ಎಷ್ಟೇ ಪ್ರಭಾವಿಯಾಗಿರಲಿ ಮುಲಾಜಿಲ್ಲದೇ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಸಿಎಂ ಕಟ್ಟಾಜ್ಞೆ

Public TV
4 Min Read
siddaramaiah 11

– ಬೆಂಗಳೂರಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ, ಪರಿಶೀಲನೆ ಬಗ್ಗೆ ಸಿದ್ದರಾಮಯ್ಯ ಮಾಹಿತಿ

ಬೆಂಗಳೂರು: ಮುಲಾಜಿಲ್ಲದೇ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸಿಎಂ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, ಮೊದಲಿಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ರಾಜಕಾಲುವೆ ಪರಿಶೀಲನೆ ಮಾಡಿದೆವು. ಅಲ್ಲಿ ರಾಜಕಾಲುವೆ ಒತ್ತುವರಿ ಆಗಿದೆ. ಕೂಡಲೇ ತೆರವಿಗೆ ಸೂಚನೆ ನೀಡಿದ್ದೇನೆ. ಮಾನ್ಯತಾ ಟೆಕ್ ಪಾರ್ಕ್‌ನ ಸಿಇಒ ತಮ್ಮ ಸ್ವಂತ ರಸ್ತೆಯಲ್ಲಿ ಚರಂಡಿ ನಿರ್ಮಿಸಿ, 90 ದಿನದಲ್ಲಿ ಪರಿಹಾರ ಮಾಡಿ ಕೊಡುತ್ತೇನೆ ಎಂದಿದ್ದಾರೆ. ಎರಡನೆ ಜಾಗ ಹೆಚ್‌ಬಿಆರ್ ಬಡಾವಣೆ 5ನೇ ಹಂತದಲ್ಲಿ ರಾಜಕಾಲುವೆ ಸಮಸ್ಯೆ ಇದೆ. ಅಲ್ಲಿ ರಾಜಕಾಲುವೆ ತಡೆಗೋಡೆ ನಿರ್ಮಾಣ ಆಗ್ತಿದೆ. ದಬರಿಸ್ ಚರಂಡಿಗೆ ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಒತ್ತುವರಿ ಮುಲಾಜಿಲ್ಲದೇ ತೆರವು ಆಗಬೇಕು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದನ್ನೂ ಓದಿ: ಸರ್ಕಾರಕ್ಕೆ 2 ವರ್ಷ – ಸಿಎಂಗೆ `ದಿವಾಳಿ ಮಾಡೆಲ್ ಆಫ್ ಕರ್ನಾಟಕ’ ಬಿರುದು ಕೊಟ್ಟ ಬಿಜೆಪಿ

ಸಾಯಿ ಬಡಾವಣೆಯು ರಾಜಕಾಲುವೆಗಿಂತ ತಗ್ಗು ಪ್ರದೇಶದಲ್ಲಿ ಇದೆ. ಹಾಗಾಗಿ, ನೀರು ಸರಾಗವಾಗಿ ಹರಿಯುತ್ತಿಲ್ಲ. ರೈಲ್ವೆ ಹಳಿಯ ಹತ್ತಿರ ವೆಂಡ್ ದೊಡ್ಡದಿಲ್ಲ. ಆದ್ದರಿಂದ ನೀರು ತುಂಬುತ್ತಿದೆ. ಬ್ಯಾಕ್ ವಾಟರ್ ಬರುತ್ತಿರುವುದರಿಂದ ಅನೇಕ ವರ್ಷದಿಂದ ಸಮಸ್ಯೆ ಆಗಿದೆ. ವೆಂಡ್ಸ್ ಅಗಲ ಮಾಡಲು 2 ಅಡೀಶನಲ್ ವೆಂಡ್ಸ್ ಮಾಡಲು ಸೂಚನೆ ನೀಡಲಾಗಿದೆ. ಅದಕ್ಕೆ 13 ಕೋಟಿ ದುಡ್ಡು ರಿಲೀಸ್ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹಗರಣ – ಬಿಜೆಪಿ ನಿಯೋಗದಿಂದ ರಾಜ್ಯಪಾಲರಿಗೆ ದೂರು

ಮಹದೇವಪುರಕ್ಕೆ ಹೋಗಿದ್ದೆವು. ಅಲ್ಲಿ ಪಣತ್ತೂರ್ ಗಾರ್ಡನ್ ನೀರು ಹರಿಯಲು ಸಮಸ್ಯೆ ಆಗಿದೆ. ಮಳೆ ಬಂದಾಗ ಸಮಸ್ಯೆ ಆಗುತ್ತಿದೆ. ರಸ್ತೆ ಮೇಲೆ 4 ಅಡಿ ನೀರು ನಿಲ್ಲುತ್ತಿದೆ. ಇದಕ್ಕೆ ರೈಲ್ವೆ ಲೈನ್ ಕೆಳಗೆ ಕೇವಲ 30 ಅಡಿ ವಿಸ್ತರಣೆ ಇದೆ. ಇದು ಅಗಲ ಆಗಬೇಕು. ರಸ್ತೆಯೂ ಅಗಲ ಆಗಬೇಕು. ಇಲ್ಲಿ 80% ಕೆಲಸ ಆಗಿದೆ. ಇನ್ನೂ 45 ದಿನದಲ್ಲಿ ಕೆಲಸ ಮುಗಿಸಲು ಸೂಚಿಸಿದ್ದೇವೆ ಎಂದರು.

ಸಿಲ್ಕ್ ಬೋರ್ಡ್ ಜಂಕ್ಷನ್ ಹೋಗಿದ್ದೆ. ಅಲ್ಲಿ ನಾಲ್ಕು ಕಡೆಯಿಂದ ನೀರು ಬರ್ತಿದೆ. ಅವೆಲ್ಲಾ ಸೇರಿಕೊಂಡು ಹೆಚ್‌ಎಸ್‌ಆರ್ ಲೇಔಟ್‌ಗೆ ಹೋಗುತ್ತೆ. ನೀರು ಹೆಚ್ಚಾದಾಗ ಉಕ್ಕಿ ಹರಿದು ಸಮಸ್ಯೆ ಆಗುತ್ತೆ. ಮೆಟ್ರೋ, ಬಿಬಿಎಂಪಿ, ನ್ಯಾಷನಲ್ ಹೈವೇ ಮೂರು ಜನ ಸೇರಿ ಮಾಡಬೇಕಿದೆ. ಗುರಪ್ಪನ ಪಾಳ್ಯದಲ್ಲಿ ತಡೆಗೋಡೆ ಕುಸಿದು ಮನೆಗಳಿಗೆ ನೀರು ನುಗ್ಗಿದೆ. ಜನಸಂದಣೆ ಜಾಸ್ತಿ ಇದ್ದು, ರಸ್ತೆಗಳು ಚಿಕ್ಕದಿವೆ. ಅಲ್ಲಿ ಎಷ್ಟು ನಷ್ಟ ಆಗಿದೆ, ಸರ್ವೆ ಮಾಡಿಸಿ ಪರಿಹಾರ ಕೊಡಲು ಹೇಳಿದ್ದೇನೆ. ಸಾಯಿ ಲೇಔಟ್ ಬೇರೆ ಕಡೆಯು ಪರಿಹಾರ ಕೊಡಲು ಹೇಳಿದ್ದೇನೆ. ಎಲ್ಲೆಲ್ಲಿ ನೀರು ನುಗ್ಗಿ ನಷ್ಟ ಆಗಿದೆ ಅಲ್ಲಿ ಪರಿಹಾರ ಕೊಡಲು ಹೇಳಿದ್ದೇನೆ ಎಂದು ತಿಳಿಸಿದರು.

ಲೋ ಲೇಯಿಂಗ್ ಏರಿಯಾ ಇದೆಯಲ್ಲ, ಅಲ್ಲಿಗೆ ಬೇಸ್‌ಮೆಂಟ್‌ಗೆ ಪ್ಲಾನ್ ಅಪ್ರೂವಲ್ ಕೊಡಬೇಡಿ ಅಂತ ಬಿಬಿಎಂಪಿಗೆ ಹೇಳಿದ್ದೇನೆ. ಎಲ್ಲಾ ಕಡೆ ಅಲ್ಲ, ತಗ್ಗು ಪ್ರದೇಶ ಮಾತ್ರ. 10 ವರ್ಷದಲ್ಲಿ ಇದು ಎರಡನೇ ಬಾರಿ ಮಳೆ ಹೀಗೆ ಜಾಸ್ತಿ ಬಂದಿರುವುದು. 210 ತಗ್ಗು ಪ್ರದೇಶ ಇದೆ. 166 ಸೂಕ್ಷ್ಮ ಅತಿ ಸೂಕ್ಷ್ಮ ಇದೆ. 166 ಸರಿಪಡಿಸಿದ್ದಾರೆ. ಇನ್ನುಳಿದ ಕಡೆ ಕೆಲಸ ಆರಂಭಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‌ನವರ ಹೃದಯ ಬಗೆದ್ರೆ ರಾಹುಲ್ ಗಾಂಧಿ, ಪಾಕ್ ಪ್ರಧಾನಿ ಬಿರಿಯಾನಿ ತಿನ್ನೋದು ಕಾಣುತ್ತೆ: ಬಿ.ಸಿ ಪಾಟೀಲ್ ವ್ಯಂಗ್ಯ

ಬೆಂಗಳೂರಿನಲ್ಲಿ 860 ಕಿಮೀ ರಾಜಕಾಲುವೆ ಇದೆ. 491 ಕಿಮೀ ರಾಜಕಾಲುವೆಯಲ್ಲಿ ಲೈನಿಂಗ್ ಕೆಲಸ ಮುಗಿದಿದೆ. 195 ಕಿಮೀ ಕೆಲಸ ನಡೆಯುತ್ತಿದೆ. 2 ಸಾವಿರ ಕೋಟಿ ಅಂದಾಜಿನಲ್ಲಿ ನಡೆಯುತ್ತಿದೆ. 2026ರ ಫೆಬ್ರವರಿಯಲ್ಲಿ ಮುಗಿಸಲು ಹೇಳಿದ್ದೇವೆ. 173 ಕಿಮೀ ಟೆಂಡರ್ ಆಗಿದೆ. ರಾಜಕಾಲುವೆ ಒತ್ತುವರಿ ಮುಲಾಜಿಲ್ಲದೇ ತಗೆದು ಹಾಕಲು ಸೂಚನೆ ನೀಡಲಾಗಿದೆ. ನಮಗೆ ಬಂದಿರುವುದು ಅದೇ ತಾಪತ್ರಯ. ಬಿಜೆಪಿ ಕಾಲದಲ್ಲಿ ರಾಜಕಾಲುವೆ ತೆರವು ಆಗಲಿಲ್ಲ. ಹಿಂದೆ ನಾನು ಇದ್ದಾಗ ತೆರವು ಮಾಡಿಸಿದ್ದೆ. ಈಗ ಮತ್ತೆ ಮಾಡಿಸುತ್ತಿದ್ದೇವೆ. ಯಾರೇ ಆಗಲಿ, ಎಷ್ಟೇ ಪ್ರಭಾವಿ ಆದರೂ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ ಎಂದು ತಿಳಿಸಿದರು. ಅಲ್ಲದೇ, ವಿದ್ಯುತ್ ಶಾಕ್‌ನಿಂದ ಬಿಟಿಎಂ ಲೇಔಟ್ ನಲ್ಲಿ ಇಬ್ಬರು ತೀರಿಕೊಂಡರು. ಅವರ ಕುಟುಂಬಸ್ಥರಿಗೆ ಕಾರ್ಪೊರೇಷನ್‌ನಿಂದ 5 ಲಕ್ಷ ಕೊಟ್ಟಿದ್ದಾರೆ. ಬೆಸ್ಕಾಂನಿಂದಲೂ 5 ಲಕ್ಷ ಕೊಡುತ್ತೇವೆ ಎಂದು ಭರವಸೆ ನೀಡಿದರು.

Share This Article