ಉಡುಪಿ: ಭ್ರಷ್ಟಾಚಾರದಲ್ಲಿ, ಕ್ರೈಂನಲ್ಲಿ, ಕೆಲಸ ಮಾಡದಿರುವುದರಲ್ಲಿ, ಸುಳ್ಳು ಹೇಳುವುದರಲ್ಲಿ, ಕಾನೂನು ಸುವ್ಯವಸ್ಥೆ ಕೆಟ್ಟ ನಿರ್ವಹಣೆಯಲ್ಲಿ, ಕೀಳು ಮಟ್ಟದ ಮಾತಿನಲ್ಲಿ, ದುರಹಂಕಾರ, ಉಡಾಫೆಯಲ್ಲಿ ಮತ್ತು ಕೆಟ್ಟ ಬಾಡಿ ಲ್ಯಾಂಗ್ವೆಜ್ ಲ್ಲಿ ಸಿಎಂ ನಂಬರ್ ಒನ್ ಅಂತಾ ಹೇಳುವ ಮೂಲಕ ಸಂಸದೆ ಶೋಭಾ ಕರಂದ್ಲಾಜ್ ವಾಗ್ದಾಳಿ ನಡೆಸಿದ್ರು.
ರಾಜ್ಯದ ಕಾಂಗ್ರೆಸ್ ಇತಿಹಾಸಕ್ಕೆ ಸಿದ್ದರಾಮಯ್ಯ ಮಾರಕವಾಗಿದ್ದಾರೆ. ಸಿಎಂ ಒಮ್ಮೆ ತಿರುಗಿ ತಮ್ಮ ಬೆನ್ನು ನೋಡಿಕೊಳ್ಳಬೇಕು ಎಂದು ಲೇವಡಿ ಮಾಡಿದರು. ಹೂಡಿಕೆದಾರರು ನಮ್ಮ ರಾಜ್ಯಕ್ಕೆ ಬಂದೇ ಇಲ್ಲ, ಸಿದ್ದರಾಮಯ್ಯ ಸುಳ್ಳು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು.
Advertisement
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಳ್ಳು ಜಾಹಿರಾತು ಫಲಕಗಳನ್ನು ಹಾಕಿಕೊಳ್ಳುವ ಜನರಿಗೆ ಮೋಸ ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಬಂದ ನಂತರ ಅಪರಾಧ ಪ್ರಕರಣಗಳು ಕಡಿಮೆ ಆಗುತ್ತಿವೆ. ರೌಡಿ ಮತ್ತು ಗೂಂಡಾಗಳು ಜೈಲಿನಿಂದ ವಾಪಾಸ್ಸು ಬರಲ್ಲ ಅಂತಾ ಬರೆದುಕೊಟ್ಟಿದ್ದಾರೆ. ಆದ್ರೆ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗ್ತಿದೆ ಅಂತಾ ಅಂದ್ರು.