ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯನವರು ವಿರುಪಾಕ್ಷೇಶ್ವರ ದೇವಾಲಯಕ್ಕೆ ಹೋಗದೆ ವಾಪಸ್ಸು ಬಂದಿರುವುದರಿಂದ ಜನರಲ್ಲಿ ಹಲವಾರು ಪ್ರೆಶ್ನೆಗಳು ಹುಟ್ಟಿಸಿದ್ದು, ಚರ್ಚೆಗೀಡಾಗಿದೆ.
ಮೂಢ ನಂಬಿಕೆ, ಮೌಢ್ಯತೆ ವಿರುದ್ಧ ಗುಡುಗುವ ಸಿಎಂ ಅವರಿಗೆ ಮೌಢ್ಯತೆ ಕಾಡುತ್ತಿದೆಯಾ? ಮೂಢನಂಬಿಕೆ ವಿರುದ್ಧ ಕಾಯ್ದೆ ತರುವ ಸಿಎಂ ಅವರಿಗೆ ಭಯ ಶುರುವಾಯ್ತಾ? ಹಂಪಿ ಉತ್ಸವಕ್ಕೆ ಚಾಲನೆ ಕೊಟ್ಟ ಸಿಎಂ ವಿರೂಪಾಕ್ಷ ದೇವಾಲಯಕ್ಕೆ ಹೋಗಲಿಲ್ಲ ಯಾಕೆ? ಅಂತ ಹಲವಾರು ಪ್ರೆಶ್ನೆಗಳು ಇದೀಗ ಹುಟ್ಟಿಕೊಂಡಿವೆ.
ಶುಕ್ರವಾರದಿಂದ ಶುರುವಾಗಿರುವ ಐತಿಹಾಸಿಕ ಬಳ್ಳಾರಿಯ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯನವರು ಬಂದು ಕಾರ್ಯಕ್ರಮ ಉದ್ಘಾಟನೆ ಮಾಡಿದ್ರು. ಆದರೆ ಉದ್ಘಾಟನೆಯಾದ ಜಾಗದಿಂದ ಕೂಗಳತೆ ದೂರದಲ್ಲಿರೋ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಸಿಎಂ ಭೇಟಿ ನೀಡಿ ದೇವರ ದರ್ಶನವನ್ನ ಪಡೆಯಲಿಲ್ಲ.
ಕಳೆದ ನಾಲ್ಕು ವರ್ಷದಿಂದಲೂ ಹಂಪಿ ಉತ್ಸವ ಉದ್ಘಾಟನೆಗೆ ಆಗಮಿಸಿದ್ರೂ ಸಿಎಂ ಸಿದ್ದರಾಮಯ್ಯ ವಿರುಪಾಕ್ಷೇಶ್ವರನ ದರ್ಶನ ಪಡೆದಿಲ್ಲ. ಹಿಂದೆ ಹಣಕಾಸು ಸಚಿವರಾಗಿದ್ದ ವೇಳೆಯಲ್ಲೂ ಸಹ ಎರಡು ಬಾರಿ ಬಂದಿದ್ದಾಗಲೂ ದೇವರ ದರ್ಶನ ಪಡೆದಿರಲಿಲ್ಲ.
ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದಕ್ಕೆ ವಿಜಯನಗರ ಅರಸರ ಆರಾಧ್ಯದೈವ ವಿರುಪಾಕ್ಷನ ಶಾಪವೂ ಇತ್ತಂತೆ. ಜೊತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಹ ಶ್ರೀಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಮಾಡಿಸಿದ್ರು. ಆಮೇಲೆ ರೆಡ್ಡಿ ಅಧಿಕಾರ ಕಳೆದುಕೊಂಡು ಜೈಲು ಸೇರಿದ್ರು. ವಿರೂಪಾಕ್ಷೇಶ್ವರನ ದರ್ಶನ ಮಾಡಿದ್ರೆ ಅಧಿಕಾರ ಹೊಗುತ್ತೆ ಅನ್ನೋ ನಂಬಿಕೆ ಹಲವರಲ್ಲಿದ್ದು, ಸಿಎಂ ಕೂಡ ಅದೇ ಹಾದಿಯಲ್ಲಿ ಸಾಗ್ತಿದ್ದಾರೆ ಅಂತ ಜನ ಮಾತನಾಡಿಕೊಳ್ತಿದ್ದಾರೆ.