– ಪ್ರತಾಪ್ ಸಿಂಹ ಅವರನ್ನ ಪಕ್ಷದವರೇ ನೆಗ್ಲೆಕ್ಟ್ ಮಾಡಿದ್ದಾರೆ; ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು: ಪ್ರತಾಪ್ ಸಿಂಹನನ್ನ (Pratap Simha) ಪಾರ್ಟಿಯಲ್ಲಿ ನೆಗ್ಲೆಕ್ಟ್ ಮಾಡಿ ಬಿಟ್ಟಿದ್ದಾರಲ್ಲ. ಅದಕ್ಕೆ ಕೋರ್ಟ್ವರೆಗೆ ಹೋಗಿರಬೇಕು. ದಸರಾ ಉದ್ಘಾಟನೆ ವಿಚಾರ ಕೋರ್ಟ್ನಲ್ಲೇ ತೀರ್ಮಾನ ಆಗಲಿ ಬಿಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ನೀಡಿದರು.
ಬಾನು ಮುಷ್ತಾಕ್ (Banu Mushtaq) ದಸರಾ (Dasara) ಉದ್ಘಾಟನೆ ವಿರೋಧಿಸಿ ಪ್ರತಾಪ್ ಸಿಂಹ ಕೋರ್ಟ್ಗೆ ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈದರಾಲಿ, ಟಿಪ್ಪು, ಮಿರ್ಜಾ ಇಸ್ಮಾಯಿಲ್, ನಿಸಾರ್ ಅಹಮದ್ ಅವರ ಬಗ್ಗೆ ಬಿಜೆಪಿ ಅವರು ಕೋರ್ಟ್ಗೆ ಹೋಗಿರಲಿಲ್ಲ. ಪ್ರತಾಪ್ ಸಿಂಹ ಅವರನ್ನು ಪಾರ್ಟಿಯಲ್ಲಿ ನೆಗ್ಲೆಕ್ಟ್ ಮಾಡಿದ್ದಾರಲ್ಲ. ಅದಕ್ಕೆ ಕೋರ್ಟ್ವರೆಗೆ ಹೋಗಿರಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮದ್ದೂರು ಗಲಾಟೆ | ನನ್ನ ಪ್ರಕಾರ ತಪ್ಪು ಮಾಡಿಲ್ಲ, ಬಿಜೆಪಿ-ಜೆಡಿಎಸ್ ಪ್ರಚೋದನೆ: ಸಿದ್ದರಾಮಯ್ಯ
ಇನ್ನು ಮದ್ದೂರು (Maddur) ಗಲಾಟೆ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವರಣೆ ಪಡೆದಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಪೊಲೀಸ್ ಮಹಾನಿರ್ದೇಶಕ ಸಲೀಂ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರಿಂದ ಮಾಹಿತಿ ಪಡೆದರು.
ಸುದ್ದಿಗೋಷ್ಠಿಗೂ ಮುನ್ನ ಮದ್ದೂರು ಗಲಾಟೆ ಬಗ್ಗೆ ಮಾತಾಡಿದ ಸಿಎಂ, ಬಿಗಿ ಬಂದೋಬಸ್ತ್ಗೆ ಪೊಲೀಸರಿಗೆ ಸೂಚನೆ ನೀಡಿದರು. ಇದೇ ವೇಳೆ ಮದ್ದೂರು ಎಂಎಲ್‌ಎ ಏನ್ ಮಾಡ್ತಾ ಇದ್ದಾನೆ ಎಂದು ಕೇಳಿದ್ರು. ಅದಕ್ಕೆ ಸರ್ ಲಂಡನ್‌ಗೆ ಹೋಗಿದ್ದಾರೆ. ಮಗಳು ಅಲ್ಲಿ ಇದ್ದಾಳೆ ಎಂದು ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.