– ಕುಮಾರಸ್ವಾಮಿಗೆ ಮನವಿ ಪತ್ರ ಕೊಡ್ತೀವಿ, ಕೇಂದ್ರದಿಂದ ಪರಿಹಾರ ಕೊಡಿಸಲಿ
ಬೆಂಗಳೂರು: ಬಿಜೆಪಿ ಅವರಿಗೆ ಸಮಾಜದಲ್ಲಿ ಅಸಮಾನತೆ ಇರಬೇಕು ಅನ್ನೋ ಮನಸ್ಥಿತಿ ಇದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ಮಾಡ್ತಿರೋ ಜಾತಿಗಣತಿಯಿಂದ ಸಮಾಜ ಉದ್ಧಾರ ಆಗಲ್ಲ ಎಂಬ ಹೆಚ್.ಡಿ ಕುಮಾರಸ್ವಾಮಿ (H S Kumaraswamy) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಎಂದು ಕುಮಾರಸ್ವಾಮಿಗೆ ಪಾಪ ಗೊತ್ತಿಲ್ಲ. ಸಮಾಜದಲ್ಲಿ ಅಸಮಾನತೆ ಇದೆ. ಸಮಾನತೆ ಮಾಡಬೇಕಾದ್ರೆ ಅಂಕಿ ಅಂಶಗಳು ಬೇಕು. ಯಾವ ಜಾತಿಯಲ್ಲಿ ಬಡತನ ಇದೆ. ಯಾವ ಜಾತಿಯಲ್ಲಿ ನಿರುದ್ಯೋಗ, ಅನಕ್ಷರತೆ ಇದೆ, ಯಾವ ಜಾತಿಗೆ ಜಮೀನು ಇಲ್ಲ ಅಂತ ಗೊತ್ತಾಗಬೇಕು ಅಲ್ವಾ. ಗೊತ್ತಾದರೆ ತಾನೆ ಸಮಾನತೆ ತರೋಕೆ ಸಾಧ್ಯ ಎಂದಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಹತ್ತಿಕ್ಕಲು ನಾನಾ ಪ್ರಯತ್ನಗಳು ನಡೆದವು: ಪ್ರಧಾನಿ ಮೋದಿ
ಅಂಬೇಡ್ಕರ್ ಅವರು ಅಸಮಾನತೆ ತೊಲಗಿಸಿ ಅಂತ ಹೇಳಿದ್ರು. ಅಸಮಾನತೆ ಹೋಗಬೇಕಾದರೆ ಎಲ್ಲರಿಗೂ ಸಮಾನತೆ ಬರಬೇಕು. ಅಸಮಾನತೆಯಿಂದಲೇ ಸಮಾಜ ಮುಂದುವರೆಸಬೇಕಾ? ಬಿಜೆಪಿ ಅವರಿಗೆ ಅಸಮಾನತೆ ಹೀಗೆ ಇರಬೇಕು. ಸಮಾಜದಲ್ಲಿ ಸಮಾನತೆ ಬರಲೇಬಾರದು ಅನ್ನೋರು ಬಿಜೆಪಿ ಅವರು. ಅವರಿಗೆ ಒಂದು ಕಮ್ಯುನಿಟಿ ಸುಪ್ರೀಂ ಆಗಿರಬೇಕು ಅಂತ ಇದೆ. ಅದನ್ನ ಬಿಟ್ಟು ಬೇರೆ ಏನು ಯೋಚನೆ ಮಾಡಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆದರಿಕೆ ಒಡ್ಡಿ ಸೈದ್ಧಾಂತಿಕ ವಿರೋಧಿಗಳ ಧ್ವನಿ ಅಡಗಿಸುವುದು ಬಿಜೆಪಿ, ಸಂಘಪರಿವಾರಕ್ಕೆ ಹೊಸದೇನಲ್ಲ – ಸಿಎಂ
ಕೇಂದ್ರ ಸರ್ಕಾರ ಜಾತಿಗಣತಿ ಮಾಡ್ತಿದೆ. ಯಾಕೆ ಮಾಡ್ತಾ ಇದ್ದಾರೆ. ನಮ್ಮ ಒತ್ತಾಯದ ಮೇಲೆ ಅವರು ಜಾತಿಗಣತಿ ಮಾಡ್ತಿದ್ದಾರೆ. ರಾಹುಲ್ ಗಾಂಧಿ ಒತ್ತಾಯದ ಮೇಲೆ ಕೇಂದ್ರ ಸರ್ಕಾರ ಜಾತಿಗಣತಿ ಮಾಡ್ತಿದೆ ಅಂತ ತಿಳಿಸಿದ್ದಾರೆ.
ಹೆಚ್‌ಡಿಕೆಯೇ ಪರಿಹಾರ ಕೊಡಿಸಲಿ:
ಕಲ್ಯಾಣ ಕರ್ನಾಟಕದ ಪ್ರವಾಹ ಪರಿಸ್ಥಿತಿಗೆ ಕೇಂದ್ರದಿಂದ ಕುಮಾರಸ್ವಾಮಿ ಅವರೇ ಪರಿಹಾರ ಕೊಡಿಸಲಿ. ನಾವು ಕುಮಾರಸ್ವಾಮಿಗೆ ಅವರಿಗೆ ಮನವಿ ಪತ್ರ ಕೊಡ್ತೀವಿ ಅಂತ ತಿರುಗೇಟು ಕೊಟ್ಟಿದ್ದಾರೆ.
ಕೇಂದ್ರದ ಜೊತೆ ಘರ್ಷಣೆ ಮಾಡಿಕೊಳ್ಳಬೇಡಿ ಪ್ರಸ್ತಾವನೆ ಕೊಡಿ ಪರಿಹಾರ ಕೊಡಿಸ್ತೀವಿ ಎಂಬ ಕುಮಾರಸ್ವಾಮಿ ಸಲಹೆಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಹಾಗೆ ಹೇಳಿರೋದನ್ನ ಸ್ವಾಗತ ಮಾಡ್ತೀನಿ. ಕೇಂದ್ರ ಸರ್ಕಾರ ಹಿಂದೆ 2023ರಲ್ಲಿ ಕರ್ನಾಟಕದಲ್ಲಿ ಬರಗಾಲ ಬಂದಿತ್ತು. ಆಗ ನಮಗೆ ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿರಲಿಲ್ಲ. ನಾವು ಸುಪ್ರೀಂಕೋರ್ಟ್ಗೆ ಹೋಗಿ ಪರಿಹಾರ ತೆಗೆದುಕೊಳ್ಳಬೇಕಾಯ್ತು. ಸುಪ್ರೀಂ ಬಾಗಿಲು ತಟ್ಟಿ, ಅವರು ಆರ್ಡರ್ ಮಾಡಿದ ಮೇಲೆ ಪರಿಹಾರ ಕೊಟ್ರು. ಕುಮಾರಸ್ವಾಮಿ ಅವರು ಪರಿಹಾರ ಕೊಡಿಸಲಿ ನಾವು ಅವರಿಗೆ ಮನವಿ ಪತ್ರ ಕೊಡ್ತೀವಿ ಎಂದಿದ್ದಾರೆ.