ಮೈಸೂರು: ನಾನಿನ್ನೂ 25 ವರ್ಷ ಬದುಕುತ್ತೀನಿ. ನೂರು ವರ್ಷಕ್ಕಿಂತ ಹೆಚ್ಚು ಬದುಕಬೇಕು ಅಂದುಕೊಂಡಿದ್ದೇನೆ ಎಂದು ಶತಾಯುಷಿಯಾಗಿ ಬದುಕುವ ಆಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಮೈಸೂರಿನಲ್ಲಿ (Mysuru) ನಡೆದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಜತ ಮಹೋತ್ಸವವನ್ನೂ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಸುವರ್ಣ ಮಹೋತ್ಸವವನ್ನೂ ನಾನೇ ಉದ್ಘಾಟನೆ ಮಾಡಬೇಕು ಅಂದುಕೊಂಡಿದ್ದೇನೆ ಎಂದು ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಜಬ್ ವಿಚಾರದಲ್ಲಿ ಕಾನೂನಿನಂತೆ ಕ್ರಮ: ಮಧು ಬಂಗಾರಪ್ಪ
Advertisement
Advertisement
ನೂರು ವರ್ಷಕ್ಕಿಂತ ಹೆಚ್ಚು ಬದುಕಬೇಕು ಅಂದುಕೊಂಡಿದ್ದೇನೆ. ಏಯ್, ಬಸವೇಗೌಡ ಇನ್ನು 25 ವರ್ಷ ಬದುಕುತ್ತೀನಿ ಎಂದು ಶತಾಯುಷಿಯಾಗಿ ಬದುಕುವ ಆಸೆಯನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದರು.
Advertisement
ಮೈಸೂರಲ್ಲೇ ಫಿಲಂ ಸಿಟಿ ಮಾಡ್ತೀವಿ. ಮೈಸೂರು ಬಿಟ್ಟು ಎಲ್ಲೂ ಮಾಡಲ್ಲ. ಮೈಸೂರು ಪ್ರವಾಸೋದ್ಯಮ ದೃಷ್ಟಿಯಿಂದ ಸರ್ಕಾರ ಕೈ ಜೋಡಿಸಲಿದೆ. ಬೆಂಗಳೂರು ಮೈಸೂರು ಹೈವೇ ಮಾಡಿದ್ದು ನಾನು, ಮಹದೇವಪ್ಪ. ನಿಮ್ಮ ಎಂಪಿ ಪ್ರತಾಪ್ ಸಿಂಹ ಮಾಡಿದ್ದಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಗೆ ಹಿಜಬ್ ಅಸ್ತ್ರ, ಕಾಂಗ್ರೆಸ್‍ನಲ್ಲಿ ಸ್ಟ್ಯಾಂಡ್ ಗೊಂದಲ
Advertisement
ನಿಮ್ಮ ಎಂಪಿ ಬುರುಡೆ ಹೊಡಿತಾನೆ. ನೀವು ಸುಮ್ಮನೆ ಚಪ್ಪಾಳೆ ಹೊಡಿತೀರಿ. ಬಿಜೆಪಿ ಶಾಸಕ ಶ್ರೀವತ್ಸ ಹೆಸರೇಳಿ ಸಿಎಂ ಟಾಂಗ್ ಕೊಟ್ಟರು.