ಬೆಂಗಳೂರು: ಕಬ್ಬು ಬೆಳೆಗಾರರ (Sugarcane Farmers) ಸಮಸ್ಯೆ ಸೇರಿ ರಾಜ್ಯದ ಹಲವು ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಚರ್ಚೆ ನಡೆಸಲಿದ್ದಾರೆ ಅಂತ ಸಚಿವ ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.
ನಾಳೆ ಸಿಎಂ ರಿಂದ ಪ್ರಧಾನಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಬ್ಬು ದರ ನಿಗದಿ ಮಾಡೋದು, FRP ನಿಗದಿ ಮಾಡೋದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರ 2024-25 ಮತ್ತು 2025-26ಕ್ಕೆ FRP, ದರ ನಿಗದಿ ಮಾಡಿದೆ. 3,550 ರೂ. ಕೇಂದ್ರ ನಿಗದಿ ಮಾಡಿದೆ. ಈಗ ನಮ್ಮ ರೈತರು ಹೆಚ್ಚು ಮಾಡಿಕೊಡಿ ಅಂತ ಕೇಳ್ತಿದ್ದಾರೆ. ಕಾರ್ಖಾನೆ ಅವರು ಜಾಸ್ತಿ ಕೊಡಬೇಕು. ಇಲ್ಲ ಸರ್ಕಾರ ಕೊಡಬೇಕು. ನಾವು ಹೇಳಿದ್ವಿ ಸರ್ಕಾರ ಕೊಡಲು ಬರೊಲ್ಲ ಅಂತ. ಆದರೂ ಕೂಡಾ ನಮ್ಮ ರೈತರ ಹಿತದೃಷ್ಟಿಯಿಂದ 50 ರೂ. ಪ್ರತಿ ಟನ್‌ಗೆ ಜಾಸ್ತಿ ಮಾಡ್ತೀವಿ ಅಂತ ಸಿಎಂ ಘೋಷಣೆ ಮಾಡಿದ್ದಾರೆ. 50 ರೂ. ಮಾಲೀಕರು ಕೊಡಬೇಕು ಅಂತ ಆಗಿದೆ. ಅದಕ್ಕೆ ಒಪ್ಪಿಕೊಂಡಿದ್ದಾರೆ. ಅಲ್ಲಿಗೆ 3,300 ರೂ. ಆಗುತ್ತದೆ ಎಂದರು. ಇದನ್ನೂ ಓದಿ: ಖರ್ಗೆ ಕೋಟೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಹೆಜ್ಜೆ – ಚಿತ್ತಾಪುರದಲ್ಲಿ ಪಥಸಂಚಲನ ಯಶಸ್ವಿ
ಇದಲ್ಲದೇ ಜಾಸ್ತಿ ಮಾಡಿಕೊಡಿ ಅಂತ ಕೇಂದ್ರಕ್ಕೆ ಮನವಿ ಮಾಡ್ತಾರೆ. ಇದರ ಜೊತೆ ಬೇರೆ ರಾಜ್ಯದಲ್ಲಿ ಶುಗರ್ ರಿಕವರಿ ದರದ ಮೇಲೆ ಮಾಡಿದ್ದಾರೆ. ಅದನ್ನ ಮಾಡಿಕೊಡಿ ಅಂತ ಪ್ರಧಾನಿಗಳನ್ನೇ ಕೇಳಬೇಕು. ಅದಕ್ಕೆ ಸಿಎಂ ಸಮಯ ಕೇಳಿದ್ರು. ಅದಕ್ಕೆ ಪಿಎಂ ಅವರು ಸಮಯ ಕೊಟ್ಟಿದ್ದಾರೆ. ಅದರ ಬಗ್ಗೆ ಚರ್ಚೆ ಮಾಡ್ತಾರೆ. ಕಬ್ಬು ಜೊತೆಗೆ ನೀರಾವರಿ, ಸುಪ್ರೀಂಕೋರ್ಟ್ ನಲ್ಲಿ ಮೇಕೆದಾಟಿಗೆ ಅನುಮತಿ ಕೊಟ್ಟಿದ್ದಾರೆ. ಅದರ ಬಗ್ಗೆಯೂ ಚರ್ಚೆ ಮಾಡಬಹುದು ಎಂದು ತಿಳಿಸಿದರು. ಇದನ್ನೂ ಓದಿ: ನಾಳೆ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ – 5 ದಿನ ನಡೆಯಲಿದೆ ಕಡಲೆಕಾಯಿ ಹಬ್ಬ

