Connect with us

Bengaluru City

‘ಸಾಧಕರ ಸೀಟ್’ನಲ್ಲಿ ಸಿಎಂ ಸಿದ್ದರಾಮಯ್ಯ- ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಶೂಟಿಂಗ್

Published

on

ಬೆಂಗಳೂರು: ಖಾಸಗಿ ವಾಹಿನಿಯ ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರದಲ್ಲಿ ಈ ವಾರದ ಅತಿಥಿ ಸಿಎಂ ಸಿದ್ದರಾಮಯ್ಯ.

ಇಂದು ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಸಿದ್ದರಾಮಯ್ಯ ಅವರು ಕಾಣಿಸಿಕೊಳ್ಳಲಿರೋ ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮದ ಸಂಚಿಕೆ ಚಿತ್ರೀಕರಣವಾಗುತ್ತಿದೆ. ಸ್ಟುಡಿಯೋ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೆಳ್ಳಿಗೆ 11 ರಿಂದ 4 ವರೆಗೆ ಕಾರ್ಯಕ್ರಮದ ಚಿತ್ರೀಕರಣ ನಡೆಯಲಿದೆ. ಈ ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ ಸಚಿವ ಕೆಜೆ ಜಾರ್ಜ್ ಕೂಡ ಆಗಮಿಸಿದ್ದಾರೆ.

ಅಲ್ಲದೆ ಇಂದು ಸಿದ್ದರಾಮಯ್ಯನವರು ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ. ಬಿಡುವಿಲ್ಲದ ರಾಜಕೀಯ ಚಟುವಟಿಕೆಗಳ ಮಧ್ಯೆಯೇ ಸಿಎಂ ಸಿದ್ದರಾಮಯ್ಯ `ಸಮ್ಮರ್ ಹಾಲಿಡೇಸ್’ ಸಿನಿಮಾಕ್ಕಾಗಿ ಇಂದು ಬಣ್ಣ ಹಚ್ಚಲಿದ್ದಾರೆ.

ನಿರ್ದೇಶಕಿ ಕವಿತಾ ಲಂಕೇಶ್ ಅಭಿನಯದ ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಸಿಎಂ ಬಣ್ಣ ಹಚ್ಚೋಕೆ ಸಮ್ಮತಿ ಸೂಚಿಸಿದ್ದು, ಈ ಚಿತ್ರದಲ್ಲಿ ಸಿದ್ದರಾಮಯ್ಯ 10 ನಿಮಿಷ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಮಕ್ಕಳ ಚಿತ್ರವಾಗಿದ್ದು ಈ ಚಿತ್ರದಲ್ಲಿ ಕವಿತಾ ಲಂಕೇಶ್ ಮಗಳು ಈಶ ಹಾಗೂ ಕವಿತಾ ತಮ್ಮ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಅಭಿನಯಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಈ ಚಿತ್ರದಲ್ಲಿ ಮಾಡುತ್ತಿರೋದು ಸಿಎಂ ಪಾತ್ರವೇ ಆಗಿರುತ್ತೆ ಅನ್ನೋದನ್ನ ಚಿತ್ರತಂಡ ತಿಳಿಸಿದೆ.

ದಿಡ್ಡಳ್ಳಿ ಮಾದರಿಯ ಗಿರಿಜನ ಹೋರಾಟದಲ್ಲಿ ಭಾಗಿಯಾಗೋ ಮಕ್ಕಳು ನೆರವು ಕೋರಿ ಸಿಎಂಗೆ ಮನವಿ ಮಾಡ್ತಾರೆ. ಮಕ್ಕಳಿಗೆ ಸಹಾಯ ಮಾಡೋ ಪಾತ್ರವನ್ನು ಸಿದ್ದರಾಮಯ್ಯ ನಿರ್ವಹಿಸಲಿದ್ದಾರೆ.

Click to comment

Leave a Reply

Your email address will not be published. Required fields are marked *