ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ (Sindhanur) ಪ್ರಥಮ ಬಾರಿಗೆ 9 ದಿನಗಳ ಕಾಲ ಆಚರಿಸುತ್ತಿರುವ ದಸರಾ ಮಹೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಚಾಲನೆ ನೀಡಿದರು. ನಗರದ ಗಾಂಧಿ ವೃತ್ತದಲ್ಲಿ ಮಳೆ ನಡುವೆಯು ಅಂಬಾದೇವಿಗೆ ಪೂಜೆ ಸಲ್ಲಿಸಿ ದಸರಾ ಮೆರವಣಿಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು.
ದಸರಾ (Dasara) ಮೆರವಣಿಗೆ ಬಳಿಕ ನಗರದ ಸರ್ಕಾರಿ ಪದವಿ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ ಹಾಗೂ ಕಲಂ 371 ಜೆ ದಶಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ದಸರಾ ಖುಷಿ, ಸಂತೋಷ ತರುವಂತ ಹಬ್ಬ. ನಮ್ಮ ಸಂಸ್ಕೃತಿಯನ್ನ ರಾಜ್ಯ ದೇಶಕ್ಕೆ ಸಾರುವಂತ ಹಬ್ಬ ಇದು. ಸಿಂಧನೂರಿನಲ್ಲಿ ಪಕ್ಷಾತೀತವಾಗಿ ದಸರಾ ಮಾಡುತ್ತಿರುವುದು ಸಂತೋಷದ ವಿಷಯ. ಎಲ್ಲೆಡೆ ದಸರಾ ಮಾಡುತ್ತಿದ್ದಾರೆ. ಅದ್ಧೂರಿಯಾಗಿ ದಸರಾ ಆಚರಿಸಲು ನಾನು ಕರೆ ಕೊಟ್ಟಿದ್ದೇನೆ. ಕಳೆದ ವರ್ಷ ಬರಗಾಲಯಿತ್ತು. ಈ ವರ್ಷ ಎಲ್ಲಾ ಜಲಾಶಯಗಳು ತುಂಬಿವೆ. ಒಳ್ಳೆಯ ಬೆಳೆಯಿದೆ ಎಂದರು. ಇದನ್ನೂ ಓದಿ: ದೇಶದ ರೈತರಿಗೆ ನವರಾತ್ರಿ ಗಿಫ್ಟ್ – ಶನಿವಾರ ಪ್ರಧಾನಿ ಮೋದಿಯಿಂದ 20,000 ಕೋಟಿ ರೂ. ಬಿಡುಗಡೆ
371ಜೆ ಸೆರ್ಪಡೆಯಾದಾಗಿನಿಂದ ಹೈಕ ಭಾಗಕ್ಕೆ ವಿಶೇಷ ಸೌಲಭ್ಯ ಕೊಡಲಾಗುತ್ತಿದೆ. 371ಜೆ ಜಾರಿ ಮಾಡಲು ಹೆಚ್ ಕೆ ಪಾಟೀಲ್ ನೇತೃತ್ವದ ಉಪ ಸಮಿತಿ ಮಾಡಲಾಗಿತ್ತು. ಉಪ ಸಮಿತಿ ವರದಿಯನ್ನ ಯತಾವತ್ತಾಗಿ ಜಾರಿ ಮಾಡಲಾಯಿತು. 371ಜೆಗಾಗಿ ಸಾವಿರಾರು ಜನ ಹೋರಾಟ ಮಾಡಿದರು ಧರ್ಮಸಿಂಗ್, ಖರ್ಗೆ ಸತತ ಪ್ರಯತ್ನದಿಂದ ಜಾರಿಯಾಯಿತು. ನಾವು ಧರ್ಮಸಿಂಗ್, ಖರ್ಗೆಯವರಿಗೆ ಅಭಿನಂದನೆ ಸಲ್ಲಿಸಲೇಬೇಕು. 371ಜೆ ಜಾರಿಯಾಗಿ 10 ವರ್ಷ ಆಗಿದೆ ಎಂದು ಹೇಳಿದರು. ಇದನ್ನೂ ಓದಿ: Iran Israel War | ನನ್ನ ಕರೆಗೆ ಸ್ಪಂದಿಸಿ ಧೈರ್ಯ ತುಂಬಿದ್ದು ʻಪಬ್ಲಿಕ್ ಟಿವಿʼ – ಧನ್ಯವಾದ ಹೇಳಿದ ಕನ್ನಡಿಗ
ಕಲಬುರಗಿ (Kalaburagi) ಕ್ಯಾಬಿನೆಟ್ ಮೀಟಿಂಗ್‌ನಲ್ಲಿ 57 ವಿಷಯದಲ್ಲಿ 47 ವಿಷಯಗಳು ಕಲ್ಯಾಣ ಕರ್ನಾಟಕಕ್ಕೆ ಸೇರಿದ್ದವು. ಸಭೆಯಲ್ಲಿ 11,770 ಕೋಟಿ ರೂ. ಮಂಜೂರಾತಿ ಕೊಟ್ಟೆವು. ನಂಜುಡಪ್ಪ ವರದಿ ಜಾರಿಯಿಂದ ಏನಾಗಿದೆ ಅನ್ನೋದರ ಅಧ್ಯಯನಕ್ಕೆ ಗೋವಿಂದರಾವ್ ಸಮಿತಿ ರಚನೆ ಮಾಡಿದ್ದೇವೆ. ವರದಿ ಬಂದ ಮೇಲೆ ಮತ್ತೆ ಜಾರಿ ಮಾಡುವ ಕೆಲಸ ಮಾಡುತ್ತೇವೆ. ಕೆಕೆಆರ್ ಡಿಬಿಗೆ ಈ ವರ್ಷ 5 ಸಾವಿರ ಕೋಟಿ ರೂ. ಮಂಜೂರು ಮಾಡಿದ್ದಾರೆ. ಇದು ಮತಕ್ಕೋಸ್ಕರ ಮಾಡಿಲ್ಲ. ಹಿಂದುಳಿದ ಭಾಗದ ಜನ ಮುಂದೆ ಬರಬೇಕು. ಈ ಭಾಗದ ಯುವಕರು ಉನ್ನತ ಹುದ್ದೆಗಳಿಗೆ ಏರಬೇಕು. ಭಾಗದಲ್ಲಿ 1.9 ಲಕ್ಷ ಹುದ್ದೆ ಗುರುತು ಮಾಡಿದ್ದೇವೆ. ಇದರಲ್ಲಿ 1.79 ಲಕ್ಷ ಭರ್ತಿ ಮಾಡಿದ್ದೇವೆ. ಉಳಿದ ಹುದ್ದೆ ಹಂತ ಹಂತವಾಗಿ ಭರ್ತಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಭಿನ್ನಮತ ಸ್ಫೋಟ – ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ ರಾಜೀನಾಮೆ