ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಮುಖ್ಯಮಂತ್ರಿ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದ ಬೆನ್ನಲ್ಲೇ ‘ಕೈ’ ನಾಯಕರ ದಂಡು ದೆಹಲಿ ಪರೇಡ್ ಶುರು ಮಾಡಿದೆ. ನಾಳೆ ವೋಟ್‌ಚೋರಿಗೆ ಸಂಬಂಧಿಸಿದಂತೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದ ನೆಪದಲ್ಲೇ ‘ಕೈ’ ನಾಯಕರು ದೆಹಲಿಗೆ ತೆರಳುತ್ತಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಗಳಿದೆ.
ಬೆಳಗಾವಿ ಅಧಿವೇಶನದ ಹೊತ್ತಲ್ಲೇ ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಶುರುವಾಗಿದೆ. ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿ ಕದನ ವಿರಾಮ ಘೋಷಿಸಿದ್ರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇಬ್ಬಣ ನಾಯಕರು ಪದೇ ಪದೇ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಕೊಡುತ್ತಲೇ ಇದ್ದಾರೆ. ಈ ಚರ್ಚೆಗಳ ನಡುವೆ ಮತ್ತೆ ರಾಜ್ಯ ಕಾಂಗ್ರೆಸ್ ನಾಯಕರು ಮತ್ತೊಂದು ಹಂತದ ದೆಹಲಿ ಪರೇಡ್‌ಗೆ ಸಜ್ಜಾಗಿದ್ದಾರೆ. ಇದನ್ನೂ ಓದಿ: ರಂಗನತಿಟ್ಟು ಪಕ್ಷಿಧಾಮದ ಕಾರ್ಮಿಕರಿಗೆ ಧ್ರುವ ಸಹಾಯಹಸ್ತ – ರಿಯಲ್ ಹೀರೋ ಅಂದ್ರು ಫ್ಯಾನ್ಸ್
ಹೌದು, ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ವೋಟ್‌ಚೋರಿ ಅಭಿಯಾನದ ಭಾಗವಾಗಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಭಾಗಿಯಾಗಲು ಇಪ್ಪತ್ತಕ್ಕೂ ಹೆಚ್ಚು ಅಧಿಕ ಸಚಿವರು, ನೂರಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಬಣ ರಾಜಕೀಯ ಹೊತ್ತಲ್ಲೇ ಶಾಸಕರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಮಾವೇಶ ನೆಪದಲ್ಲೇ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ನಾಯಕತ್ವ ಬದಲಾವಣೆ ಬಗ್ಗೆ ಕ್ಲೈಮ್ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಮತಗಳ್ಳತನ ನಡೆದಿರುವುದು ಸತ್ಯ, ಇದರ ವಿರುದ್ಧ ಸೂಕ್ತ ಕ್ರಮ: ಡಿಕೆಶಿ
ಇನ್ನು ಈ ಬಗ್ಗೆ ಡಿಸಿಎಂ ಡಿಕೆಶಿ (DK Shivakumar) ಪ್ರತಿಕ್ರಿಯಿಸಿ, ನಾಳೆ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದಿಂದ ಒಂದು ಸಾವಿರಕ್ಕೂ ಹೆಚ್ಚು ಜನ ಕಾರ್ಯಕರ್ತರು ಹೋಗಿದ್ದಾರೆ. ರಾಜ್ಯದ ಎಲ್ಲಾ ಕಡೆಯಿಂದ ಮುಖಂಡರು, 100ಕ್ಕೂ ಹೆಚ್ಚು ಶಾಸಕರು, ಸಚಿವರು ಹೋಗಿದ್ದಾರೆ. ನಾವು ಕೂಡ ಭಾಗವಹಿಸುತ್ತೇವೆ. ಶಕ್ತಿ ತುಂಬಬೇಕು, ಚುನಾವಣೆಯಲ್ಲಿ ಸೋತಿರಬಹುದು, ಆದ್ರೆ ಜಾಗೃತಿ ಮೂಡಿಸಬೇಕು. ನಮ್ಮ ನಾಯಕ ರಾಹುಲ್ ಗಾಂಧಿ, ಖರ್ಗೆ ಅವರಿಗೆ ಶಕ್ತಿ ತುಂಬೋದಕ್ಕೆ ಹೋಗುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ವಿಮಾನದಲ್ಲೇ ಚಿಕಿತ್ಸೆ ನೀಡಿ ಅಮೆರಿಕ ಯುವತಿಯ ಜೀವ ಉಳಿಸಿದ ಅಂಜಲಿ ನಿಂಬಾಳ್ಕರ್
ಈ ಮಧ್ಯೆ, ಸಿಎಂ (Siddaramaiah), ಡಿಸಿಎಂ ಕೂಡ ದೆಹಲಿ ಪ್ರಯಾಣ ಬೆಳೆಸುತ್ತಿದ್ದಾರೆ. ನಾಳಿನ ಸಮಾವೇಶಕ್ಕೂ ಮುನ್ನ ಹೈಕಮಾಂಡ್ ನಾಯಕರು ಮಹತ್ವದ ಸಭೆ ಕರೆದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಎಲ್ಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ಹಾಗೂ ಶಾಸಕಾಂಗ ಪಕ್ಷದ ನಾಯಕರು, ವಿರೋಧ ಪಕ್ಷದ ನಾಯಕರು ಭಾಗಿಯಾಗಲಿದ್ದಾರೆ. ಇದೇ ಸಂದರ್ಭದಲ್ಲಿ ಸಿಎಂ, ಡಿಸಿಎಂ ಒಟ್ಟಿಗೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಇದನ್ನೂ ಓದಿ: ವೋಟ್ ಚೋರ್, ಗಡ್ಡಿ ಛೋಡ್ – ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ
ಇನ್ನು, ಸಮಾವೇಶ ನೆಪದಲ್ಲಿ ದೆಹಲಿ ಪರೇಡ್ ನಡೆಸುತ್ತಿರುವ ನಾಯಕರು ಅವಕಾಶ ಸಿಕ್ಕರೆ ಖರ್ಗೆ ಭೇಟಿಯಾಗಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಅವಕಾಶ ಸಿಕ್ಕರೆ ಎಐಸಿಸಿ ಅಧ್ಯಕ್ಷ ಖರ್ಗೆಯವರನ್ನು ಭೇಟಿಯಾಗಿ ತಮ್ಮ ತಮ್ಮ ನಾಯಕರ ಪರ ನಾಯಕತ್ವ ಕ್ಲೈಮ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದ್ರೆ ದೆಹಲಿ ಪರೇಡ್ ನಡೆಸಿರೋ ನಾಯಕರಿಗೆ ಖರ್ಗೆ ಭೇಟಿಗೆ ಅವಕಾಶ ಕೊಡ್ತಾರಾ? ಇಲ್ವಾ ಅನ್ನೋ ಪ್ರಶ್ನೆ ಮೂಡಿದೆ. ಇದನ್ನೂ ಓದಿ: 45 ವರ್ಷಗಳ ಎಲ್‌ಡಿಎಫ್ ಆಡಳಿತ ಅಂತ್ಯ – ತಿರುವನಂತಪುರಂ ಪಾಲಿಕೆಯಲ್ಲಿ ಬಿಜೆಪಿ ಕಮಾಲ್
ಒಟ್ಟಾರೆ, ಸಮಾವೇಶಕ್ಕೂ ಮುನ್ನಾ ಹೈಕಮಾಂಡ್ ನಾಯಕರನ್ನು ಸಿಎಂ-ಡಿಸಿಎಂ ಭೇಟಿ ಮಾಡುತ್ತಿದ್ದು, ಕುತೂಹಲ ಮೂಡಿಸಿದೆ. ಸಿಎಂ ಕುರ್ಚಿ ವಿಚಾರ ಚರ್ಚೆಯಾಗದಿದ್ದರೂ, ಬೇರೆ ಬೇರೆ ನಾಯಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನಗಳು ನಡೆಯಬಹುದು ಎನ್ನಲಾಗಿದೆ. ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗಲಿ ಅನ್ನೋದು ನನ್ನ ವೈಯಕ್ತಿಕ ಆಸೆ – ವಿ. ಸೋಮಣ್ಣ

