ಡೀಲ್ ಮಾಡೋದ್ರಲ್ಲಿ ಸಿದ್ದರಾಮಯ್ಯ ಪರಿಣತಿ ಹೊಂದಿದ್ದಾರೆ: ಸಿಎಂಗೆ ಹೆಚ್‍ಡಿಕೆ ತಿರುಗೇಟು

Public TV
1 Min Read
HDK CM

ತುಮಕೂರು: ಸಿಎಂ ಸಿದ್ದರಾಮಯ್ಯರ ಮಾತಿಗೆ ನನ್ನ ಸಹಮತವಿದೆ. ಅಧಿಕಾರಗಳ ಜೊತೆ ಡೀಲ್ ಮಾಡಿಕೊಳ್ಳುವುದು ಸಿದ್ದರಾಮಯ್ಯರಿಗೆ ಮಾತ್ರ ಕರಗತ. ನಾವು ಆ ಜಾಯಮಾನದಿಂದ ಬಂದವರಲ್ಲ. ಸಿಎಂ ಹೇಳಿರೊದ್ರಲ್ಲಿ ಯಾವುದೇ ತಪ್ಪಿಲ್ಲ ಅಂತಾ ಪರೋಕ್ಷವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಅಧಿಕಾರಿಗಳ ಜೊತೆ ಡೀಲ್ ಮಾಡಿಕೊಳ್ಳುವುದು, ಕಿಕ್ ಬ್ಯಾಕ್ ಗಳ ವ್ಯವಹಾರ, ಹೇಗೆ ರುಜು ಹಾಕಿಕೊಳ್ಳಬೇಕು ಎಂಬ ವಿಷಯದಲ್ಲಿ ಸಿದ್ದರಾಮಯ್ಯ ಪರಿಣತಿ ಹೊಂದಿದ್ದಾರೆ. ಪರಿಣತಿ ಹೊಂದಿದವರಿಗೆ ನಾವು ಒಳ್ಳೆಯ ಕೆಲಸ ಮಾಡಿ ಅಂತಾ ಹೇಳಿಕೊಡಲಾಗುವುದಿಲ್ಲ. ಸಿದ್ದರಾಮಯ್ಯ ಇರುವುದೇ ಈ ರಾಜ್ಯ ಲೂಟಿ ಮಾಡೋದಕ್ಕೆ ಅನ್ನೋದು ಅಂಕಿ ಅಂಶಗಳಿಂದ ಸಾಬೀತಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರಯವ ಬಗ್ಗೆ ಪತ್ರಿಕೆಯೊಂದು ಬಹಿರಂಂಗ ಪಡಿಸಿದೆ ಅಂತಾ ಕಳವಳ ವ್ಯಕ್ತಪಡಿಸಿದ್ರು.
vlcsnap 2018 03 10 15h17m51s926

ರಾಜ್ಯದ ಬೊಕ್ಕಸ ದಿವಾಳಿ ಮಾಡಿ ಹೋಗುತ್ತಿದ್ದಾರೆ. ಸಿದ್ದರಾಮಯ್ಯನವರ ದುರಂಹಕಾರ, ಗರ್ವ, ದುಡ್ಡಿನ ಮದ ಅವರನ್ನ ಈ ರೀತಿ ಮಾತನಾಡಿಸ್ತಿದೆ. ಹಾಗಾಗಿ ನಾನು ಸಿದ್ದರಾಮಯ್ಯರಿಗೆ ದುಡ್ಡು ಹೊಡೆಯೋ ಕೆಲಸದಲ್ಲಿ ಪಾಠ ಹೇಳಿಕೊಡುವ ದೊಡ್ಡ ವ್ಯಕ್ತಿಯಲ್ಲ. ಆರೋಗ್ಯ ಸಚಿವರೇ ವಿಧಾನ ಸಭೆಯಲ್ಲಿ ಹೇಳಿದ್ರು ಲಂಚ ತಗೋಳೊದು ತಪ್ಪಿಲ್ಲ ಎಂದು ದುಡ್ಡು ಹೊಡೆಯೋದನ್ನ ನಾವು ಕಲ್ತಿದ್ದೇವೆ ನೀವೂ ಕಲಿತುಕೊಳ್ಳಿ ಎಂದು ವಿಧಾನ ಸಭೆಯಲ್ಲಿ ಪಾಠ ಮಾಡಿದ್ದಾರೆ ಅಂತಾ ಅಂದ್ರು.

ವೃದ್ದಾಪ್ಯ ಮತ್ತು ವಿಧವಾ ವೇತನವನ್ನು ನೀಡುವುದನ್ನು ನಿಲ್ಲಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಚುನಾವಣೆಗೆ ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಅಂತಾ ಹೆಚ್‍ಡಿಕೆ ಆರೋಪಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *