ಬೆಂಗಳೂರು: ಮುಡಾ (MUDA Scam) ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಯಾವುದೇ ಆತಂಕ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಸಿಎಂಗೆ ಯಾವುದೇ ಆತಂಕ ಇಲ್ಲ. ಅವರು ಮುಡಾ ವಿಚಾರದಲ್ಲಿ ಸ್ಪಷ್ಟವಾಗಿದ್ದಾರೆ. ಅವರ ತಪ್ಪು ಏನೂ ಇಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಅನ್ನೋದು ಅವರ ತಲೆಯಲ್ಲಿ ಸ್ಪಷ್ಟವಾಗಿದೆ. ಅದನ್ನೇ ಅವರು ಎಲ್ಲರಿಗೂ ಹೇಳ್ತಿದ್ದಾರೆ. ತಾವೇನೂ ಕಾನೂನು ಬಾಹಿರ ತಪ್ಪು ಮಾಡಿಲ್ಲ ಅಂತನೇ ಹೇಳಿದ್ದಾರೆ. ಸಿಎಂ ಆಗಿದ್ದಾಗಲೂ, ವಿಪಕ್ಷ ನಾಯಕ ಆಗಿದ್ದಾಗಲೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಅಂತಾ ಅವರು ಹೇಳ್ತನೇ ಇದ್ದಾರೆ ಎಂದು ಸಿಎಂ ಪರ ಸಮರ್ಥನೆಯ ಮಾತುಗಳನ್ನಾಡಿದರು. ಇದನ್ನೂ ಓದಿ: ಮೈಸೂರು ದಸರಾ 2024| ಗಜಪಡೆಗೆ ಇಂದಿನಿಂದ ಮರಳು ಮೂಟೆ ಹೊರಿಸುವ ತಾಲೀಮು
ಸಿಎಂ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿದ ಅವರು, ಮುಂದಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಹೈಕಮಾಂಡ್ ಹೇಳಿದ ಕೆಲವು ವಿಷಯಗಳ ಬಗ್ಗೆಯೂ ಚರ್ಚೆ ನಡೆಸಿದೆವು. ಇಲ್ಲಿನ ವಿದ್ಯಮಾನ, ಕೋರ್ಟ್ ನಡೆ ನೋಡಿಕೊಂಡು ನಂತರ ರಾಷ್ಟ್ರಪತಿಗಳ ಭೇಟಿ ಬಗ್ಗೆ ಚರ್ಚೆ ಮಾಡುತ್ತೇವೆ. ಅಂತಹ ಸಂದರ್ಭ ಬಂದರೆ ದೆಹಲಿಗೆ ಹೋಗುತ್ತೇವೆ ಎಂದರು.
ನಿನ್ನೆಯ ಸಭೆಯಲ್ಲಿ ನ್ಯಾ.ಕುನ್ಹಾ ಅವರ ವರದಿ ಬಗ್ಗೆ ಚರ್ಚೆ ಆಗಲಿಲ್ಲ. ಆಯೋಗಗಳನ್ನು ಮಾಡುವ ಉದ್ದೇಶವೇ ಸತ್ಯ ಪತ್ತೆ ಹಚ್ಚವುದಕ್ಕೆ. ಸರ್ಕಾರಕ್ಕೆ ಸತ್ಯ ಗೊತ್ತಾಗಲು ಆಯೋಗ ಮಾಡ್ತೇವೆ. ಆಯೋಗದವ್ರು ವರದಿ ಏನು ಕೊಟ್ಟಿದ್ದಾರೆ ನೋಡ್ಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಸಂಪುಟ ಸಭೆಯಲ್ಲಿ ಕುನ್ಹಾ ಅವರ ವರದಿ ಬಗ್ಗೆ ಅಜೆಂಡಾ ಬಂದರೆ ಚರ್ಚೆ ಮಾಡುತ್ತೇವೆ. ಸಿಎಂ ಅವರ ಅಜೆಂಡಾ ಬಗ್ಗೆ ನಿರ್ಧರಿಸೋದು ಸಂಪುಟದ ಮುಂದೆ ಬಂದರೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನಿತೀಶ್ ಕುಮಾರ್ ಪಕ್ಷದ ನಾಯಕ ತ್ಯಾಗಿ JDU ವಕ್ತಾರ ಸ್ಥಾನಕ್ಕೆ ರಾಜೀನಾಮೆ
ಲೋಕಾಯುಕ್ತದವರು ರಾಜ್ಯಪಾಲರಿಗೆ ಹೆಚ್‌ಡಿಕೆ ( HD Kumaraswamy) ಪ್ರಕರಣದ ಬಗ್ಗೆ ಎಲ್ಲ ಮಾಹಿತಿ ಸಲ್ಲಿಸಿದ್ದಾರೆ. ಅವರು ಈ ಅರ್ಜಿಗಾದರೂ ಕ್ರಮ ತಗೆದುಕೊಳ್ಳಲಿ. ಕೆಐಎಡಿಬಿ ಸಿಎ ನಿವೇಶನ ಕುರಿತ ಬಿಜೆಪಿಯ (BJP) ದೂರಿನ ಬಗ್ಗೆ ರಾಜ್ಯಪಾಲರು ನಮ್ಮ ಜತೆ ಏನೂ ಪ್ರಸ್ತಾಪ ಮಾಡಲಿಲ್ಲ. ನಿನ್ನೆ ಸಿಎಂ ಸಭೆಯಲ್ಲೂ ಅದರ ಬಗ್ಗೆ ಚರ್ಚೆ ಆಗಲಿಲ್ಲ ಎಂದು ಆಗ್ರಹಿಸಿದರು.
ರಾಜ್ಯಪಾಲರ (Governor) ಮುಂದೆ ಪ್ರಾಸಿಕ್ಯೂಷನ್‌ಗೆ ಯಾವುದೇ ಅರ್ಜಿ ಬಾಕಿ ಇಲ್ಲದಿರುವ ವಿಚಾರದ ಕುರಿತು ಮಾತನಾಡಿ, ನಮ್ಮ ದೃಷ್ಟಿಕೋನವೇ ಬೇರೆ, ರಾಜ್ಯಪಾಲರ ದೃಷ್ಟಿಕೋನವೇ ಬೇರೆ. ಅವರಿಗೆ ಫೈಲ್ ಹೋದ ಮೇಲೆ ಅವರು ಸ್ಪಷ್ಟೀಕರಣ ಕೇಳಿ ವಾಪಸ್ ಲೋಕಾಯುಕ್ತಕ್ಕೆ ಕಳಿಸಿದ್ದಾಗಿ ಹೇಳಿದರು. ಆದರೆ ಸ್ಪಷ್ಟನೆ ಕೇಳಿ ಫೈಲ್ ವಾಪಸ್ ಕಳಿಸೋವರೆಗೂ ಅದು ರಾಜ್ಯಪಾಲರ ಬಳಿಯೇ ಇತ್ತು. ಆಗ ಆ ಅರ್ಜಿ ಅವರ ಮುಂದೆ ಇದ್ದ ಹಾಗೆಯೇ ಅಲ್ವಾ? ಆಗೆಲ್ಲ ಯಾಕೆ ಅವರು ಸುಮ್ನಿದ್ರು ಎಂದು ಪ್ರಶ್ನಿಸಿದರು.
ಈಗ ಹೆಚ್‌ಡಿಕೆ ಪ್ರಕರಣದ ಅರ್ಜಿ ಬಾಕಿ ಇದೆ ಅಂತಾ ರಾಜ್ಯಪಾಲರು ಅಂದಿದ್ದಾರೆ. ಈಗ ಈ ಬಗ್ಗೆಯಾದರೂ ಅವರು ಕ್ರಮ ತಗೋಬೇಕಲ್ಲ. ಇನ್ನೂ ರೆಡ್ಡಿ, ಜೊಲ್ಲೆ, ನಿರಾಣಿ ವಿರುದ್ಧದ ಅರ್ಜಿ ಲೋಕಾಯುಕ್ತದಿಂದ ಸ್ಪಷ್ಟನೆ ಸಹಿತ ವಾಪಸ್ ರಾಜ್ಯಪಾಲರಿಗೆ ಕಳಿಸಲಾಗುತ್ತದೆ. ಆಗ ಅದನ್ನು ತಿರಸ್ಕರಿಸುವ, ಪುರಸ್ಕರಿಸುವ ವಿಚಾರ ಅವರಿಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ: ಬೆಂಗಳೂರಲ್ಲಿ ಕಾರಿನ ಗಾಜು ಒಡೆದು ಕಳ್ಳತನ – ನಾಲ್ವರ ಬಂಧನ