ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು (ಗುರುವಾರ) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಸೌಹಾರ್ದಯುತ ಭೇಟಿಯಾದರು.
ಸೌಹಾರ್ದಯುತ ಭೇಟಿ ವೇಳೆ ಪ್ರಧಾನಿ ಮೋದಿಗೆ ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿದರು. ಜೊತೆಗೆ ಗಂಧದ ಮರದಿಂದ ಕೆತ್ತನೆ ಮಾಡಿದ ಮೈಸೂರು ದಸರಾ ಅಂಬಾರಿಯನ್ನು ನೀಡಿದರು. ಉಡುಗೊರೆಯನ್ನು ಪ್ರಧಾನಿ ಮೋದಿ ಕುತೂಹಲದಿಂದ ನೋಡಿದರು. ಇದನ್ನೂ ಓದಿ: ಕಾಫಿನಾಡ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜದಲ್ಲಿ ತಾತ್ಕಾಲಿಕ ಟ್ರಕ್ಕಿಂಗ್ ಬ್ಯಾನ್
ಪರಸ್ಪರರು ಕುಶಲೋಪರಿ ವಿಚಾರಿಸಿದರು. ಬಳಿಕ ಸಿಎಂ ಹಾಗೂ ಪಿಎಂ ಕೆಲಹೊತ್ತು ಮಾತುಕತೆ ನಡೆಸಿದರು. ಬಳಿಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು.
ಇಂದು ಸಿದ್ದರಾಮಯ್ಯ ಅವರು ದೆಹಲಿಯಲ್ಲೇ ತಮ್ಮ 76ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಸಿಎಂಗೆ ಜನ್ಮದಿನದ ಶುಭಾಶಯ ತಿಳಿಸಿದರು. ಇದನ್ನೂ ಓದಿ: ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ಜನರಿಗೆ ಕೇಂದ್ರದ ಯೋಜನೆ ತಲುಪಿಸಿ: ಎನ್‌ಡಿಎ ಸಂಸದರಿಗೆ ಮೋದಿ ಕರೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]