ಬೆಂಗಳೂರು: ಈ ಚಳವಳಿ ರಾಜಕೀಯ ಚಳವಳಿ ಅಲ್ಲ. ಇದು ರಾಜಕೀಯೇತರ ಚಳವಳಿ. ಕರ್ನಾಟಕ (Karnataka), ಕನ್ನಡಿಗರ ಹಿತ ಕಾಯಲು ಮಾಡುತ್ತಿರುವ ಪ್ರತಿಭಟನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಈ ಪ್ರತಿಭಟನೆ ಯಾವುದೇ ಪಕ್ಷದ ವಿರುದ್ಧ ಅಲ್ಲ. ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂಬ ಕಾರಣಕ್ಕೆ ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. ಇದನ್ನೂ ಓದಿ: ಕಲಬುರಗಿಯಲ್ಲಿ ದೇಗುಲ ದಂಗಲ್ – ಬಹುಮನಿ ಕೋಟೆಯಲ್ಲಿ ಸೋಮೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಆಗ್ರಹ
ಬಿಜೆಪಿಯಿಂದ ನಮಗೆ ಅನ್ಯಾಯ, ಕರ್ನಾಟಕದ ಜನರಿಗೆ ದ್ರೋಹ. ತೆರಿಗೆ ಇಳಿಕೆ ಆದ ಮೇಲೆ ನಮಗೆ 62,098 ಕೋಟಿ ರೂ. ಕಡಿಮೆಯಾಗಿದೆ. ಜಿಎಸ್‌ಟಿ ಅವೈಜ್ಞಾನಿಕ ಎಂದು ಹೇಳಿದ್ದೆವು. ವೈಜ್ಞಾನಿಕವಾಗಿ ಮಾಡಲು ನಾವು ಮನವಿ ಮಾಡಿದ್ದರೂ ಮಾಡಲಿಲ್ಲ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.
ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಾತನಾಡಿ, ನಿರ್ಮಲಾ ಸೀತಾರಾಮನ್ (Nirmala Sitharaman) ಮಾತು ಕೊಟ್ಟಂತೆ ನಡೆದುಕೊಂಡಿಲ್ಲ. 26 ಬಿಜೆಪಿ ಸಂಸದರು 26 ಎಂಪಿಗಳು ಬಾಯಿ ಬಿಟ್ಟಿಲ್ಲ. ಇಂದು ಮಾನ, ಮರ್ಯಾದೆ, ನಾಚಿಕೆ ಬಿಟ್ಟು ಬೆಂಗಳೂರಿನ ಗಾಂಧಿ ಪ್ರತಿಮೆ ಹತ್ತಿರ ಹೋಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೆ ಇಷ್ಟು ಮೋಸ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಕರ್ನಾಟಕದಿಂದ ಕೇಳಿದ್ದೆವು. ಅದು ಕೇಂದ್ರ ಸರ್ಕಾರಕ್ಕೆ ಕೇಳಿಸಲಿಲ್ಲ. ಆ ಕಾರಣಕ್ಕೆ ಇಲ್ಲಿ ಕೂಗಿ ಹೇಳಲು ಬಂದಿದ್ದೇವೆ ಎಂದರು.