ಬೆಂಗಳೂರು: ನಂದಿಬೆಟ್ಟದಲ್ಲಿ ನಡೆದ ಸಂಪುಟ ಸಭೆ (Nandi Hills Cabinet) ಸುದ್ದಿಯಾಗುವ ಬದಲು ಸಿಎಂ, ಡಿಸಿಎಂ ಸುದ್ದಿ ಆಗಿದ್ದಾರೆ. 5 ವರ್ಷ ನಾನೇ ಸಿಎಂ ಎಂಬ ಸಂದೇಶವನ್ನು ಸಿದ್ದರಾಮಯ್ಯ (Siddaramaiah) ಪಾಸ್ ಮಾಡಿದ್ರೆ, ನೋ ಆದರ್ ಆಪ್ಶನ್ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ (DK Shivakumar) ರಿವರ್ಸ್ ಗೇಮ್ ಆಡಲು ಶುರು ಮಾಡಿದ್ದಾರೆ.
ಹೌದು. ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಬಿರುಗಾಳಿ ಜೋರಾಗಿ ಬೀಸುತ್ತಿದೆ. ನಾಯಕತ್ವ ಬದಲಾವಣೆ ಬಗ್ಗೆ ಡಿಕೆಶಿ ಬೆಂಬಲಿಗರು ಹೇಳಿಕೆ ಕೊಡುತ್ತಿರುವ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ರಾಜ್ಯದಲ್ಲಿರುವಾಗಲೇ ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಂದೇಶ ರವಾನಿಸಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಕಲ್ಲು ಬಂಡೆ ತರಹ 5 ವರ್ಷ ಸರ್ಕಾರ ಸುಭದ್ರವಾಗಿರಲಿದೆ ಎಂದಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮೈಸೂರಿನಲ್ಲಿ ಡಿಕೆಶಿ ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದ ಸಿಎಂ, ಇವತ್ತು 5 ವರ್ಷ ನಾನೇ ಸಿಎಂ ಎಂದಿರೋದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ: 11ನೇ ಕ್ಲಾಸ್ ವಿದ್ಯಾರ್ಥಿಯ ಜೊತೆ 5 ಸ್ಟಾರ್ ಹೋಟೆಲಿನಲ್ಲಿ ಸೆಕ್ಸ್- ಮುಂಬೈ ಶಿಕ್ಷಕಿ ಅರೆಸ್ಟ್
ಮುಂದಿನ ಮೂರು ವರ್ಷವೂ ನಾನೇ ಮುಖ್ಯಮಂತ್ರಿ, ನಮ್ಮದೇ ಸರ್ಕಾರ ಇರುತ್ತೆ.#ಗ್ಯಾರಂಟಿಸರ್ಕಾರ #KarnatakaPolitics pic.twitter.com/XogGVcLf4K
— Siddaramaiah (@siddaramaiah) July 2, 2025
ಗದ್ದುಗೆ ಏರುವ ಕನಸು ಕಾಣುತ್ತಿರುವ ಡಿಸಿಎಂ ಡಿಕೆ ಶಿವಕುಮಾರ್, ಐ ಹ್ಯಾವ್ ನೋ ಆಪ್ಷನ್ ಎನ್ನುವ ಮೂಲಕ ಸಿಎಂ ಆಸೆ ಕೈಬಿಟ್ಟಂತೆ ಕಾಣುತ್ತಿದೆ. ನನಗೆ ಬೇರೆ ಆಯ್ಕೆ ಇಲ್ಲ. ಹೈಕಮಾಂಡ್ ಏನ್ ಹೇಳುತ್ತದೋ ಅದನ್ನು ಕೇಳುತ್ತೇನೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಹೇಳಿಕೆ ಬೆನ್ನಲ್ಲೇ ಮತ್ತೆ ಟ್ವೀಟ್ ಮಾಡಿದ ಸಿದ್ದರಾಮಯ್ಯ, 5 ವರ್ಷವೂ ನಾನೇ ಸಿಎಂ. ಅನುಮಾನ ಬೇಡ. ಬಿಜೆಪಿ ಹೇಳಿದಂತೆ ಸರ್ಕಾರ ನಡೆಯುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಗೇಮ್ ಪ್ಲ್ಯಾನ್ ಏನು?
ನಾವಿಬ್ಬರು ಚೆನ್ನಾಗಿದ್ದೇವೆ ಡಿಕೆಶಿ ಕೈ ಎತ್ತಿ ಹೈಕಮಾಂಡ್‌ಗೆ ಸಂದೇಶ
5 ವರ್ಷ ನಾನೇ ಸಿಎಂ ಎನ್ನುವ ಮೂಲಕ ಹೊಸ ದಾಳ
ನಾಯಕತ್ವ ಬದಲಾಗಬೇಕೆಂಬ ಡಿಕೆ ಆಪ್ತರ ಬೇಡಿಕೆಗೆ ಠಕ್ಕರ್
ಪವರ್ ಶೇರಿಂಗ್ ಅಷ್ಟು ಸುಲಭವಲ್ಲ ಎಂಬ ಸಂದೇಶ ರವಾನೆ ಇದನ್ನೂ ಓದಿ: ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು – ಸಂಪುಟ ಸಭೆಯಲ್ಲಿ ಹಲವು ಐತಿಹಾಸಿಕ ನಿರ್ಣಯ
ಡಿಕೆಶಿ ಗೇಮ್ ಪ್ಲ್ಯಾನ್ ಏನು?
ತೆರೆ ಮುಂದೆ ಅಸಹಾಯಕತೆ; ಒಳಗೊಳಗೆ ತಂತ್ರಗಾರಿಕೆ
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂಬ ಸಂದೇಶ ರವಾನೆ
ಮತ್ತೊಮ್ಮೆ ನಾನು ಪಕ್ಷ ನಿಷ್ಠ ಅಂತ ಡಿಕೆ ಗೇಮ್
ನಾಯಕತ್ವ ಬದಲಾವಣೆ ಸಾಧ್ಯವೇ?
50-50 ಫಾರ್ಮುಲಾ ರೂಪಿಸಿದ್ದರೆ ಅದಕ್ಕೆ ಈಗಿನಿಂದಲೇ ಸಿದ್ಧತೆ
ಶಾಸಕರುಗಳ ಅಭಿಪ್ರಾಯ ಸಂಗ್ರಹಿಸಬಹುದು
ಬಿಹಾರ ಅಸೆಂಬ್ಲಿ ಎಲೆಕ್ಷನ್ ಬಳಿಕ ಕಾರ್ಯರೂಪಕ್ಕೆ ತರಬಹುದು
ಮುಂದಿನ ನವೆಂಬರ್ ನಂತರ ಜಾರಿಗೊಳಿಸಬಹುದು