ಮೈಸೂರು: ನನ್ನನ್ನು ದೇವೇಗೌಡರು (Devegowda) ಸೊಕ್ಕು ಮುರಿಯುತ್ತೇನೆ. ಗರ್ವಭಂಗ ಮಾಡುತ್ತೇನೆ ಎಂದು ಹೇಳಿದ್ದು ಸರಿಯೇ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶ್ನಿಸಿದ್ದಾರೆ.
ಚನ್ನಪಟ್ಟಣ ಚುನಾವಣಾ ಪ್ರಚಾರದಲ್ಲಿ ಜಮೀರ್ ಅಹ್ಮದ್ (Zameer Ahmed) ಅವರು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಕರಿಯ ಎಂದು ಕರೆದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸಿಎಂ ಈ ಉತ್ತರ ನೀಡಿದ್ದಾರೆ.
- Advertisement -
ಜಮೀರ್ ಮತ್ತು ಕುಮಾರಸ್ವಾಮಿ ಥಿಕ್ ಅಂಡ್ ಥ್ಹೀನ್ ಫ್ರೆಂಡ್ಸ್. ಅವರವರ ನಡುವೆ ಏನೇನೋ ನಡೆಯುತ್ತಿರುತ್ತದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜಮೀರ್ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದೆಲ್ಲವೂ ಉಪಚುನಾವಣೆಯ (By Election) ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಿಎಂ ತಿಳಿಸಿದರು.
- Advertisement -
- Advertisement -
ಅಬಕಾರಿಯಲ್ಲಿ ಒಂದೇ ಒಂದು ಪೈಸಾ ಭಷ್ಟಾಚಾರ ಮಾಡಿದರೆ ನಾನು ರಾಜಕೀಯ ಬಿಡುತ್ತೇನೆ. ಬಿಜೆಪಿ ಅವಧಿಯಲ್ಲಿನ ಕೋವಿಡ್ ವೇಳೆ ನಡೆದ ಭ್ರಷ್ಟಾಚಾರ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ? ಮೋದಿಯವರು (PM Narendra Modi) ಪ್ರಧಾನಿ ಸ್ಥಾನ ಬಿಡುತ್ತಾರಾ ಎಂದು ಪ್ರಶ್ನಿಸಿ ತಿರುಗೇಟು ನೀಡಿದರು. ಇದನ್ನೂ ಓದಿ: ಹಿಂದೂಗಳ ಪರವಾಗಿರುವವರಿಗೆ ಮತ ಹಾಕಿ, ಇಲ್ಲದಿದ್ದರೆ ಪಾಕಿಸ್ತಾನ, ಬಾಂಗ್ಲಾದೇಶದ ಸ್ಥಿತಿ ಬರುತ್ತೆ – ಈಶ್ವರಪ್ಪ
- Advertisement -
ಪ್ರಧಾನಿ ಮೋದಿ ಅವರಿಗೆ ಕರ್ನಾಟಕ ಮತ್ತು ಸಿದ್ದರಾಮಯ್ಯ ಇಬ್ಬರು ಟಾರ್ಗೆಟ್. ಕರ್ನಾಟಕ ಅತಿ ದೊಡ್ಡ ರಾಜ್ಯವಾಗಿದ್ದು ಇಲ್ಲಿ ನಾವು 136 ಸ್ಥಾನ ಗೆದಿದ್ದೇವೆ. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ನಮ್ಮಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ ಎಂದರು.