್ಕದಲ್ಲೇ ಇದ್ದ ಖಾಲಿ ಕುರ್ಚಿಯ ಕಡೆ ಕೈ ತೋರಿಸಿ, ನಮ್ಮ ಡಿಸಿಎಂ ಅವರು ಇನ್ನೂ ಸಭೆಗೆ ಬಂದಿಲ್ಲ ಎಂದು ಡಿ.ಕೆ ಶಿವಕುಮಾರ್ ಮೇಲೆ ಅಸಮಾಧಾನ ಹೊರ ಹಾಕಿದರು.

Share This Article