ದಾವಣಗೆರೆ: ಸಂಧಿ ಸಮಾಸದ ಪಾಠ ಮಾಡೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರಪತಿ ಹೆಸರು ಗೊತ್ತಿಲ್ಲದೇ ಚಡಪಡಿಸಿದ ಘಟನೆ ಇಂದು ನಡೆದಿದೆ.
ಜಿಲ್ಲೆಯ ಚನ್ನಗಿರಿಯಲ್ಲಿ ಬಹುಕೋಟಿ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಯವರು ಈ ಎಡವಟ್ಟು ಮಾಡಿದ್ದಾರೆ. ತಮ್ಮ ಭಾಷಣದ ವೇಳೆ ಕೋವಿಂದ್ ರನ್ನ ಗೋವಿಂದ್ ಎಂದ ಅವರು, ಯಾರ್ರಿ ಅವರು ರಾಷ್ಟ್ರಾಧ್ಯಕ್ಷರು ಗೋವಿಂದ.. ಪೂರ್ತಿ ಹೆಸ್ರೇನ್ರಿ ಅಂತ ವೇದಿಕೆ ಮೇಲಿದ್ದವರನ್ನ ಕೇಳುವ ಮೂಲಕ ಪೇಚಿಗೆ ಸಿಲುಕಿದರು.
Advertisement
Advertisement
ವೇದಿಕೆಯಲ್ಲಿದ್ದವರು ಹೇಳಿದ ಮೇಲೆ ಎಚ್ಚೆತ್ತ ಸಿದ್ದರಾಮಯ್ಯ ರಾಮನಾಥ ಗೋವಿಂದ್ ಅಲ್ಲ ಕೋವಿಂದ್.. ಕೋವಿಂದ್ ಎಂದು ಸರಿಪಡಿಸಿಕೊಂಡರು.’
Advertisement
ಇದನ್ನೂ ಓದಿ: ಸಿದ್ದರಾಮಯ್ಯಗೆ ಗೊತ್ತಿರೋದು ಒಂದೇ ಸಂಧಿ: ಸಿಎಂ ವ್ಯಾಕರಣದ ಬಗ್ಗೆ ವಿಶ್ವನಾಥ್ ವ್ಯಂಗ್ಯ
Advertisement
ಕೆಲ ತಿಂಗಳ ಹಿಂದೆ ಮೈಸೂರಿನ ಮೃಗಾಲಯದಲ್ಲಿ ಸಿಎಂ ಸಂಧಿ ಪಾಠ ಮಾಡಿದ್ದರು. ಮೃಗ + ಆಲಯ ಇದು ಸವರ್ಣದೀರ್ಘ ಸಂಧಿ, ಗುಣಸಂಧಿ ಅಂದರೆ ಏನು ಗೊತ್ತಾ ಎಂದು ಸಿಎಂ ಸಭಿಕರನ್ನು ಪ್ರಶ್ನೆ ಮಾಡಿದ್ದರು. ಆ ಬಳಿಕ ಶಿಕ್ಷಕರ ದಿನಾಚರಣೆಯಂದು ಮತ್ತೊಮ್ಮೆ ಕನ್ನಡ ವ್ಯಾಕರಣದ ಕುರಿತು ಮಾತನಾಡಿದ್ದರು.
ಇದನ್ನೂ ಓದಿ: ಶಿಕ್ಷಕರ ಮುಂದೆ ಸಂಧಿ ಪಾಠ – ವೇದಿಕೆಯಲ್ಲೇ ಶರವಣರ ಕಾಲೆಳೆದ ಸಿಎಂ