ಬೆಂಗಳೂರು: ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ, ಸಿಎಂ ಸಿದ್ದರಾಮಯ್ಯ (Siddaramaiah) ಅವರು ರಾಜಕೀಯ ಹಾಗೂ ಕಾನೂನು ಎರಡೂ ಹೋರಾಟಗಳನ್ನು ಒಟ್ಟೊಟ್ಟಿಗೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಕಾನೂನು ಹೋರಾಟಕ್ಕೆ ವಕೀಲರ ನೆರವು ಸಿಗಲಿದೆ. ಆದರೆ ರಾಜಕೀಯ ಹೋರಾಟಕ್ಕೆ ಪಕ್ಷದ ನೆರವು ಅನಿವಾರ್ಯವಾಗಿದೆ. ಸಂಪುಟ ಸಹುದ್ಯೋಗಿಗಳು ಸೇರಿದಂತೆ ಶಾಸಕರು ಹಾಗೂ ಹೈಕಮಾಂಡ್ ನಾಯಕರು ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಳ್ಳೆಬೇಕಾದ ಧರ್ಮ ಸಂಕಟದಲ್ಲಿ ಸಿಎಂ ಸಿಲುಕಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧದ ಕೇಸ್ ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ಬೇಡ: ಕುಮಾರಸ್ವಾಮಿ
Advertisement
Advertisement
ಪ್ರತಿ ಹಂತದಲ್ಲೂ ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆಯಲ್ಲಿ ಅವರು ಸಿಲುಕಿದ್ದಾರೆ. ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊತ್ಯುವವರೆಗೂ ಒತ್ತಡಕ್ಕೆ ಸಿಲುಕಲಿದ್ದಾರೆ.
Advertisement
ಸಿಎಂಗೆ ಎದುರಾಗಲಿರುವ ಸಂಕಷ್ಟಗಳು!
ಕೋರ್ಟ್ ಮುಂದೆ ನಿಲ್ಲಬೇಕಾದ ಅನಿವಾರ್ಯತೆ, ಪತ್ನಿ ಸಹ ಕೋರ್ಟ್ ಹೋಗಬೇಕಾದ ಮುಜುಗರ, ಆಡಳಿತದ ಜೊತೆ ಕೋರ್ಟ್ ಕೇಸ್ ನಿರ್ವಹಿಸಬೇಕಾದ ಒತ್ತಡ, ಮುಡಾ ನಿವೇಶನ ವಾಪಸ್ ಕೊಡಬೇಕಾಗಬಹುದು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ನಿರ್ದೋಷಿಯಾಗಿ ಮತ್ತೆ ಸಿಎಂ ಆಗಲಿ: ಸುರೇಶ್ ಬಾಬು
Advertisement
ಕೇಸ್ ತಿರುವು ಪಡೆದರೆ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾದ ಆತಂಕ. ಹೈಕಮಾಂಡ್ ಬೆಂಬಲ, ಆಪ್ತ ವಲಯವೂ ದೂರ ಸರಿಯುವ ಸಾಧ್ಯತೆ, ಪಕ್ಷದ ಮೇಲಿನ ಹಿಡಿತ ಕಡಿಮೆಯಾಗದಂತೆ ನೋಡಿಕೊಳ್ಳಬೇಕಾದ ಸವಾಲು, ಪ್ರತಿಪಕ್ಷಗಳಿಂದ ನಿರಂತರವಾಗಿ ಟೀಕೆ ಎದುರುಸಬೇಕಾದ ಅನಿವಾರ್ಯತೆ, ಅಧಿಕಾರಿಗಳ ಮೇಲಿನ ಹಿಡಿತ ಸಡಿಲವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಈ ಸಿಎಂಗಿದೆ ಎನ್ನಲಾಗಿದೆ.