ಜೋಶಿ ವಿರುದ್ಧ ಶೆಟ್ಟರ್ ಕಣಕ್ಕಿಳಿಸಲು ಪ್ಲಾನ್- ಲೋಕಸಭಾ ಟಿಕೆಟ್ ಆಫರ್ ಕೊಟ್ಟ ಸಿಎಂ

Public TV
2 Min Read
SIDDARAMAIAH JAGADEESH SHETTAR 1

– ನಾನು ಆಕಾಂಕ್ಷಿ ಅಲ್ಲಾ ಎಂದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ (Loksabha Election) ಪ್ರಹ್ಲಾದ್ ಜೋಶಿ (Prahlad Joshi) ವಿರುದ್ಧ ಜಗದೀಶ್ ಶೆಟ್ಟರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದೆ. ಶೆಟ್ಟರ್ ಭೇಟಿಯ ಬಳಿಕ ಸಿಎಂ ಅವರು ಈ ಗುಟ್ಟನ್ನು ಬಿಟ್ಟಕೊಟ್ಟರು. ಶೆಟ್ಟರ್ ನಿವಾಸದ ಮುಂದೆಯೇ ಲೋಕಸಭಾ ಟಿಕೆಟ್ ಆಫರ್ ಕೊಟ್ಟರು.

SIDDARAMAIAH JAGADEESH SHETTAR 2

ಶೆಟ್ಟರ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಶೆಟ್ಟರ್ ಗೆ ಟಿಕೆಟ್ ನೀಡುವ ವಿಚಾರವಾಗಿ ಸ್ಥಳೀಯವಾಗಿ ಕಾರ್ಯಕರ್ತರ ಮತ್ತು ಶಾಸಕರಿಂದ ಅಭಿಪ್ರಾಯ ಕೇಳುತ್ತಾ ಇದ್ದೀವಿ. ಅವರು ಕೂಡ ಆಕಾಂಕ್ಷಿ ಅಂತ ಅಂದುಕೊಂಡಿದ್ದೀವಿ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿ ನಗುತ್ತಲೇ ನಾನು ಆಕಾಂಕ್ಷಿ ಅಲ್ಲಾ ಎಂದು ಶೆಟ್ಟರ್ ಹೇಳಿದರು.

ನಮ್ಮ ಶಾಸಕರು, ಕಾರ್ಯಕರ್ತರು ಯಾರಿಗೆ ಹೇಳ್ತಾರೆ ಅವರಿಗೆ ಟಿಕೆಟ್ ಕೊಡುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಕೂಡ ಒಬ್ಬೊಬ್ಬ ಸಚಿವರನ್ನು ವೀಕ್ಷರನ್ನು ನೇಮಕ ಮಾಡಿದ್ದೇವೆ. ಅವರು ಅಭಿಪ್ರಾಯ ನನ್ನ ಕಲೆಕ್ಟ್ ಮಾಡುತ್ತಿದ್ದಾರೆ. ಅಭಿಪ್ರಾಯ ಕಲೆಕ್ಟ್ ಮಾಡಿ ಪ್ಯಾನೆಲ್ ಕೊಡಿ ಅಂತ ಹೇಳಿದ್ದೇವೆ. ಅವರಲ್ಲಿ ಯಾರು ಸೂಕ್ತ ಆಗ್ತಾರೆ ಅಂತ ಅಭ್ಯರ್ಥಿನಾ ಆಯ್ಕೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸಂಸತ್‌ ಮೇಲಿನ ದಾಳಿ ಗಂಭೀರವಾದದ್ದು; ಚರ್ಚೆ ಬೇಡ, ವಿಸ್ತೃತ ತನಿಖೆಯಾಗಲಿ: ಪ್ರಧಾನಿ ಮೋದಿ ಮೊದಲ ಪ್ರತಿಕ್ರಿಯೆ

SIDDARAMAIAH JAGADEESH SHETTAR

ಶೆಟ್ಟರ್ ಹೇಳಿದ್ದೇನು..?: ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿಯಲ್ಲ, ಪಕ್ಷವೂ ನನ್ನನ್ನು ಸ್ಪರ್ಧಿಸುವಂತೆ ಹೇಳಿಲ್ಲ, ಹೇಳಿದ್ರೆ ನೋಡೋಣ. ಲೋಕಸಭೆ ಚರ್ಚೆ ಜನವರಿ ನಂತರ ಶುರುವಾಗುತ್ತೆ. ಆಗ ನನ್ನ ಅಭಿಪ್ರಾಯದ ಜೊತೆಗೆ ಪ್ಲಾನ್ ಹೇಳುವೆ. ಸಿಎಂ ಅವರು ನಿವಾಸಕ್ಕೆ ಬಂದು ಶುಭಕೋರಿದರು. ಕುಟುಂಬ ಜೊತೆಗೆ ಹರಟೆ ಮಾತುಕತೆ ಆಯಿತು. ಅದು ಬಿಟ್ಟು ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದರು.

ಸಹಜವಾಗಿಯೇ ಪ್ರದೀಪ್ ಶೆಟ್ಟರ್ (Pradeep Shettar) ಕೂಡ ಮನೆಗೆ ಬಂದಿದ್ರು. ಸಿದ್ದರಾಮಯ್ಯನವರು (Siddaramaiah) ನಮ್ಮ ರಾಜಕೀಯ ಜೀವನದ ಒಡನಾಟ ನೆನೆಸಿಕೊಂಡರು. ನಾನು ಮತ್ತೆ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಸುಮ್ಮನೆ ಈ ರೀತಿಯ ಗಾಳಿ ಸುದ್ದಿ ಹಬ್ಬಿಸಿ, ಪಕ್ಷ ಬಿಡಲು ಸಿದ್ಧರಾಗಿರುವವರನ್ನು ಬಿಜೆಪಿ ತಡೆದಿಟ್ಟುಕೊಳ್ಳವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

Share This Article