ಮೈಸೂರು: ಮಾಧ್ಯಮಗಳ ಜೊತೆ ಮಾತನಾಡುವಾಗ ಗದ್ದಲ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಸಿಎಂ ಸಿದ್ದರಾಮಯ್ಯ (CM Siddaramaiah) ಹೊಡೆಯಲು ಮುಂದಾದ ಪ್ರಸಂಗ ಇಂದು ನಡೆದಿದೆ.
ಸಿದ್ದರಾಮಯ್ಯನವರು ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಸುತ್ತಲು ನಿಂತಿದ್ದ ನಾಯಕರು, ಕಾರ್ಯಕರ್ತರು ಮಾತನಾಡಿ ಗದ್ದಲ ಮಾಡುತ್ತಿದ್ದರು. ಕಾರ್ಯಕರ್ತ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಗರಂ ಆದ ಸಿದ್ದರಾಮಯ್ಯ ಜೋರು ಧ್ವನಿಯಲ್ಲಿ ಗದರಿ, ನಾಲಗೆ ಕಚ್ಚಿ ಕೈ ಎತ್ತಿದ್ದಾರೆ. ಇದನ್ನೂ ಓದಿ: ದೇವೇಗೌಡರು ನನ್ನ ಸೊಕ್ಕು ಮುರಿಯುತ್ತೇನೆ ಎಂದಿದ್ದು ಸರಿಯೇ – ಜಮೀರ್ ಹೇಳಿಕೆಯನ್ನ ಖಂಡಿಸಿದ್ದಕ್ಕೆ ಸಿಎಂ ತಿರುಗೇಟು
Advertisement
ನಾಲಗೆ ಕಚ್ಚಿ, ಜೋರು ಗದರಿ ಕೈ ಎತ್ತಿದ ಸಿದ್ದರಾಮಯ್ಯ
ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುವಾಗ ಗದ್ದಲ ಮಾಡುತ್ತಿದ್ದ ಕಾರ್ಯಕರ್ತರ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ಇಂದು ನಡೆಯಿತು.#Mysuru #Siddaramaiah #Media #ByElection #NarendraModi #Nagendra pic.twitter.com/QTkqgFexPl
— PublicTV (@publictvnews) November 13, 2024
ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆಗೆಯುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈ ಪ್ರಸ್ತಾವನೆ, ಮಾತುಕತೆ ಯಾವುದು ಸರ್ಕಾರದ ಮುಂದಿಲ್ಲ. ಡಿ.ಕೆ ಶಿವಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಅವರನ್ನೇ ಕೇಳಿ ಎಂದು ಕಡ್ಡಿ ತುಂಡಾಗುವಂತೆ ಹೇಳಿಕೆ ನೀಡಿದರು. ಇದನ್ನೂ ಓದಿ: ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ವಾಪಸ್? – ಹೈಕಮಾಂಡ್ ಲಾಬಿಗೆ ಮಣಿದ್ರಾ ಡಿಕೆಶಿ?
Advertisement
ನಾಗೇಂದ್ರ ಅವರನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೇಳಿದ್ದಾರೆ. ಉಪಚುನಾವಣೆಯ ಬಳಿಕ ನೋಡೋಣಾ ಎಂದು ಹೇಳಿದ್ದೇನೆ. ಅದನ್ನೇ ಪುನಾರಚನೆಎಂದು ಹೇಳಬೇಡಿ. ಸಂಪುಟ ಪುನಾರಚನೆ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದರು.
Advertisement