ವಿಜಯಪುರ: ಮೈಸೂರಿನ ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಲ್ಲಿ ಸಿದ್ದರಾಮಯ್ಯ ಗೆಲುವು ನಿಶ್ಚಿತ ಅಂತ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧೆ ಮಾಡ್ತೀನಿ ಅಂತಾ ಹೇಳಿಲ್ಲ. ನಾವು ಅವರನ್ನು ಒತ್ತಾಯ ಮಾಡಿದ್ವಿ. ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ನಿಂತರೆ ಉತ್ತರ ಕರ್ನಾಟಕ ಅಭ್ಯರ್ಥಿಗಳಿಗೆ ಬಲ ಬರುತ್ತದೆ ಒತ್ತಾಯ ಮಾಡಿದ್ವಿ ಎಂದರು.
Advertisement
ಎರಡು ಕಡೆ ನಿಂತರೆ ಅಪಪ್ರಚಾರ ಮಾಡೋರು ತುಂಬಾ ಜನ ಇದ್ದಾರೆ. ಅದಕ್ಕೆ ಹೈಕಮಾಂಡ್ ನಿರ್ಧಾರ ಮಾಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ನೀಡಿದೆ ಎಂದರು. ನಾಗಠಾಣ ಹಾಲಿ ಶಾಸಕ ರಾಜು ಆಲಗೂರು ಸ್ಪರ್ಧೆ ಮಾಡಲ್ಲ ಅಂತಾ ತಿಳಿಸಿದರು.
Advertisement
ಹೈ ಕಮಾಂಡ್ ನವರು ರಾಜು ಆಲಗೂರು ಅವರೇ ಸ್ಪರ್ಧೆ ಮಾಡಲು ಹೇಳಿದ್ದಾರೆ. ಆದ್ದರಿಂದಲೇ ಸಿಂದಗಿ ಹಾಗೂ ನಾಗಠಾಣ ಪೆಂಡಿಗ್ ಇಡಲಾಗಿದೆ. ಅಲ್ಲದೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಪರಮೇಶ್ವರ್ ಹಾಗೂ ನಾನು ಸೇರಿ ಒಗ್ಗಟ್ಟಿನ ನಿರ್ಧಾರದಿಂದ ಟಿಕೆಟ್ ಬಿಡುಗಡೆ ಮಾಡಿದ್ದೇವೆ. ಹೀಗಾಗಿ ಟಿಕೆಟ್ ಘೋಷಣೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಸ್ಪಷ್ಟ ಪಡಿಸಿದರು.