ಮೈಸೂರು: ಡಾ. ಯತೀಂದ್ರ ವೈರಲ್ ವೀಡಿಯೋದಲ್ಲೂ ಉಲ್ಲೇಖವಾಗಿದ್ದ ವಿವೇಕಾನಂದ ಬೇರೆ, ಈ ವಿವೇಕಾನಂದ ಬೇರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ ವೀಡಿಯೋ ಕುರಿತು ಪ್ರತಿಕ್ರಿಯಿಸಿದರು. ಆ ವಿವೇಕಾನಂದ (Vivekananda) ಬೇರೆ ಈ ವಿವೇಕಾನಂದ ಬೇರೆ. ಅವರು ಬಿಐಓ, ಇವರು ಇನ್ಸ್ ಪೆಕ್ಟರ್. ಬಿಇಓ ನಮ್ಮ ಕ್ಷೇತ್ರವರು ಈಗ ವರ್ಗಾವಣೆ ಆಗಿರುವುದು ಚಾಮರಾಜ ಕ್ಷೇತ್ರ ವ್ಯಾಪ್ತಿ. ಯಾರು ವರ್ಗಾವಣೆ ಮಾಡಿಸಿಕೊಂಡರು ಅನ್ನುವುದನ್ನು ಸ್ಥಳೀಯ ಶಾಸಕರನ್ನು ಕೇಳಿ ಎಂದು ವಿವೇಕಾನಂದ ಹೆಸರಿಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
Advertisement
Advertisement
ಈ ಹಿಂದೆ ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಂಡಿದ್ದ ವಿವೇಕಾನಂದ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ರಾಜ್ಯಾದ್ಯಂತ ಸದ್ದು ಮಾಡಿದ್ದ ಯತೀಂದ್ರ (Yathindra Siddaramaiah) ವಿಡಿಯೋದಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪವಾಗಿತ್ತು. ವಿವೇಕಾನಂದನಾ? ಎಲ್ಲಿಗೆ? ಎಂದು ಯತೀಂದ್ರ ಪ್ರಶ್ನೆ ಮಾಡಿದ್ದರು.
Advertisement
ನಾನು ಕೊಟ್ಟಿದ್ದ 4-5 ಮಾತ್ರ ಮಾಡಿ ಎಂದು ಯತೀಂದ್ರ ಹೇಳಿದ್ದರು. ಈಗ ಮೈಸೂರಲ್ಲಿ ನಾಲ್ವರು ಇನ್ಸ್ ಪೆಕ್ಟರ್ ಗಳ ವರ್ಗಾವಣೆ ನಡೆದಿದ್ದು ಈ ನಾಲ್ವರಲ್ಲಿ ಒಬ್ಬರ ಹೆಸರು ವಿವೇಕಾನಂದ ಆಗಿದ್ದರಿಂದ ಇವರೇನಾ ಅವರು ಎಂಬ ಪ್ರಶ್ನೆ ಎದ್ದಿತ್ತು. ಇದನ್ನೂ ಓದಿ: ಮೈಸೂರಿಗೆ ಪೊಲೀಸ್ ಇನ್ಸ್ಪೆಕ್ಟರ್ ವಿವೇಕಾನಂದ ವರ್ಗಾವಣೆ – ಯತೀಂದ್ರ ಪ್ರಸ್ತಾಪಿಸಿದ್ದ ವಿವೇಕಾನಂದ ಇವರೇನಾ?