ಅನುಭವ ಮಂಟಪ ಕಾಮಗಾರಿ ಒಂದು ವರ್ಷದಲ್ಲಿ ಮುಗಿಸಲು ಸಿಎಂ ಸೂಚನೆ – ಈಶ್ವರ್ ಖಂಡ್ರೆ

Public TV
1 Min Read
eshwar Khandre 5

ಬೆಂಗಳೂರು: ಅನುಭವ ಮಂಟಪದ ಕಾಮಗಾರಿಯನ್ನು ಒಂದು ವರ್ಷದಲ್ಲಿ ಮುಗಿಸಲು ಸಿಎಂ ಸಿದ್ದರಾಮಯ್ಯ(CM Siddaramaiah) ಸೂಚನೆ ನೀಡಿದ್ದಾರೆ ಎಂದು ಈಶ್ವರ್ ಖಂಡ್ರೆ (Eshwar Khandre) ತಿಳಿಸಿದರು. ಇದನ್ನೂ ಓದಿ: ಎರಡನೇ ದಿನ 10 ಜಿಲ್ಲೆಯ ಶಾಸಕ, ಸಚಿವರ ಜೊತೆ ಸಿಎಂ ಸಭೆ

ಸಿಎಂ ಜೊತೆ ಬೀದರ್ (Bidar) ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರ ಸಭೆ ಬಳಿಕ ಮಾತನಾಡಿದ ಅವರು, ಬೀದರ್ ಅಭಿವೃದ್ಧಿ, ಅರಣ್ಯ ಇಲಾಖೆ, ಪೌರಾಡಳಿತ ಇಲಾಖೆಗಳ ಬಗ್ಗೆ ಚರ್ಚೆ ಆಗಿದೆ. ಅನುಭವ ಮಂಟಪದ ಕೆಲಸ 750 ಕೋಟಿ ರೂ. ವೆಚ್ವದಲ್ಲಿ ಶುರುವಾಗಿದೆ. ಒಂದು ವರ್ಷದೊಳಗೆ ಕಾಮಗಾರಿ ಮುಗಿಯಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಸಭೆಯಲ್ಲಿ ಶಿಕ್ಷಣ, ನೀರಾವರಿ, ಆರೋಗ್ಯ ವಿಚಾರಕ್ಕೆ ಅನುದಾನ ಕೇಳಿದ್ದೇವೆ. ಬೀದರ್ ಕಾರ್ಪೋರೇಷನ್‌ಗೆ ಹೆಚ್ಚು ಅನುದಾನ ಕೊಡಬೇಕು ಎಂದು ಮನವಿ ಮಾಡಿದ್ದೇವೆ. ಬೀದರ್‌ಗೆ ಹೆಚ್ಚು ಅನುದಾನ ಕೊಡೋದಾಗಿ ಸಿಎಂ ಹೇಳಿದ್ದಾರೆ. ಸಿಎಂ ಅವರಿಗೆ ನಮ್ಮ ಜಿಲ್ಲೆ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯಕ್ಕೆ ಬಂದರೆ ಸ್ವಾಗತ – ಅಜಯ್ ಸಿಂಗ್

Share This Article