ರಾಯಚೂರು: ಪರೇಶ್ ಮೆಸ್ತಾ ನಿಗೂಢ ಹತ್ಯೆಯ ಅರೋಪಿಗಳನ್ನು ಕೂಡಲೇ ಬಂಧಿಸಬೇಕು. ಹಾಗೂ ತನಿಖೆಯನ್ನ ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‍ಐಎ) ಒಪ್ಪಿಸಬೇಕು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿಟಿ ರವಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಹಿಂದೂ, ಹಿಂದೂ ಸಂಘಟನೆ ಅಂದ್ರೆ ಅಲರ್ಜಿ. ಗಲಾಟೆಗಳಿಗೆಲ್ಲಾ ಸಿದ್ದರಾಮಯ್ಯನವರೇ ಕಾರಣ. ಹನುಮಜಯಂತಿಗೆ ಅನುಮತಿ ಕೊಟ್ಟಿದ್ರೆ ಗಲಾಟೆಯೇ ನಡೆಯುತ್ತಿರಲಿಲ್ಲ. ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸುವ ಪ್ರಮೆಯವೇ ಬರುತ್ತಿಲ್ಲ ಎಂದರು.
Advertisement
Advertisement
ರಾಮಲಿಂಗಾರೆಡ್ಡಿ ಗೃಹ ಇಲಾಖೆ ಎಷ್ಟು ಗಂಭೀರವಾಗಿ ನಿರ್ವಹಿಸುತ್ತಿದ್ದಾರೋ ಗೊತ್ತಿಲ್ಲ. ರಿಯಲ್ ಎಸ್ಟೇಟ್ ತರಹ ಗೃಹ ಇಲಾಖೆ ನಡೆಸುತ್ತಿದ್ದಾರೆ. ಇಲಾಖೆ ಮೇಲೆ ಸಚಿವರಿಗೆ ಹಿಡಿತವಿಲ್ಲ. ಸರ್ಕಾರ ಪರೇಶ್ ಮೆಸ್ತಾ ಪ್ರಕರಣ ತನಿಖೆ ದಿಕ್ಕನ್ನ ತಪ್ಪಿಸುತ್ತಿದೆ ಅಂತ ಆರೋಪಿಸಿದರು.
Advertisement
ಎರಡೂವರೆ ವರ್ಷದಲ್ಲಿ 20 ಕ್ಕೂ ಹೆಚ್ಚು ಜನ ನಮ್ಮ ಕಾರ್ಯಕರ್ತರ ಕೊಲೆಯಾಗಿವೆ. ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಕಾರ್ಯಕರ್ತರ ಕೊಲೆಯಾಗುತ್ತಿವೆ. ತಮಿಳುನಾಡು, ಕೇರಳದಲ್ಲಿ ಈ ಮಾದರಿ ಕೊಲೆ ಮಾಡುವ ಜಾಲ ಇದೆ. ಆ ಜಾಲ ಕರ್ನಾಟಕಕ್ಕೆ ವಿಸ್ತರಿಸಿ ಹತ್ಯೆಗಳನ್ನ ಮಾಡುತ್ತಿದೆ. ಪಿಎಫ್‍ಐ, ಎಸ್‍ಡಿಪಿಐ ಸೇರಿ ಗಲಭೆಗೆ ಕಾರಣವಾದ ಸಂಘಟನೆಗಳನ್ನ ನಿಷೇಧ ಮಾಡಿ ಅಂತ ಸರ್ಕಾರಕ್ಕೆ ಒತ್ತಾಯಿಸಿದರು.
Advertisement