ದಾವಣಗೆರೆ: ಹಂದಿ ತಿಂದು ಮಸೀದಿಗೆ ಹೋಗುವಂತೆ ಸಿಎಂಗೆ ಬಿಜೆಪಿಯವರು ಆಹ್ವಾನ ನೀಡುವ ಮೂಲಕ ಬಿಜೆಪಿಯವರು ಮುಸ್ಲಿಂ ಸಮುದಾಯವನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ ಎಂದು ತೋಟಗಾರಿಕೆ ಸಚಿವ ಎಸ್‍ಎಸ್ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಅವರಿಗೆ ಒಣ ತರಲೆ ಮಾಡುವುದೇ ಕೆಲಸ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮೀನು ತಿಂದು ದೇವಸ್ಥಾನದ ಒಳಗೆ ಹೋಗಿಲ್ಲ. ಅವರು ದೇವಾಲಯದ ಹೊರಗೆ ನಿಂತು ಪೂಜೆ ಮಾಡಿದ್ದಾರೆ. ನಾನು ಕೂಡ ಮಾಂಸ ಸೇವನೆ ಮಾಡುತ್ತೇನೆ. ಅದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು.
Advertisement
ಯಡಿಯೂರಪ್ಪನವರು ಟಿಪ್ಪು ಜಯಂತಿ ಆಚರಣೆ ಮಾಡಿದ್ದು, ಅವರು ಈಗ ಏಕೆ ಸುಮ್ಮನಿದ್ದಾರೆ. ನಾವು ಟಿಪ್ಪು ಜಯಂತಿ ಆಚರಣೆ ಮಾಡುತ್ತೇನೆ. ಶಿಷ್ಟಾಚಾರವಾಗಿ ಎಲ್ಲರನ್ನೂ ಆಹ್ವಾನ ಮಾಡುತ್ತೇವೆ ಬರುವುದು ಬಿಡುವುದು ಅವರಿಗೆ ಬಿಟ್ಟವಿಚಾರ ಎಂದು ಮಲ್ಲಿಕಾರ್ಜುನ್ ತಿಳಿಸಿದರು.
Advertisement
ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ವೇಳೆ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನ ಬಂಟ್ವಾಳದಲ್ಲಿ ಕಾರ್ಯಕ್ರಮ ಮುಗಿಸಿ, ಬಂಟ್ವಾಳ ಐಬಿಯಲ್ಲಿ ಕರಾವಳಿ ಖಾದ್ಯ ಮೀನಿನ ಊಟವನ್ನು ಸೇವಿಸಿದ್ದರು. ಆ ಬಳಿಕ ಸಿಎಂ ನೇರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದರು. ಈ ವಿಚಾರದ ಬಗ್ಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಎಂ ನಡೆಯ ಬಗ್ಗೆ ಭಾರೀ ಚರ್ಚೆ ನಡೆದಿತ್ತು.
Advertisement
ಇದನ್ನೂ ಓದಿ: ಹಂದಿ ತಿಂದು ಮಸೀದಿಗೆ ಹೋಗ್ಲಿ, ಅಹಂಕಾರಿ ಸಿಎಂಗೆ ಆ ಧೈರ್ಯ ಇದ್ಯಾ: ಸೊಗಡು ಶಿವಣ್ಣ ಸವಾಲು
Advertisement
ಮೀನಿನ ಖಾದ್ಯ ಸೇವಿಸಿ ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ತಾಕತ್ತಿದ್ದರೆ ಹಂದಿ ಮಾಂಸ ಸೇವಿಸಿ ಮಸೀದಿಗೆ ಭೇಟಿ ನೀಡಲಿ ಎಂದು ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಮಂಗಳವಾರ ತಿರುಗೇಟು ನೀಡಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಮೀನು ಮಾಂಸ ಸೇವಿಸಿ ಮಂಜುನಾಥನ ದರ್ಶನ ಪಡೆದಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯನವರು ಧಾರವಾಡದ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ದೇವರು ಮಾಂಸ ಆಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ಹೇಳಿಲ್ಲ. ಬೇಡರ ಕಣ್ಣಪ್ಪ ಕೂಡಾ ಶಿವನಿಗೆ ಜಿಂಕೆ ಮಾಂಸ ನೈವೇದ್ಯ ಮಾಡಿದ್ದ. ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ಎಂದು ಹೇಳಿದ್ದರು.