-ಪಾಳೇಗಾರಿಕೆ ಪ್ರವೃತ್ತಿ ಇರೋರನ್ನ ರಾಜಕೀಯದಿಂದ ಓಡಿಸ್ಬೇಕು
-ಪೋಕ್ಸೋ ಕೇಸ್ ಇರೋ ಬಿಎಸ್‍ವೈ ನನ್ನ ರಾಜೀನಾಮೆ ಕೇಳ್ತಾರೆ
ಮೈಸೂರು: ದೇವೇಗೌಡರು, ಕುಮಾರಸ್ವಾಮಿ (H.D Kumaraswamy) ಕೊಟ್ಟ ಮಾತಿನಂತೆ ನಡೆದುಕೊಳ್ಳಲ್ಲ. ಸೇಡಿನ ರಾಜಕೀಯ ಮಾಡುವ ಮನಸ್ಥಿತಿ ಇರೋದು ದೇವೇಗೌಡರು ಹಾಗೂ ಅವರ ಕುಟುಂಬಕ್ಕೆ. ಇನ್ನೊಬ್ಬರು ಅಧಿಕಾರ ಮಾಡುವುದನ್ನು ಕುಮಾರಸ್ವಾಮಿ, ದೇವೇಗೌಡರು ಸಹಿಸಲ್ಲ. ನಮ್ಮ ಸರ್ಕಾರವನ್ನು ಅಸ್ಥಿರ ಮಾಡುವ ದುಷ್ಟ ಪ್ರಯತ್ನವನ್ನು ದೇವೇಗೌಡರು ಮಾಡ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತೀವ್ರ ವಾಗ್ದಾಳಿ ನಡೆಸಿದ್ದಾರೆ.
Advertisement
ಮೈಸೂರಿನಲ್ಲಿ (Mysuru) ಕಾಂಗ್ರೆಸ್ (Congress) ಸಮಾವೇಶದಲ್ಲಿ ಅವರು ಮಾತನಾಡಿದರು. ಈ ವೇಳೆ ಮಹಾತ್ಮ ಗಾಂಧಿಯವರು ದೇಶದ ಜನರಿಗೆ ಕರೆ ಕೊಟ್ಟದಿನ. ಬ್ರಿಟಿಷರಿಗೆ ಎಚ್ಚರಿಕೆ ಕೊಟ್ಟು ಕಹಳೆ ಊದಿದ ದಿನ. ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಆ ದಿನವೇ ಸಮಾವೇಶ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.
Advertisement
ಇವತ್ತು ನಮ್ಮನಾಡು, ದೇಶದಲ್ಲಿ ಕೋಮುವಾದಿ, ಜಾತಿವಾದಿ, ಪಾಳೇಗಾರಿಕೆ ಪ್ರವೃತ್ತಿ ಇರೋರನ್ನು ರಾಜಕೀಯದಿಂದ ಓಡಿಸಬೇಕು. ಮನುವಾದಿಗಳು, ಜಾತಿವಾದಿಗಳು, ಶೋಷಿತರು ಅಧಿಕಾರ ಮಾಡೋದನ್ನು ಸಹಿಸಲ್ಲ. ದೇವರಾಜ ಅರಸು, ಬಂಗಾರಪ್ಪ, ಮೋಯ್ಲಿಯವರಿಗೆ ಇದೇ ಗತಿ ಆಗಿತ್ತು. ಧರ್ಮಸಿಂಗ್ ಅವರಿಗೆ ಕೊಟ್ಟ ಮಾತನ್ನು ತಪ್ಪಿದ್ದರು. ಬಿಜೆಪಿ ಜೊತೆ ಅಧಿಕಾರ ಮಾಡಿದ್ದರು. ಈ ಮನಸ್ಥಿತಿಯನ್ನು ವಿರೋಧಿಸಲು ಸಮಾವೇಶ ಮಾಡುತ್ತಿದ್ದೇವೆ ಎಂದಿದ್ದಾರೆ.
Advertisement
Advertisement
ಬಿಜೆಪಿ-ಜೆಡಿಎಸ್‍ನವರು ಒಬ್ಬರಿಗೊಬ್ಬರು ಹೇಗೆ ಬೈದಾಡಿಕೊಂಡಿದ್ದರು. ನರೇಂದ್ರ ಮೋದಿ ಪ್ರಧಾನಿ ಆದರೆ ದೇಶದಲ್ಲಿ ಇರಲ್ಲ ಎಂದು ದೇವೇಗೌಡರು ಹೇಳಿದ್ದರು. 2006 ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ರೆ ನನ್ನ ಹೆಣದ ಮೇಲೆ ಮಾಡಬೇಕು ಎಂದಿದ್ದರು. ಈಗ ಕೋಮುವಾದಿಗಳ ಜೊತೆ ಸೇರಿ ಷಡ್ಯಂತ್ರ ಮಾಡಿದ್ದೀರಿ. ನಮ್ಮ ಸರ್ಕಾರವನ್ನು ಕೆಡವಲು ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ. ನಾನು 4 ದಶಕಗಳಿಂದ ರಾಜಕೀಯದಲ್ಲಿ ಇದ್ದೀನಿ. ಅಂದಿನಿಂದ ಇಂದಿನವರೆಗೆ ಅನೇಕ ಖಾತೆಗಳು ಸಿಕ್ಕಿವೆ. ಜನರ ಆಶೀರ್ವಾದದ ಫಲದಿಂದ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದೇನೆ ಎಂದು ಅವರು ಹೇಳಿದ್ದಾರೆ.
ನನ್ನ ರಾಜಕೀಯದ 40 ವರ್ಷಗಳಲ್ಲಿ ಯಾವುದೇ ಕಪ್ಪುಚುಕ್ಕಿ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕವಿದ್ದ ಹಾಗೆ. ಇಷ್ಟೆಲ್ಲಾ ಅಧಿಕಾರ ಸಿಕ್ಕಿದರೂ ಆಸ್ತಿ ಮಾಡುವ ವ್ಯಾಮೋಹ ಬರಲಿಲ್ಲ. ನನ್ನ ಧರ್ಮ ಪತ್ನಿ ಪಾರ್ವತಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಬಂದಿಲ್ಲ. ನಾನು ಪ್ರಮಾಣವಚನ ಸ್ವೀಕಾರ ಮಾಡುವಾಗಲೂ ಬಂದಿಲ್ಲ. ಇಲ್ಲಿರುವವರು ಅನೇಕರು ನನ್ನ ಹೆಂಡತಿ ಮುಖ ನೋಡಿಲ್ಲ. ಅವರು ತಪ್ಪು ಮಾಡಲು ಸಾಧ್ಯನಾ? ನಾನು ತಪ್ಪು ಮಾಡಲು ಸಾಧ್ಯನಾ? ನಾನು ರಾಜಕೀಯದಲ್ಲಿ ಇರುವವರೆಗೆ ಜನರಿಗೆ ದ್ರೋಹ ಮಾಡುವುದಿಲ್ಲ ಎಂದಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಆದೇಶ ಇಲ್ಲ, ನನ್ನ ಪತ್ರ ಇಲ್ಲ. ಆದರೂ ನನ್ನ ರಾಜೀನಾಮೆ ಕೇಳ್ತಾರೆ. ಅಶೋಕ್, ವಿಜಯೇಂದ್ರ, ಯಡಿಯೂರಪ್ಪ, ಕುಮಾರಸ್ವಾಮಿಗೆ ಯಾವ ನೈತಿಕತೆ ಇದೆ? ಯಡಿಯೂರಪ್ಪಗೆ ಮಾನ ಮರ್ಯಾದೆ ಇದ್ದಿದ್ರೆ ರಾಜಕೀಯದಿಂದ ನಿವೃತ್ತಿಯಾಗಬೇಕಿತ್ತು. 82 ವರ್ಷ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಮಾಡಿ ಪೋಕ್ಸೋ ಕೇಸ್‍ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ನನ್ನ ರಾಜೀನಾಮೆ ಕೇಳ್ತಾರೆ. ಮಿಸ್ಟರ್ ಯಡಿಯೂರಪ್ಪ ನೀವು ಒಂದಾ, ಎರಡಾ 18, 20 ಹಗರಣಗಳಲ್ಲಿ ಸಿಕ್ಕಿದ್ದೀರಾ? ವಿಜಯೇಂದ್ರ ಅನೇಕ ಹಗರಣಗಳಲ್ಲಿ ಸಿಕ್ಕಿದ್ದಾರೆ. ಯತ್ನಾಳ್ ಈ ಬಗ್ಗೆ ಹೇಳಿದ್ದಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ಕೃಷ್ಣ ಮೇಲ್ದಂಡೆಯಲ್ಲಿ ಕುಮಾರಸ್ವಾಮಿ ಹಗರಣ ಮಾಡಿದ್ದಾರೆ. ಜಂತ್ ಕಲ್ ಮೈನಿಂಗ್‍ನಲ್ಲಿ ಕುಮಾರಸ್ವಾಮಿ ಹಗರಣ ಮಾಡಿದ್ದಾರೆ. ನಿಮಗೆ ನನ್ನ ರಾಜೀನಾಮೆ ಕೇಳಲು ಮಾನ ಮರ್ಯಾದೆ ಇದೆಯಾ? ಆರ್.ಅಶೋಕ್ ಬಿಎಂ ಕಾವಲ್‍ನಲ್ಲಿ ಜಮೀನು ಹಂಚಿದ್ದಾರೆ. ಕೋರ್ಟ್‍ಗೆ ಹೋಗಿ ಜಾಮೀನು ತಗೊಂಡಿದ್ದಾರೆ. ನಾಚಿಕೆ ಆಗಲ್ವಾ? ಯಡಿಯೂರಪ್ಪ ತರ ಚೆಕ್ ಮೂಲಕ ಲಂಚ ತಗೊಂಡಿದ್ದೀನಾ? ಯಡಿಯೂರಪ್ಪ ರೀತಿ ಡಿನೋಟಿಫೀಕೇಶನ್ ಮಾಡಿದ್ದೀನಾ? ನಾನು ಸೇಡಿನ ದ್ವೇಷದ ರಾಜಕಾರಣ ಮಾಡಿದ್ದರೆ ಇವತ್ತಿನ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ನಾನು ದ್ವೇಷದ, ಸೇಡಿನ ರಾಜಕಾರಣ ಮಾಡಿದ್ದರೆ ಇವರೆಲ್ಲಾ ಜೈಲಿಗೆ ಹೋಗಿರುತ್ತಿದ್ದರು ಎಂದು ಎಚ್ಚರಿಕೆ ನೀಡಿದ್ದಾರೆ.
ನನಗೆ ಆಸ್ತಿ ವ್ಯಾಮೋಹ ಇದ್ದಿದ್ರೆ ಕೋಟಿಗಟ್ಟಲೆ ಹಣ ಮಾಡಬಹುದಿತ್ತು. ಮೊನ್ನೆ ಮೊನ್ನೆವರೆಗೂ ಮೈಸೂರಿನಲ್ಲಿ ಮನೆ ಇರಲಿಲ್ಲ. ಈಗ ಮನೆ ಕಟ್ಟುತ್ತಿದ್ದೇನೆ. ಎರಡು ಮನೆ ಕಟ್ಟಿ ಅದರ ಸಾಲ ತೀರಿಸಲು ಮನೆಯನ್ನೇ ಮಾರಿ ಬಿಟ್ಟೆ. 30 ಲಕ್ಷ ರೂ. ಬ್ಯಾಂಕ್ ಸಾಲ ಕಟ್ಟಲು ಆಗದೆ ಮನೆ ಮಾರಿ ಬಿಟ್ಟೆ. ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಒಂದೇ ಒಂದು ಸೈಟ್ ಇದ್ದರೆ ತೋರಿಸಿ ಎಂದು ಸವಾಲು ಹಾಕಿದ್ದಾರೆ.
ನಾನು ರಾಜಕೀಯ ಪ್ರಾರಂಭ ಮಾಡಿದ್ದು ಜಿರೋದಿಂದ. ನನ್ನ ಮೊದಲ ಚುನಾವಣೆಗೆ ಠೇವಣಿ ಕಟ್ಟಲು ಒಂದು ರೂಪಾಯಿ ಇರಲಿಲ್ಲ. ಆಗ ಕೋರ್ಟ್‍ನಲ್ಲಿ ಲಾಯರ್ ಕೆಲಸ ಮಾಡುತ್ತಿದ್ದೆ. ಚಾಮುಂಡೇಶ್ವರಿ ಜನ ಬಂದು ಚುನಾವಣೆಗೆ ನಿಲ್ಲಿ ಎಂದಿದ್ದರು. ನಮ್ಮ ಆಫೀಸ್ ಕ್ಲರ್ಕ್ 250 ರೂ. ಠೇವಣಿ ಕೊಟ್ಟಿದ್ದ. ಚುನಾವಣೆಗೆ ಜನರೇ ದುಡ್ಡು ಕೊಟ್ಟು ಗೆಲ್ಲಿಸಿದ್ದರು. 63 ಸಾವಿರ ರೂ. ಆಗ ಖರ್ಚು ಆಯ್ತು. ನಮ್ಮದು ಶ್ರೀಮಂತ ಕುಟುಂಬ ಅಲ್ಲ. ಹೊಟ್ಟೆ ಬಟ್ಟೆಗೆ ನೇರವಾದ ಕುಟುಂಬ. ನಮ್ಮಪ್ಪ ಚುನಾವಣೆಗೆ ನಿಲ್ಲಬಾರದು ಎಂದಿದ್ದರು. ಆಗ ನಾನು ಪಂಚಾಯಿತಿ ಸೇರಿಸಿ, ಒಂದು ರೂಪಾಯಿ ಕೊಡಬೇಡಾ ನಾನು ಹಾಗೆ ಗೆಲ್ಲುತ್ತೇನೆ ಎಂದಿದ್ದೆ. ಆಗ ನಮ್ಮಪ್ಪ ಒಪ್ಪಿಕೊಂಡಿದ್ದರು ಎಂದು ಅವರು ಹಳೆ ನೆನಪನ್ನ ಅವರು ಮೆಲುಕು ಹಾಕಿದ್ದಾರೆ.
ನನ್ನ 9 ಚುನಾವಣೆಗಳನ್ನು ಜನರೇ ಗೆಲ್ಲಿಸಿದ್ದಾರೆ. ನಾನು ಮನೆಯಿಂದ ಒಂದು ರೂಪಾಯಿ ಖರ್ಚು ಮಾಡಿಲ್ಲ. ಜನರಿಗೆ ನ್ಯಾಯ ಸಿಗಬೇಕೆಂದು ಹೋರಾಟ ಮಾಡ್ತಾ ಇದೀನಿ. ನಾನು ಬದುಕಿರುವ ವರೆಗೂ ಹೋರಾಟ ಮಾಡುತ್ತೇನೆ. ಬಿಜೆಪಿ-ಜೆಡಿಎಸ್ ದುರುದ್ದೇಶದಿಂದ ಎಷ್ಟೇ ಪಾದಯಾತ್ರೆ ಮಾಡಿದ್ರೆ ನಾನು ಜಗ್ಗೋನು ಅಲ್ಲ, ಬಗ್ಗೋನು ಅಲ್ಲ. ಇದೇ ವೇಳೆ ಜನರ ಆಶೀರ್ವಾದ ಎಲ್ಲಿಯವರೆಗೆ ಇರುತ್ತೋ ಅಲ್ಲಿವರೆಗೆ ನನ್ನನ್ನು ಮುಟ್ಟೋಕೆ ಆಗಲ್ಲ. ದೇವರಾಜ ಅರಸು ನಂತರ 5 ವರ್ಷ ಪೂರ್ಣ ಮಾಡಿದ ಸಿಎಂ ನಾನೇ. ಬಿಜೆಪಿ-ಜೆಡಿಎಸ್‍ನಿಂದ ನನ್ನ, ಸರ್ಕಾರವನ್ನು ಅಲುಗಾಡಿಲು ಸಾಧ್ಯವಿಲ್ಲ ಎಂದು ದೋಸ್ತಿಗಳಿಗೆ ಟಾಂಗ್ ಕೊಟ್ಟಿದ್ದಾರೆ.