– ಸಿಹಿ ಹಂಚಿ ಸಿಎಂ ನಿವಾಸದೆದುರು ಸಂಭ್ರಮಾಚರಣೆ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ವಿಧಾನಸಭೆಯಲ್ಲಿ ರೈತರ ಸಾಲಮನ್ನಾ ಮಾಡುವ ಕುರಿತು ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ಬೇರೆ ಬೇರೆ ಭಾಗಗಳಿಂದ ರೈತರು ಆಗಮಿಸಿ ಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಕಾವೇರಿ ನಿವಾಸಕ್ಕೆ ಭೇಟಿ ನೀಡುತ್ತಿರೋ ರೈತರು, ಮತ್ತಷ್ಟು ಸಾಲಮನ್ನಾ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಅವರ ನಿವಾಸದ ಎದುರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯರಂತೆ ಪಂಚೆ ಶಲ್ಯ ಹಾಕಿಕೊಂಡು ಸಿಎಂ ಅವರನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಸಿಎಂಗೆ ಬಸವಣ್ಣ ಮೂರ್ತಿ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ.
Advertisement
Advertisement
ರಾಜ್ಯ ಸರ್ಕಾರದಿಂದ ಸಹಕಾರಿ ಬ್ಯಾಂಕ್‍ಗಳಿಂದ ರೈತರು ಪಡೆದ ಅಲ್ಪವಾಧಿ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. 2017ರ ಜೂನ್ 20ಕ್ಕೆ ಕೊನೆಗೊಂಡಂತೆ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಒಟ್ಟು 8165 ಕೋಟಿ ರೂ. ಅಲ್ಪವಾಧಿ ಸಾಲ ಮನ್ನಾವಾಗಲಿದ್ದು ಇದರಿಂದಾಗಿ 22 ಲಕ್ಷ ರೈತರಿಗೆ ಸಹಾಯವಾಗಲಿದೆ ಎಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದರು.
Advertisement
On behalf of our farmers, I request @PMOIndia to consider the acute drought & waive farmer loans from commercial banks. #EmpoweringKtaka
— CM of Karnataka (@CMofKarnataka) June 21, 2017
ರಾಜ್ಯ ಸರ್ಕಾರವು ಸಹಕಾರ ಸಂಸ್ಥೆಗಳಿಂದ ಪಡೆದ ಸಾಲಮನ್ನಾ ಮಾಡಿರುವುದರಿಂದ ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲವನ್ನು ಕೇಂದ್ರ ಮನ್ನಾ ಮಾಡಲಿ #EmpoweringKtaka
— CM of Karnataka (@CMofKarnataka) June 21, 2017
Loans worth Rs. 8165 crores will be waived, benefitting 22,27,506 farmers across state. We know that empowering farmers is #EmpoweringKtaka
— CM of Karnataka (@CMofKarnataka) June 21, 2017
ರಾಜ್ಯ ಸರ್ಕಾರವು ಸಹಕಾರಿ ಸಂಸ್ಥೆಗಳಡಿಯ ರೈತರ ಸಾಲ ಮನ್ನಾ ಮಾಡಿ ತನ್ನ ಬದ್ಧತೆ ತೋರಿಸಿದೆ. ಕೇಂದ್ರ ಸರ್ಕಾರ ಇನ್ನಾದರೂ ರೈತರ ನೆರವಿಗೆ ಧಾವಿಸಲಿ #EmpoweringKtaka
— CM of Karnataka (@CMofKarnataka) June 21, 2017
ರಾಜ್ಯ ಸರ್ಕಾರಕ್ಕೆ ಹೊರೆಯಾದರೂ ಸಹ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಏಕೈಕ ಉದ್ದೇಶದಿಂದ ನಮ್ಮ ಸರ್ಕಾರವು ಸಾಲಮನ್ನಾ ಕ್ರಮ ಕೈಗೊಂಡಿದೆ #EmpoweringKtaka
— CM of Karnataka (@CMofKarnataka) June 21, 2017
ರಾಜ್ಯ ಸರ್ಕಾರ ಮಾಡಲಿರುವ ರೈತರ ಸಾಲ ಮನ್ನಾ ಅಡಿ ಅಲ್ಪಾವಧಿ ಸಾಲ ಹಾಗೂ ಬೆಳೆ ಸಾಲಗಳು ಬರಲಿವೆ. ಸಾಲಮನ್ನಾ ಕುರಿತಾದ ಆದೇಶ ನಾಳೆಯೇ ಹೊರಬೀಳಲಿದೆ #EmpoweringKtaka
— CM of Karnataka (@CMofKarnataka) June 21, 2017
ದಿ.20/06/2017ಕ್ಕೆ ಅನ್ವಯಿಸುವಂತೆ ಸಹಕಾರಿ ಬ್ಯಾಂಕುಗಳಲ್ಲಿನ ರಾಜ್ಯದ ರೈತರ ರೂ.50 ಸಾವಿರ ವರೆಗಿನ ಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ #EmpoweringKtaka
— CM of Karnataka (@CMofKarnataka) June 21, 2017