ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ವಿರುದ್ಧ ಸರಿಯಾದ ಕ್ರಮ ಜರುಗಿಸದಕ್ಕೆ ಸಿಎಂ, ಪರಂ ಅಸಮಾಧಾನ

Public TV
2 Min Read
Siddaramaiah Parameshwar 1

– ಪೊಲೀಸರಿಗೆ ಹೊಸ ಮಾದರಿಯ ಟೋಪಿಗೆ ಸಿಎಂ ಸಮ್ಮತಿ

ಬೆಂಗಳೂರು: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋಲನುಭವಿಸಿದ್ದ ಬಿಜೆಪಿ ಅಭ್ಯರ್ಥಿ ಮಣಿಕಂಡ ರಾಥೋಡ್ ವಿರುದ್ಧ ಸರಿಯಾಗಿ ಒಂದು ಕೇಸ್ ಹಾಕೋದಕ್ಕೆ ಆಗ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ನೃಪತುಂಗ ರಸ್ತೆಯಲ್ಲಿರುವ ಡಿ.ಜಿ.ಐಜಿಪಿ ಕಚೇರಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಕಲಬುರಗಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಮಾತನಾಡಿ, ಮಣಿಕಂಠ ರಾಥೋಡ್ ಬಹಿರಂಗವಾಗಿ ಅವರನ್ನು ಕೊಲೆ ಮಾಡುತ್ತೇನೆ, ಇವರನ್ನು ಕೊಲೆ ಮಾಡುತ್ತೇನೆ ಎಂದು ಹೇಳಿ ವಿಡಿಯೋ ಮಾಡಿ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದ. ಆತನ ವಿರುದ್ಧ ಕೇಸ್ ಹಾಕೋದಕ್ಕೆ ನಿಮಗೆ ಸಾಧ್ಯವಾಗ್ತಿಲ್ಲ ಎಂದಿದ್ದಾರೆ.ಇದನ್ನೂ ಓದಿ: ಹೊಸ ಆದಾಯ ತೆರಿಗೆ ನಿಯಮ ಜಾರಿ – ಸುಳ್ಳು ಮಾಹಿತಿ ನೀಡಿದ್ರೆ 200% ದಂಡ, ಜೈಲು

ಅಂಥವನ ಮೇಲೆ ನೀವು ಕಠಿಣ ಕ್ರಮಕೈಗೊಳ್ಳದೇ ಹೋದರೆ, ಬೇರೆಯವರಿಗೆ ಅವನು ಪ್ರೇರಣೆಯಾಗುತ್ತಾನೆ. ಅವನ ರೀತಿ ಮತ್ತಷ್ಟು ಮಂದಿ ಹುಟ್ಟಿಕೊಳ್ಳುತ್ತಾರೆ, ಹಾಗಾಗಿ ಮತ್ತೆ ಹಾಗೇನಾದರೂ ಮಾಡಿದ್ದು ಕಂಡುಬಂದರೆ ಕಠಿಣ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕ ಪೊಲೀಸರಿಗೆ ಹೊಸ ಮಾದರಿಯ ಟೋಪಿಗೆ ಸಮ್ಮತಿ ಸೂಚಿಸಿದ್ದಾರೆ. ಐದಾರು ರಾಜ್ಯದ ಟೋಪಿಗಳನ್ನು ಪರಿಶೀಲನೆ ಮಾಡಿದ ಸಿಎಂ ತೆಲಂಗಾಣ ರಾಜ್ಯದ ಟೋಪಿಯನ್ನು ಆಯ್ಕೆ ಮಾಡಿದ್ದಾರೆ. ತೆಲಂಗಾಣ ರಾಜ್ಯದ ಟೋಪಿಯನ್ನ ಹೆಡ್‌ ಕಾನ್ಸಟೇಬಲ್‌ಗೆ ಹಾಕಿಸಿ, ಪರಿಶೀಲನೆ ಮಾಡಿ ಅಂತಿಮಗೊಳಿಸಿದ್ದಾರೆ.

ಕಳೆದ ಅಧಿವೇಶನದಲ್ಲಿ ಶಾಸಕ ಸಿ.ಎನ್ ಮಂಜೇಗೌಡ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಒಂದೇ ರೀತಿಯ ಟೋಪಿ ನೀಡಬೇಕೆಂದು ಪ್ರಶ್ನೆ ಮಾಡಿದ್ದರು. ಇದನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಡಾ.ಪರಮೇಶ್ವರ್ ಅಂದಿನ ಡಿಜಿಐಜಿಪಿ ಅಲೋಕ್ ಮೋಹನ್‌ಗೆ ಸೂಚಿಸಿದ್ದರು. ಕೆಎಸ್‌ಆರ್‌ಪಿ ಉಮೇಶ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಟೋಪಿ ಬದಲಾವಣೆ ಕುರಿತು ಸಿವಿಲ್, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್, ಹಾಗೂ ಐಎಸ್‌ಡಿ ಸೇರಿ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳ ಹೆಡ್‌ಕಾನ್ಸಟೇಬಲ್ ಹಾಗೂ ಕಾನ್ಸಟೇಬಲ್‌ಗಳಿಂದ ಸಮಿತಿ ಅಭಿಪ್ರಾಯ ಸಂಗ್ರಹಿಸಿತ್ತು, ಅಲ್ಲದೆ ಕೇರಳ, ಮಹಾರಾಷ್ಟ್ರ, ಆಂದ್ರಪ್ರದೇಶ, ತಮಿಳುನಾಡು ಸೇರಿ ಹೊರ ರಾಜ್ಯದ ಪೊಲೀಸರ ಟೋಪಿ ಕುರಿತು ಮಾಹಿತಿ ಕಲೆ ಹಾಕಲಾಗಿತ್ತು.

ಈ ಎಲ್ಲಾ ಅಭಿಪ್ರಾಯ ಬಳಿಕ ಮೂರು ಬಾರಿ ಸಭೆ ಸೇರಿ, ಸಮಾಲೋಚನೆ ನಡೆಸಿ ಅಂತಿಮವಾಗಿ ತೆಲಂಗಾಣ ರಾಜ್ಯದ ಟೋಪಿಯನ್ನು ಸಿಎಂ ಸಿದ್ದರಾಮಯ್ಯ ಅಂತಿಮಗೊಳಿಸಿದ್ದಾರೆ.ಇದನ್ನೂ ಓದಿ: ಸರ್ಕಾರಿ ಕಚೇರಿ ಆವರಣದಲ್ಲೇ 3 ಶ್ರೀಗಂಧ ಮರಗಳ ಕಳ್ಳತನ – ಅರಣ್ಯ ಇಲಾಖೆ ಕಚೇರಿ ಕೂಗಳತೆ ದೂರದಲ್ಲೇ ಕೃತ್ಯ!

Share This Article